ಈ ಪುಟವನ್ನು ಪ್ರಕಟಿಸಲಾಗಿದೆ

೯೧

ಚತುರ್ಥಾಶ್ವಾಸಂ

     ಕಂ||ಧಾತ್ರಿ ಪಳಿವಂತು ತನ್ನಂ
          ಧಾತ್ರೀಜನಮಡಸಿ ಪಿಡಿದು ಪರಿಭವಿಸುವುದುಂ||
          ಮಿತ್ರಂ ಶಲಭಕ್ಕೆನೆ ಮುನಿ
          ನೇತ್ರೇಂದ್ರಿಯ ಲೋಭದಿಂದಮಂದಘವಟ್ಟಂ||೮೫||

     ಆಗಳಾ ಕಳಕಳಮಂ ಕೇಳ್ದು--

      ಕಂ|| ಕಡಿತಲೆಯಂ ತೂಗುತ್ತು೦
            ಕಡುಗಲಿಗಳ್ಮುಟ್ಟೆ ಬರ್ಪುದುಂ ಭಯರಸದಿ೦||
            ನಡುಗುತ್ತುಂ ನಾರದಮುನಿ
            ಕುಡುಮಿ೦ಚಿನ ಗೊಂಚಲ೦ತೆ ಗಗನಕ್ಕೊಗೆದಂ||೮೬||

      ಅ೦ತು ಪೊಳೆದು ಪಾರಿ--

ಶಾ|| ಪಿಂದಂ ಬೆನ್ದಗುಳ್ದಪ್ಪರೆಂದು ಪೆರಗಂ ನೋಡುತ್ತುಮೋಡುತ್ತುಮೆ|
     ಯ್ತಂದಂ ಗಾಳಿಗೆರಂಕೆ ಮೂಡಿದವೊಲಾಕಾಶಂಬರಂ ನೀುಳ್ದುದಂ||
     ಕುಂದೇಂದು ಪ್ರಭೆಯಂ ಮನಂಗೊಳಿಪುದಂ ವಿದ್ಯಾಧರೀ ಲೋಚನಾ|
     ನಂದಸ್ಯಂದಿ ತಟೀ ವಿಲಾಸ ವನಮಂ ಕೈಲಾಸಮಂ ನಾರದಂ||೮೭||

     ಅ೦ತಾ ನಗಮನೆಯ್ದಿ ಸಾನು ನಂದನ ಲತಾಮಂದಿರದೊಳಗಣಿಂದುಕಾಂತ
ಶಿಲಾತಲದೊಳ್ ವಿಶ್ರಮಿಸಿ ಮನೋವಿಷಾದಮುಮಂ ಗಗನಾಧ್ವಖೇದಮುಮಂ
ತಳೆದು ತನ್ನೊಳಿಂತೆಂದಂ--

     ಕಂ||ಖೇದಮನೆನಗಿನಿತಂ ಸಂ
          ಪಾದಿಸಿದಾ ಕನ್ನೆಗಳವಿಗಳಿದಳಲಂ ಸಂ||
          ಪಾದಿಸುವೆನೆಂದು ಪರಪೀ
          ಡಾ ದುಶ್ಚರಿತಕ್ಕೆ ನಾರದಂ ಬಗೆದಂದಂ||೮೮||

     ಅ೦ತು ಬಗೆದಂದು--

ಉ|| ನೂಲ ಪವಣ್ಪವಣ್ಗೆಬರೆ ನಿಮ್ನ ಘನೋನ್ನತಮಂ ಪ್ರದೇಶಮಂ|
     ಪೋಲಿಸಿ ನಾರದಂ ವಿಷಮ ಚಿತ್ರ ವಿಚಿತ್ರ ಕಲಾ ವಿಶಾರದ೦||


೧. ಗಳಲನದವಳಲ೦. ಕ. ಖ. ಗ. ಘ.
೨. ವಣ್ಗೆ ಕಣ್ಗೆ, ಕ. ಗ. ಘ.'
೩. ಪಾಲಿಸಿ. ಖ. ಗ. ಘ.