ಈ ಪುಟವನ್ನು ಪ್ರಕಟಿಸಲಾಗಿದೆ

೯೨

ರಾಮಚಂದ್ರ ಚರಿತಪುರಾಣಂ

     ಬಾಲೆಯ ಮುದ್ದುಗೆಯ್ತಮುಮನಾಕೆಯ ಸುಂದರ ರೂಪುಮಂ ಮಹಾ|
     ಲೀಲೆಯುಮಂ ದುಕೂಲ ಪಟಲೊಳ್ ಬರೆದಂ ಪ್ರತಿಬಿಂಬಮೆಂಬಿನಂ||೮೯||

     ಅ೦ತು ಪರವಿದ್ದ ಪರಿಣತಿಯಂ ಮೆಳಿದಾಪಟಮಂ ವಿದ್ಯಾಧರರಾಜಧಾನಿ
ಯಪ್ಪ ರಥನೂಪುರಚಕ್ರವಾಳಪುರದ ಪೊರವೊಳಿಲ ವಿನೋದ ವನದೊಳಗಣ ಮಣಿ
ಭವನದೊಳಗೆ ನೇರಿ ಪೋಪುದುಮಿತ್ತಲ್‌--

ಮ|| ಕೆಲಬರ್ ಖೇಚರ ರಾಜಕರ್‌ ಬಳಸೆಯುಂ ಕೇಳೀವನ ಸ್ಥಾನದೊಳ್|
      ಚಲನ ನ್ಯಾಸ ವಿಲಾಸಮಂ ಮೆರೆದು ದೇಹಚ್ಛಾಯೆಯುಂ ರತ್ನಕುಂ||
      ಡಲ ಭೂಷಾ ರುಚಿಯುಂ ಪಳಂಚೆ ದೆಸೆಯಂ ಸೌಂದರ್ಯದಿಂ ಮನ್ಮಥಂ||
      ಗಲಗಿಕ್ಕಲ್ ನಡೆವಂತೆ ಮಂದಗತಿಯಿಂ ಬಂದಂ ಪ್ರಭಾಮಂಡಲಂ||೯೦||

      ಅ೦ತು ಬರುತ್ತುಮಾನಿಕೇತನದೊಳಿರ್ದ ಚಿತ್ರಪಟಮಂ ನೋಡಿ---
      
      ಕಂ||ಸಮುದಾಯಶೋಭೆ ವರ್ಣ
           ಕ್ರಮದಿಂ ಪ್ರತ್ಯೇಕಶೋಭೆ ಚೆಲ್ವಿಂ ನಯನ||
           ಕ್ಕಮರ್ದ೦ ಮುಂದಿಡೆ ಖೇಚರ
           ನೆಮೆಯಿಕ್ಕದೆ ಬಯಸಿನೋಡಿ ಬರೆಪದ ಪೆಣ್ಣಂ||೯೧||

ಮ || ಅನುರಾಗಂ ತನಗಾಗೆ ಕಂಡನಿತರಿಂದಾವಿದ್ಧಮಂ ತನ್ನ ಮು|
       ನ್ನಿನ ಜನ್ಮಾಂತರದಳ್ಕಿರಂ ಪೊಸಯಿಪಂತಾಲೋಕಿಸುತ್ತಿರ್ಪುದುಂ||
       ನನೆಯ೦ಬಿಂದಿಸೆ ನಿರ್ದಯಂ ಮನಸಿಜಂ ಕರ್ಣಾ೦ತ ವಿಶ್ರಾಂತಲೋ|
       ಚನ ಯುಗ್ಮಂ ನಸುಮುಚ್ಚೆ ಮುಚ್ಚೆಗೊಳಗಾಗಿರ್ದ೦ ಪ್ರಭಾಮಂಡಲಂ||೯೨||

       ಕಂ||ಬರೆದುರಗಲೇಖೆ ಮೂರ್ಛಾ
            ಪರಿಣತಿಯಂ ಮಂತ್ರಶಕ್ತಿಯಿಂ ಪುಟ್ಟಪವೋಲ್||
            ಬರೆಪದ ಕನ್ನೆ ಭವಾಂತರ
            ಪರಿಚಯದಿಂ ಮೋಹಮೂರ್ಛೆಯಂ ಪುಟ್ಟಿಸಿದಳ್||೯೩||

            ಅದನಾತನ ತಂದೆಯಪ್ಪಿಂದುಗತಿ ಕೇಳ್ದು ಸಂಭ್ರಮದಿಂ ಬಂದು ಶೀತಲ ಕ್ರಿಯೆಗಳನೊಡರ್ಚೆ--


1. ನೆರಪಿ. ೩. ಗ. ಘ.