ಈ ಪುಟವನ್ನು ಪ್ರಕಟಿಸಲಾಗಿದೆ



ಪ೦ಪರಾಮಾಯಣದ ಕಥೆ

3

ಗತಿಯೆಂದು ಗೋಳಿಡುತ್ತಿರುವಲ್ಲಿ, ತನ್ನರಸಿಯ ಗರ್ಭದಲ್ಲಿರುವ ಮಗುವೇ ಅವರನ್ನು ಸಲಹುವನೆಂದು ಎಲ್ಲರನ್ನೂ ಸಮಾಧಾನಪಡಿಸಿ ತಾನು ದೀಕ್ಷೆಗೊಂಡನು. ಕಾಲಾನು ಕ್ರಮದಲ್ಲಿ ಸಹದೇವಿಯು ಹೆಣ್ಣು ಹುಲಿಯಾಗಿ ಹುಟ್ಟಿ ಈ ಮುನಿಗಳಿಬ್ಬರೂ ಅಡವಿ ಯಲ್ಲಿ ಹೋಗುತ್ತಿರುವಾಗ ಅವರ ಮೇಲ್ವಿದ್ದು ಅವರನ್ನು ಕೊಂದಳು.
ಇತ್ತ, ಸುಕೌಶಲನ ಮಗನಾದ ಹಿರಣ್ಯಗರ್ಭನು ವೈಭವದಿಂದ ರಾಜ್ಯಭಾರ ಮಾಡಿ ಅ೦ತರಿಸಿದನಂತರ ಅವನ ಮಗನಾದ ನಹುಷನೂ ತರುವಾಯ ಅವನ ವಂಶ ದವರಾದ ಸಂವಾಸ, ಸಿಂಹರಥ, ಚತುರುಖ, ಹೇಮರಥ, ಭಾನುರಥ, ಮಯ, ಮಾಂಧಾತ್ಮ, ವೀರಸೇನ, ಕಮಲಬ೦ಧು, ವಸನ್ನತಿಲಕ, ಕುಬೇರದತ್ತ, ಮೈ ಗಾರಿ ದಮನ, ದ್ವಿಪರಥ, ಹಿರಣ್ಯಕಶಿಪು, ಅರ್ಕರಥ, ದಿಲೀಪ, ರಘುವೀರ ಮೊದಲಾದ ಹಲವರು ದೊರೆಗಳು ಅನುಕ್ರಮವಾಗಿ ರಾಜ್ಯಭಾರಮಾಡಿದರು. ಅವರಲ್ಲಿ ಅನರಣ್ಯ ನೆಂಬರಸು ಬಹಳ ಪ್ರಖ್ಯಾ ತನು. ಈತನಿಗೆ ಅನಂತರಥ ದಶರಥರೆಂಬ ಇಬ್ಬರು ಮಕ್ಕಳು ಹುಟ್ಟಿದರು. ಅನರಣ್ಯನು ಧರ್ಮಾರ್ಥ ವಿರುದ್ದವಾಗದಂತೆ ವಿಷಯಸುಖ ವನ್ನನುಭವಿಸುತ್ತಿರುವಲ್ಲಿ, ಒ೦ದಾನೊಂದು ದಿನ ಬಹಳ ಬಲಶಾಲಿಯಾದ ಮಾಹಿ ಪ್ರತೀ ವಲ್ಲಭನು ದಶಾನನನೊಡನೆ ಕಾದಿ ಸೋತನೆಂದು ಕೇಳಿ ತಾನು ದೀಕ್ಷೆ ಪಡೆ ಯುವೆನೆಂದು ನಿಶ್ಚಯಿಸಲು, ಅವನ ದೊಡ್ಡ ಮಗನಾದ ಅನಂತರಥನು ರಾಜ್ಯವನ್ನು ವಹಿಸುವುದಕ್ಕೊಡಂಬಡದೆ ತಾನೂ ದೀಕ್ಷೆಗೊಳ್ಳಲುದ್ಯುಕ್ತನಾದನು. ಇದನ್ನು ಕಂಡು ಅನರಣ್ಯನು ಒಂದು ತಿಂಗಳ ಮಗುವಾದ ದಶರಥನಿಗೆ ಪಟ್ಟವನ್ನು ಕಟ್ಟಿ ತಾನೂ ತನ್ನ ಹಿರಿಯಮಗನೂ ಅಭಯಘೋಷ ಭಟ್ಟಾರಕರ ಪಾದಗಳೆಡೆಯಲ್ಲಿ ದೀಕ್ಷೆಗೊಂಡರು.


ಆಶ್ವಾಸ ೩-ದಶರಥನ ಮಕ್ಕಳು
ದಶರಥನು ಪ್ರವರ್ಧಮಾನನಾಗಿ ಧರ್ಮದಿಂದಲೂ ಶೌಡ್ಯದಿಂದಲೂ ರಾಜ್ಯ ಪರಿಪಾಲನೆಮಾಡುತ್ತ ಅಪರಾಜಿತೆ, ಸುಮಿತ್ರೆ, ಸುಪ್ರಭೆ ಎ೦ಬ ಮೂವರು ಪಟ್ಟ ಮಹಿಷಿಯರೊಡನೆ ಸುಖದಿಂದಿದ್ದನು. ಒ೦ದು ದಿನ ಆತನ ಸಭೆಗೆ ನಾರದನು ಬಂದು ಆತನೊಡನೆ ಏಕಾಂತವಾಗಿ ಹೀಗೆ ಹೇಳಿದನು : “ಅಯ್ಯಾ! ನಾನು ಲಂಕೆಯಲ್ಲಿರುವ ಶಾಂತಜಿನೇಶ್ವರನನ್ನು ಪೂಜಿಸುವುದಕ್ಕಾಗಿ ಹೋಗಿದ್ದೆನು. ಅಲ್ಲಿ ರಾವಣನರಮನೆಯಲ್ಲಿ ನಡೆದ ವೃತ್ತಾಂತವನ್ನು ನಿನಗೆ ಹೇಳುವೆನು ಕೇಳು:- ರಾವಣನು ಜಾನಕಿಯ ನಿಮಿತ್ತ ವಾಗಿ ಯುದ್ಧ ಮಾಡಿ ದಾಶರಥಿಯ ಕೈಯಲ್ಲಿ ಮರಣವನ್ನು ಹೊಂದುವನೆಂಬ ವಿಷಯ ವನ್ನು ವಿಭೀಷಣನು ತನ್ನ ಜ್ಯೋತಿಷ್ಯನ ಮೂಲಕ ತಿಳಿದು ದಾಶರಥಿಯೂ ಜಾನಕಿ ಯೂ ಹುಟ್ಟದಂತೆ ಮಾಡುವುದಕ್ಕಾಗಿ ನಿನ್ನನ್ನೂ ಜನಕನನ್ನೂ ಕೊಲ್ಲಲು ನಿಶ್ಚಯಿ ಸಿರುವನು. ಇದಕ್ಕೆ ತಕ್ಕ ಉಪಾಯವನ್ನು ಆಲೋಚಿಸು ; ಇನ್ನು ನಾನು ಈ ಸುದ್ದಿ