4
ಯನ್ನು ಜನಕನಿಗೆ ತಿಳಿಸಲು ಹೊರಡುವೆನು” ಎಂದು ಹೇಳಿ ನಾರದನು ಮಿಥಿಲೆಗೆ ಪ್ರಯಾಣಮಾಡಿದನು.
ಬಳಿಕ ದಶರಥನು ಈ ಸಂದರ್ಭವನ್ನು ತನ್ನ ಮಂತ್ರಿಗೆ ತಿಳಿಸಲು ಆತನು ಯಾರೂ ಅರಿಯದಂತೆ ಬಹಳ ಕುಶಲನಾದ ಒಬ್ಬ ಚಿತ್ರಗಾರನನ್ನು ಕರೆಯಿಸಿ ಲೆಪ್ಪ ದಿ೦ದ ದಶರಥನ ಆಕಾರವನ್ನು , ಸ್ವಲ್ಪವೂ ವ್ಯತ್ಯಾಸಕಾಣದಂತೆ, ಮಾಡಿಸಿ ಅದನ್ನು ಸಭಾಮಂಟಪದಲ್ಲಿಟ್ಟು, ಆ ಬೊಂಬೆಯನ್ನೇ ಮ೦ತ್ರಿ ಮೊದಲಾದವರೆಲ್ಲರೂ ಓಲಗಿ ಸುತ್ತ ದಶರಥನನ್ನು ಮರೆಮಾಡಿದರು. ನಿಥಿಲೆಯಲ್ಲಿ ಜನಕನ ಮಂತ್ರಿಯೂ ಇದೇ ರೀತಿಯಾಗಿ ನಡೆಯಿಸಿದನು. ವಿಭೀಷಣನು ನಿಯಮಿಸಿದ ಘಾತುಕರು ಮೋಸದಿಂದ ಅರಮನೆಯನ್ನು ನುಗ್ಗಿ ಲೆಸ್ಸದರಸನ ತಲೆಯನ್ನು ಕತ್ತರಿಸಿಕೊಂಡು ಹೋಗಿ ವಿಭೀಷಣನಿಗೆ ತೋರಿಸಿ ಬಹುಮಾನವನ್ನು ಪಡೆದರು.
ಇತ್ತ, ದಶರಥನೂ ಜನಕನೂ ವೇಷಾಂತರದಿಂದ ವಿನೋ ದಾರ್ಥವಾಗಿ ದೇಶಾಟ ನಕ್ಕೆ ಹೊರಟು ಮಾರ್ಗದಲ್ಲಿ ದೊರೆತ ಕೌತುಕಮಂಗಳ ಪುರವನ್ನು ಹೊಕ್ಕು, ಅಲ್ಲಿ ಅನೇಕ ಮಂದಿ ರಾಜಕುಮಾರರು ಸೇರಿರುವ ಸ್ವಯಂವರ ಮಂಟಪವೊಂದನ್ನು ಕಂಡು, ಅಲ್ಲಿಗೆ ತಾವೂ ಹೋಗಿ ಕುಳಿತುಕೊಂಡರು. ರಾಜಕನೈಯಾದ ಕೈಕೆಯು ಹೂಮಾಲೆ ಯನ್ನು ಹಿಡಿದುಕೊಂಡು ಸ್ವಯಂವರ ಮಂಟಪಕ್ಕೆ ಬಂದು ಅಲ್ಲಿ ನೆರೆದಿರುವ ರಾಜ ಕುಮಾರರಲ್ಲಿ ದಶರಥನನ್ನು ಮೆಚ್ಚಿ ಆತನ ಕೊರಳಿಗೆ ಹೂಮಾಲೆಯನ್ನು ಹಾಕಿದಳು. ಇದನ್ನು ನೋಡಿ ಮಿಕ್ಕ ರಾಜಕುಮಾರರು ದಶರಥನ ಮೇಲೆ ಯುದಕ್ಕೆ ನಿಲ್ಲಲು ಆತನು ಇವರನ್ನು ಲಕ್ಷ್ಯಮಾಡದೆ ಕೈಕೆಯೊಡನೆ ರಥವನ್ನೇರಿ ಅವರನ್ನು ಎದುರಿಸಿದನು. ಯುದ್ಧದಲ್ಲಿ ದಶರಥನ ಸಾರಥಿಯು ಮೂರ್ಛ ಹೋಗಲು, ಕೈ ಕೆಯೇ ಸಾರಥ್ಯವನ್ನು ವಹಿಸಿದಳು. ಈ ಸಹಾಯದಿ೦ದ ದಶರಥನು ಶತ್ರುಗಳೆಲ್ಲರನ್ನೂ ಸೋಲಿಸಿ ಓಡಿಸಿ ಬಿಟ್ಟನು. ತರುವಾಯ ದಶರಥನಿಗೂ ಕೈಕೆಗೂ ವೈಭವದಿಂದ ವಿವಾಹವು ನಡೆಯಿತು. ದಶರಥನು ಕೈಕೆಯೊಡನೆ ಅಯೋಧ್ಯೆಯನ್ನು ಸೇರಿದನು. ಜನಕನು ಮಿಥಿಳೆಗೆ ಹೊರಟುಹೋದನು. ಕೈಕೆಯು ಯುದ್ಧ ಕಾಲದಲ್ಲಿ ಇಂತಹ ಅಸಾಧಾರಣವಾದ ಸಹಾಯವನ್ನು ಮಾಡಿದುದಕ್ಕಾಗಿ ದಶರಥನು ಒಂದು ದಿನ ಆಕೆಯನ್ನು ಬಹಳ ವಾಗಿ ಕೊಂಡಾಡಿ ಬೇಕಾದ ವರವನ್ನು ಬೇಡೆಂದು ಹೇಳಿದನು. ಆಕೆಯು ತನಗೆ ಬೇಕಾದಾಗ ಬೇಡುವೆನೆಂದು ಉತ್ತರಕೊಟ್ಟಳು.
ದಶರಥನು ತನ್ನ ಹಿರಿಯ ಹೆಂಡತಿಯಾದ ಅಪರಾಜಿತೆಯೊಡನೆ ಒಂದು ದಿನ ರಾತ್ರಿ ಶಯ್ಯಾಗೃಹದಲ್ಲಿ ಮಲಗಿರುವಾಗ ಅಪರಾಜಿತೆಗೆ ಆನೆ, ಸಿಂಹ, ಸೂ ಚ೦ದ್ರ-ಇವನ್ನು ಕಂಡಂತೆ ಕನಸು ಬಿದ್ದಿತು. ಆಕೆಯು ಈ ಕನಸನ್ನು ಗಂಡ ನಿಗೆ ತಿಳಿಸಲು ಆತನು. ಈ ಶುಭ ಸ್ವಪ್ನದಿಂದ ಚಕ್ರವರ್ತಿಯಾಗುವ ಮಗನು