ಈ ಪುಟವನ್ನು ಪ್ರಕಟಿಸಲಾಗಿದೆ



ಸಪ್ತಾಶ್ವಾಸಂ
೧೨೯

ಕಂ || ಮುನ್ನ ಮೆ ಭರತ೦ಗೀವೆಂ
ಕನ್ನೆಯನೆ೦ಬಲಿಪು ಮನದೊಳಿರೆ ಮನದಟಿಪ೦ ||
ಬಿನ್ನವಿಸಲಿರ್ದೆನಾ ಬೆಸ
ನಮ್ಮಡಿ ಬೆಸಸೆ ಬಯಕೆ ಕೂಡಿದುದೀಗಲ್ ||೬ ||

ಎಂದಂದಿನ ದಿನದೊಳೆ ಮೌಹೂರ್ತಿಕ ನಿರೂಪಿತ ಶುಭಮುಹೂರ್ತದೊಳ್-

ಕಂ || ಇನಿವಿರಿದು ವಿಭವಮಾದುದೆ
ಜನಕ ತನೂಭವೆಯ ಮದುವೆಯೋಳಮಂಬಿನೆಗಂ ||
ಕನಕಪ್ರಭಯಂ ಪದೆಪಿ೦
ಕನಕಂ ಭರತಂಗೆ ಮದುವೆಮಾಡಿದನಾಗಳ್|| ೭ ||

ಆ ವಿವಾಹ ವಿಭವದೆಸಕಕ್ಕಮವರ ಭುಜಬಲದ ಮಸಕಕ್ಕಂ ವಿದ್ಯಾಧರಮಹ
ತರಂ ವಿಸ್ಮಿತಚಿತ್ತನಾಗಿ ಮಿಥಿಲೆಯಿಂ ರಥನೂಪುರಚಕ್ರವಾಳಪುರಕ್ಕೆ ಬಂದು
ನಿಜ ಪತಿಯನಿಂದುಗತಿಯಂ ಕಂಡು-

ಚ || ಗಣನೆಗಳುಂಬಮಾಗೆ ಮೊದಲಿಂ ತುದಿಯೆಯ್ದೆ ತಗುಳು ರಾಮಲ |
ಕಣರ | ಮಹಾಪ್ರಭಾವಮನದಂ ನೆರೆ ಬಣ್ಣಿಸೆ ಕೇಳು ಖೇಚರಾ ||
ಗ್ರಣಿ ಕಿಅದಾಯ್ತು ನಮ್ಮದಸೆ ಕೇವಲರಲ್ಲರವರ್ ದಿಟಕ್ಕೆ ಕಾ |
ತಣ ಪುರುಷರ್ ತ್ರಿಖಂಡ ಭರತೋರ್ವಿಗೆ ವಲ್ಲಭರಾಗದಿರ್ಪರೇ ||೮||

ಎಂದು ಬಗೆಬೆದ ಆತಿ ವಿದ್ಯಾಧರಾಧಿರಾಜನುಷಸ್ಸಮಯದ ರಾಜಮಂಡ
ದಂತೆ ನಿಸ್ತೇಜನಾಗಿರ್ಪುದುಮಾ ಖಚರವಲ್ಲಭ ತನೂಭವಂ ಪ್ರಭಾಮಂಡಲಂ ಮನಃ
ಕರಂಡಕದೊಳಾ ಕನ್ಯಾರತ್ನಮಂ ತಳೆದು-

ಕಂ || ಅಯ್ತು ಮಲರ್ಗಣೆಗಳಂ 'ಕಡು
ಕೆಯ್ದಿಸೆ ಮದನಂ ವಿಯೋಗಿ ಯೋಗಿಯ ತೆಆದಿಂ ||
ದಯ್ದು೦ವಿಷಯ ಸುಖಕ್ಕಂ
ಮೆಯ್ದೆ ಗೆದಾಕೆಯನೆ ಬಿಡದೆ ಜಾನಿಸುತಿರ್ದ೦ || ೯ ||

ಅಂತು ಕನ್ಯಾಸಕ್ತಿಯಿಂ ಕನ್ನಾಸಕ್ತನಾದಾದಿತ್ಯನಂತೆ ಪ್ರಭಾಮಂಡಲಂ
ಹತಪ್ರಭಾಮಂಡಲನಾಗಿ ವಸಂತಧ್ವಜನೆಂಬ ಸಹಚರಂಗೆ ಸೀತಾ ವಿರಹದಿಂದಾದ
ತನ್ನ ಮನೋವಿಷಾದಮನಬಿಪಿ-


1. ಮಹಮಂ ಮಹಿಮಯಂ. ಕ. ಖ. ಗ. ಫ. 2. ಕಡಿ.

9