ಈ ಪುಟವನ್ನು ಪ್ರಕಟಿಸಲಾಗಿದೆ

೧೩೦

ರಾಮಚಂದ್ರಚರಿತಪುರಾಣಂ

ಕಂ || ಆರಮಣಿಯಧರಮಣಿಯ ಸು
ಧಾರಸದಿಂದಲ್ಲದೆನ್ನ ಮನಸಿಜ ತಾಪಂ ||
ತೀರದು ತೀರ್ಚು'ವುದೆನ್ನ ಮ
ನೋರಥಮನಿದರ್ಕೆ ನೀನೆ ಸಖ ಸಾರಥಿಯೆ ||೧೦ ||

ಎಂಬುದುಮಾತನ ಕೆಲದೊಳಿರ್ದ ಬೃಹತುವೆಂಬ ವಿದ್ಯಾಧರನಿಂತೆಂದಂ-

ಉ|| ಪೋದುವು ನಮ್ಮಬಿಲ್ಗಳೆರಡು ಜನಕಾತ್ಮಜೆಗಗ್ನಿಸಾಕ್ಷಿಯಿಂ |
ದಾದುದು ರಾಮನಾತ್ಮದುವೆ ಬಿಲ್ಲೆ ಆದೆತ್ತು ಬರ್ದು೦ಕಿ ಪುಣ್ಯದಿ೦ ||
ಪೋದ ಮಹತ್ತರಂ ಮಗುಟ್ಟಿನಾಕೆಯ ಹಂಬಲೊಳಪ್ಪುದೇಂ ರಣಾ
ಸ್ವಾದನ ಲಂಪಟರ್ ನೆರೆದು ಕಾದುವನಪ್ರೊಡೆ ರಾಮಲಕ್ಷ್ಮಣರ್ || ೧೧ ||

ಎನಲೋಡ೦- ಕಂ | ಪುರ್ವಿನ ಗಂಟುಂ ಕಣೋಳ್
ಸರ್ವಿದ ಕಿಸುಸೆರೆಗಳುಂ ಕಪೋಲ ಸ್ಥಲದೊಳ್ ||
ಕೊರ್ವಿದ ಬೆಮರ್ವನಿಯುಂ ಕರ
ಮರ್ವಿಸೆ ಮುನಿಸಿಂ ಕುಮಾರನಂದಿಂತೆಂದಂ|| ೧೨ ||

ಉ || ಮಾನವರೆನ್ನೊಳಯ್ಯ ಕಲಿಗಳ್ ರಣಕೇಳಿಗೆ ಸಾಲ್ವರೆಂಬಿದಂ |
ನೀನು ರಾಮಲಕ್ಷ್ಮಣರನಶ್ರಮದಿಂ ಬೆದಟ್ಟಿ ತಂದಸೆಂ ||
ಜಾನಕಿಯಂ ಕುಲಾಗತ ಧನುರ್ಯುಗಳಂಬೆರಸೆ೦ದು ಕೀತಿ ಪಂ
ಚಾನನದಂತೆ ಗರ್ಜಿಸಿ ವಿಮಾನಮನೇ ಅದನಾಕುಮಾರಕಂ || ೧೩ ||

ಚ || ಕುಲಮದವೊಂದು ರೂಪಮದನೊಂದು ವಯೋಮದವೊಂದು ತನ್ನದೇ ।
ರ್ಬಲಮದವೊಂದು ಜಾತಿಮದನೊಂದು ಕಲಾಮದವೊಂದು ದೇವತಾ ||
ಬಲಮದವೊಂದು ರಾಜ್ಯಮದ೦ದಿನಿತಲ್ಲದೆ ಬೇತೆ ರಾಗಮ |
ಗ್ಗಲಿಸಿದ ದೋಷದೃಷ್ಟಿ ವಿಷಯಾತುರರೇಂ ಗಡ ಮುಂದುಗಾರೇ || ೧೪ ||

ಅದಜಂಗಾಮದಾ'ವಿಲಂಬಲನನಬಲನಂ ಬಗೆವಂತೆ ಬಗೆದು ಕತಿಪಯಖಚರ
ಪರಿಜನಂಬೆರಸು ಗಗನಮಾರ್ಗದಿಂ ಪೋಗುತ್ತು ೦ ದಿಗವಲೋಕನಂಗೆಯ್ದು ತನ್ನ
ಮುನ್ನಿನ ಜನ್ಮದೊಳ್ ಕುಂಡಲ ಮಂಡಿತನಾಗಿರ್ದ೦ದಿನ ವಿದಗ್ಗ ನಗರಮಂ ಕಾಣ


1. ವೆನೆನ್ನ. ಚ. 2. ವಲ೦ಬನನವರನಬಲರಂ. ಫ.