ಈ ಪುಟವನ್ನು ಪ್ರಕಟಿಸಲಾಗಿದೆ

6

ಪಂಪರಾಮಾಯಣದ ಕಥೆ

ಹೀಗಿರುವಲ್ಲಿ, ಒಂದು ದಿನ ಚಾರನೊಬ್ಬನು ಭೀತಿಯಿಂದೋಡಿಬಂದು ದೊರೆಗೆ ನಮಸ್ಕರಿಸಿ, ಲೆಕ್ಕವಿಲ್ಲದಷ್ಟು ಬೇಡರ ಪಡೆಯು ಭೂಮಂಡಲವನ್ನೆ ಸೂರೆ ಮಾಡುತ್ತಿರುವುದೆಂದು ತಿಳಿಸಲು, ಜನಕನು ಅವರನ್ನಡಗಿಸಿ ಜನರ ಕಷ್ಟಗಳನ್ನು ಕೂಡಲೆ ನಿವಾರಣೆ ಮಾಡಬೇಕೆಂದು ಆಲೋಚಿಸಿ ತನಗೆ ಸಹಾಯವಾಗಿ ಬರು ವಂತೆ ದಶರಥನಿಗೆ ಹೇಳಿಕಳುಹಿಸಿದನು. ದಶರಥನು ಸೇನಾಸಮೇತನಾಗಿ ಹೊರಡು ವುದಕ್ಕೆ ಸನ್ನದ್ದನಾದುದನ್ನು ಬಲಾಚ್ಯುತರಾದ ರಾಮಲಕ್ಷ್ಮಣರರಿತು ದಶರಥನ ಸಭೆಗೆ ಬಂದರು. ರಾಮನು ತಾನೂ ಎಂಟನೆಯ ಕೇಶವನಾದ ಲಕ್ಷ್ಮಣನೂ ಇರುವಾಗ ಯುದ್ದಕ್ಕೆ ದಶರಥನು ಹೊರಡಬೇಕಾದ ಆವಶ್ಯಕವಿಲ್ಲವೆಂದೂ ತಾವು ಚಿಕ್ಕವರೆಂದು ಸಂಶಯಪಡಲವಶ್ಯಕವಿಲ್ಲವೆಂದೂ ತಿಳಿಸಿ ತಮ್ಮನ್ನು ಕಳುಹಿಸು ವಂತೆ ಕೇಳಿಕೊಳ್ಳಲು, ದಶರಥನು ಅದಕ್ಕೊಪ್ಪಿದನು. ಇವರು ದೊಡ್ಡ ಸೇನೆ ಯೊಡನೆ ಹೊರಟು ಕೆಲವು ದಿನಗಳಲ್ಲಿ ಜನಕನೊಡನೆ ಕಲೆತರು. ಜನಕನೂ ಅವನ ತಮ್ಮನಾದ ಕನಕನೂ ದೊಡ್ಡ ಬಲದೊಡನೆ ತೆರಳಿ, ಎಲ್ಲರೂ ಕಿರಾತ ಸೈನ್ಯದ ಮೇಲೆ ಯುದ್ಧ ಮಾಡಿದರು. ರಾಮಲಕ್ಷ್ಮಣರು ಶಬರ ಸೇನಾಧಿಪತಿಯಾದ ತರಗತಮನನ್ನು ಸೋಲಿಸಿ ಶರಣಾಗತನನ್ನಾಗಿ ಮಾಡಿದರು. ಜನಕನು ರಾಮನ ಪರಾಕ್ರಮಕ್ಕೆ ಮೆಚ್ಚಿ ತನ್ನ ಮಗಳಾದ ಸೀತೆಯನ್ನು ಆತನಿಗೆ ಕೊಟ್ಟೆನೆಂದು ಹೇಳಿ ರಾಮಲಕ್ಷ್ಮಣರನ್ನು ಅನೇಕೋಪಚಾರಗಳೊಡನೆ ಅಯೋಧ್ಯೆಗೆ ಕಳುಹಿಸಿದನು.
ಜನಕನು ಸೀತೆಯನ್ನು ರಾಮನಿಗೆ ಕೊಟ್ಟನೆಂಬ ವಾರ್ತೆಯನ್ನು ಕೇಳಿ ನಾರದನು ಜಾನಕಿಯನ್ನು ನೋಡಬೇಕೆಂಬ ಕುತೂಹಲದೊಡನೆ ಮಿಥಿಲೆಗೆ ಬಂದು ಸೀತೆಯನ್ನು ನೋಡಿ ಮೋಹಿಸಲು, ಆಕೆಯು ಇವನ ಬೋಳೆತಲೆ ಮೊದ ಲಾದ ವಿಕೃತ ವೇಷವನ್ನು ನೋಡಿ ಹೆದರಿ ಓಡಿಹೋದಳು. ಆಕೆಯ ಹಿಂದೆಯೇ ನಾರದನೂ ಓಡುತ್ತಿರಲು ಅಲ್ಲಿದ್ದವರೆಲ್ಲರೂ ನಾರದನನ್ನು ಬೈದರು. ಸೈನಿಕರು ಈ ಕಳಕಳವನ್ನು ಕೇಳಿ ಕತ್ತಿಗಳನ್ನು ಝಳಪಿಸುತ್ತ ಬರಲು ನಾರದನು ಭಯ ಪಟ್ಟು ಆಕಾಶಕ್ಕೆ ನೆಗೆದು ಕೈಲಾಸ ಪರ್ವತವನ್ನು ಸೇರಿದನು. ಅಲ್ಲಿಯ ಉಪವನದಲ್ಲಿ ತನ್ನ ಬಳಲಿಕೆಯನ್ನು ತೀರಿಸಿಕೊಂಡು ತನಗುಂಟಾದ ಅಪಮಾನಕ್ಕೆ ಕಾರಣ ಳಾದ ಸೀತೆಗೆ ಕೇಡನ್ನು ಮಾಡಬೇಕೆಂದು ನಿಶ್ಚಯಿಸಿ, ವಿಚಿತ್ರ ಚಿತ್ರಕಲಾ ವಿಶಾರದ ನಾದ ನಾರದನು ಚಲುವೆಯಾದ ಸೀತೆಯ ಚಿತ್ರವನ್ನು, ಆಕೆಯ ಪ್ರತಿಬಿಂಬವೋ ಎಂಬಂತೆ, ಒಂದು ಪಟದ ಮೇಲೆ ಬರೆದು ಅದನ್ನು ವಿದ್ಯಾಧರ ರಾಜಧಾನಿಯಾದ ರಥನೂ ಪುರಚಕ್ರನಾಳ ಪುರದ ವಿನೋದವನದಲ್ಲಿಯ ಮಣಿಭವನದಲ್ಲಿ ತೂಗ ಹಾಕಿ ಹೊರಟು ಹೋದನು. ಅಲ್ಲಿಗೆ ಪ್ರಭಾಮಂಡಲನು ಬಂದು ಆ ಪಟವನ್ನು ನೋಡಿ ಮದನ ಮೋಹಕ್ಕೊಳಗಾಗಿ ಮೋಹಮೂರ್ಛ ಹೊಂದಿದನು. ಇದನ್ನು ಕೇಳಿ ಆತನ ತಂದೆಯು ಅಲ್ಲಿಗೆ ಓಡಿಬಂದು ಮಗನನ್ನು ಮೂರ್ಛೆಯಿಂದೆಬ್ಬಿಸಿ, ಕಾರಣವನ್ನು ತಿಳಿದು, ಆ ಪಟವನ್ನು ಅಲ್ಲಿಗೆ ತಂದವರಾರೆಂದು ವಿಚಾರಿಸುತ್ತಿರು