ಈ ಪುಟವನ್ನು ಪ್ರಕಟಿಸಲಾಗಿದೆ



ಪಂಪ ರಾಮಾಯಣದ ಕಥೆ

5

ಆಕೆಯ ಹೊಟ್ಟೆಯಲ್ಲಿ ಹುಟ್ಟುವನೆಂದು ಹೇಳಿದನು. ಕಾಲಕ್ರಮದಲ್ಲಿ ಅಪರಾ ಜಿತೆಯು ಗರ್ಭವನ್ನು ಧರಿಸಿ ರಾಮನನ್ನು ಹೆತ್ತಳು. ಸುಮಿತ್ರೆಯು ಲಕ್ಷಣ ನನ್ನೂ ಕೈಕೆಯು ಭರತನನ್ನೂ ಸುಪ್ರಭೆಯು ಶತ್ರುಘ್ನನನ್ನೂ ಹಡೆದರು. ಈ ನಾಲ್ವರೂ ಬಳೆದು ವಿದ್ಯಾಭ್ಯಾಸಮಾಡಿ ಸಕಲ ಶಸ್ತ್ರಶಾಸ್ತ್ರ ವಿಶಾರದರಾದರು.


ಆಶ್ವಾಸ ೪ - ಜನಕ ಜಿನಭವನ ಸಂದರ್ಶನ
ಮಿಥಿಳಾಪುರದಲ್ಲಿ ಜನಕನ ಅರಸಿಯಾದ ವಿದೇಹಿಯು ಗರ್ಭವನ್ನು ಧರಿಸಿ ದಳು. ಪೂರ್ವಜನ್ಮದ ವೈರದಿಂದ ಒಬ್ಬ ನಿಶಾಚರನು ಆಕೆಯ ಗರ್ಭವನ್ನು ನಾಶಮಾಡ ಬೇಕೆಂದು ಕಾದಿದ್ದನು. ವಿದೇಹಿಯು ಅವಳಿ ಮಕ್ಕಳನ್ನು ಹೆತ್ತಳು ; ಅವುಗಳಲ್ಲಿ ಒಂದು ಗಂಡು, ಮತ್ತೊಂದು ಹೆಣ್ಣು. ನಿಶಾಚರನು ವಿದೇಹಿಗೂ ಹೆಣ್ಣು ಮಗುವಿಗೂ ಯಾವ ಬಾಧೆಯನೂ ಉ೦ಟುಮಾಡದೆ ಗಂಡು ಕೂಸನ್ನು ಮಾತ್ರ ಅಪಹರಿಸಿಕೊಂಡು ಆಕಾಶಮಾರ್ಗದಲ್ಲಿ ಹೋಗುತ್ತೆ ಅದನ್ನು ಕೊಲ್ಲ ಬೇಕೆಂಬ ಆಲೋಚನೆಯಿಂದ ಅದರ ಮುಖವನ್ನು ಕೂರದೃಷ್ಟಿಯಿಂದ ನೋಡಲು, ಆ ಮಗುವು ಪೂರ್ವಜನ್ಮದಲ್ಲಿ ಮಾಡಿದ ಅಣುವ್ರತದ ಪ್ರಭಾವದಿಂದಲೂ ಈ ನಿಶಾಚರನು ಮಾಡಿದ ಮಹಾವ್ರತದ ಸಂಸ್ಕಾರ ಬಲದಿಂದಲೂ ಅವನಿಗೆ ಉಪ ಶಾಂತಿಯುಂಟಾಗಿ ದ್ವೇಷವು ತೊಲಗಿತು. ಕೂಡಲೆ ನಿಶಾಚರನು ತನ್ನ ಕಿವಿ ಯಲ್ಲಿದ್ದ ಕುಂಡಲಗಳನ್ನು ಆ ಮಗುವಿನ ಕಿವಿಗಿಟ್ಟು ಪರ್ಣಲಘುವಿದ್ಯೆಯಿಂದ ಆ ಮಗುವಿಗೆ ಯಾವ ಬಾಧೆಯೂ ಉಂಟಾಗದಂತೆ ಅದನ್ನು ಬಿಸುಟು ಹೊರಟು ಹೋಗಲು, ಅದು ಮೆಲ್ಲನೆ ಬಂದು ರಥನೂ ಪುರಚಕ್ರವಾಳ ಪುರದ ಒಡೆಯನಾದ ಇಂದುಗತಿಯೆಂಬ ಬೇಚರೇ೦ದ್ರನ ಹಾಸಿಗೆಯ ಮೇಲೆ ಬಿದ್ದಿತು. ಕಾಂತಿಯಿಂದ ಹೊಳೆಯುತ್ತಿರುವ ಆ ಮಗುವನ್ನು ನೋಡಿ ಆತನು ಪರಮಾನಂದ ಭರಿತನಾಗಿ ತನ್ನರಸಿಯಾದ ಪುಷ್ಪವತಿಯು ಫಲವತಿಯಾದಳೆಂದು ಆಕೆಗೆ ಆ ಮಗುವನ್ನೊಪ್ಪಿಸಿ ಅದಕ್ಕೆ ಪ್ರಭಾಮಂಡಲನೆಂಬ ಹೆಸರನ್ನಿಟ್ಟನು.
ಇತ್ತ, ಮಿಥಿಲೆಯಲ್ಲಿ ವಿದೇಹಿಯು ತನ್ನ ಮಗುವನ್ನು ರಾಕ್ಷಸನು ಎತ್ತಿಕೊಂಡು ಹೋದುದಕ್ಕಾಗಿ ಬಹಳ ವ್ಯಸನಪಟ್ಟಳು. ಆಗ ಜ್ಯೋತಿಷ್ಯರು ಶುಭಮುಹೂರ್ತದಲ್ಲಿ ಹುಟ್ಟಿದ ಆ ಮಗುವಿಗೆ ಯಾವ ಅಪಾಯವೂ ಸಂಭವಿಸ ದೆಂದು ಆಕೆಯ ದುಃಖವನ್ನು ಕಳೆದರು. ಜನಕನು ವಿಭವದಿಂದ ಹೆಣ್ಣು ಮಗುವಿಗೆ ಜಾತಕರ್ಮೊತ್ಸವವನ್ನು ಮಾಡಿ, ಸರ್ವಲಕ್ಷಣ ಸಸ್ಯ ಸಂಪತ್ತಿಗೆ ಸೀತೆ ಯಾದುದರಿ೦ದ, ಸೀತೆಯೆಂಬ ಹೆಸರನ್ನಿಟ್ಟು ಬಹಳ ಪ್ರೀತಿಯಿಂದ ಸಾಕುತ್ತಿರಲು ಆಕೆಯು ದಿನಕ್ರಮವಾಗಿ ಮೋಹನಾಕಾರದಿಂದ ಬಳೆದು, ಭರತಶಾಸ್ತ್ರಾದಿ ಸಕಲ ಕಲೆಗಳಲ್ಲಿಯೂ ಪರಿಣತಿಯನ್ನು ಪಡೆದಳು.