ಈ ಪುಟವನ್ನು ಪ್ರಕಟಿಸಲಾಗಿದೆ

೧೫೪

ರಾಮಚಂದ್ರಚರಿತಪುರಾಣಂ

ಎಂದು ಬಿನ್ನವಿಸಿದ ರಾಘವನಮೋಘ ವಾಕ್ಯ ಮಾಣಿಕ್ಯ ಕಿರಣದಿನಸಸಾರಿತ
ಮೋಹಾಂಧಕಾರನಾಗಿ-

ಮ|| ಪರಮಶ್ರೀ ವಲ್ಲಭಂಗೀ ಚರಮ ತನುಗಿದೇ ಬಾ ನಮ್ಮೂಾವ ರಾಜ್ಯಂ |
ಪರಮಾಣು ಪ್ರಾಯವೆಂದಾ ತನಯನ ವಿನಯಕ್ಕಂ ನಯಕ್ಕಂ ಗುಣಕ್ಕಂ ||
ಚರಿತಕ್ಕಂ ಬೆಕ್ಕಸಂಬಟ್ಟಧಿಪತಿ ತಲೆಯಂ ತೂಗಿದಂ ಸೂಸುವನ್ನ೦ |
ಸುರಚಾಪ ಶ್ರೇಣಿಯಂ ಭಾಸುರ ಮಣಿಗಣ ನಾನಾಂಶು ಕೂಟಂ ಕಿರೀಟಂ ||

ಆ ಸಮಯದೊಳ್ ಭರತಂ ದಶರಥಂಗೆ ಮುಕುಳಿತಾಂಜಲಿ ಪುಟನಿಂತೆಂದಂ-

ಕಂ ॥ ಜ್ಯಾಯನ ರಾಜಮನಯ್ಯ ಕ
ನೀಯನಪೇಕ್ಷಿಸುವುದುಚಿತಮಲ್ಕು ತಪೋರಾ ||
ಜ್ವಾಯತ್ತ ಮೆನ್ನ ಚಿತ್ರಂ
ನ್ಯಾಯಾರ್ಜಿತವಲ್ಲದೆನಿಪ ಧನಬಂಡಂ|| ೧೨೬ ||

ಹೇಯಮನದುಂ ರಾಜ್ಯಮ
ನೀಯಲಪೇಕ್ಷಿಸುವಿರೆನಗೆ ನೀವೊಲ್ಲದುದ೦||
ಶ್ರೇಯಸ್ಕರವಲ್ಲದುದಂ
ಹೇಯ ಮುಪಾದೇಯಮೆನಗದೆಂತಾದಪುದೋ|| ೧೨೭||

ಎನ್ನೆವರಂ ವೈರಾಗ್ಯಂ
ತನ್ನೊಳ್ ತಲೆದೋ ಅದನ್ನೆ ವರಮೋಲವಕ್ಕುಂ ||
ತನ್ನಂ ತಾನಅದ ಬಲ
ಕೈರ್ಗ೦ ವಿಷಯ ಸುಖದೊಳೋಲವಾದಪುದೇ||೧೨೮ ||

ಎನೆ ದಶರಥಂ ಭರತನ ಪರಿಚ್ಛೇದಮಂ ಮನದೊಳೆ ಮೆಚ್ಚಿ ತನಯ! ನಿನ
ಗಿದನ್ನೆವರಂ ಸಮಯವಲ್ಲದೆಂತೆನೆ-


ಕಂ || ಪರಮ ಪುರುಷಾರ್ಥಮಿರ್ದುದು
ಚರಮದೊಳನ್ನೆವರನುಲಿದ ಪುರುಷಾರ್ಥದೊಳಾ ||
ಚರಿಸುವುದು ತಕ್ಕುದದ ಜ೦
ಪರಿವಿಡಿಯಂ ತಪ್ಪಲಾರ್ಗಮೇಲ ಬಂದಪುದೇ|| ೧೨೯ ||

ಅದ೦ ನಿನಗೆ ನಿಜಾಗ್ರಜನ ವಚನವೆ ವಿಧೇಯಮೆನೆ ಮಾತುಗುಡ
ಲಜಿಯದೆ ಭರತನಿರೆ ರಾಘವನಿಂತೆಂದಂ-