ಈ ಪುಟವನ್ನು ಪ್ರಕಟಿಸಲಾಗಿದೆ

೧೬o

ರಾಮಚಂದ್ರಚರಿತಪುರಾಣಂ

ಎಂದವರ್ ತಮ್ಮೊಳುಮ್ಮಳಿಸಿ ನುಡಿಯುತ್ತಿರ್ಪುದು೦-

ಕಂ|| ಐರಾವಣ ಗಜಮಂ ಜನ
ವಾರಣಮೊಂದಾಗಿ ಪುಗುವವೋ೮೯ ಪುಗು ತಂದರ್ ||
ಸೀರ ಗದಾ ಹಸ್ತರ್ ಬಲ
ನಾರಾಯಣ ದೇವರಂತವುರದರಮನೆಯಂ || ೧೫೯ ||

ಅ೦ತರಮನೆಯಂ ಪೊಕ್ಕು ಜನನೀಯುಗಳ ಸದಪಯೋಜಕ್ಕೆ ವಿನತರಾಗಿ
ಸಮುಚಿತಾಸನದೊಳಿರ್ದು ಲಕ್ಷಣದೇವಂ ಶ್ರೀರಾಮದೇವನ ಪರಾರ್ಥ ವೃತ್ತಿಯಂ
ಬಿನ್ನವಿಸೆ ಕೇಳು ಅಪರಾಜಿತಾಮಹಾದೇವಿ ಶೋಕಾನಲ ದಂದಹೈಮಾನ ಮಾನಸೆ
ಯಪ್ಪುದುಂ-

ಕಂ || ಅನವರತ ಬಾಷ್ಪ ಜಲ ಸೇ
ಚನದಿಂದಪರಾಜಿತಾ ಮಹಾದೇವಿಯ ಲೋ ||
ಚನಪುತ್ರಿಕೆ ಬೆಳೆಯಿಸಿದುದು
ವನಪಾಲಿಕೆಯಂತೆ ಮೋಹ ಮೂರ್ಛಾ ಲತೆಯಂ || ೧೬೦ ||

ಚ || ಬೀದಿ ಬೆದಅಟ್ಟಿದಂ ಮಗನೆ ಮುನ್ನ ತವರ್ಮನೆ ನಾಮಶೇಷಮಾ |
ದುದು ಪತಿಯುಂ ತಪಕ್ಕೆ ನಡೆವಂ ಸುತ ನೀನುಮಗಲ್ಲು ಪೋದೊಡಾ ||
ವುದು ಗತಿ ಜೀವಿಸಂದಮೆನಗಾವುದು ಪೊರ್ದುವೆನಾರನೆಂದು ಗ |
ದದ ರವಮುಣ್ ತಂದಳಪರಾಜಿತೆ ಕಣ್ಣೆ ಕದುಷ್ಟ ವಾರಿಯಂ || ೧೬೧ ||


ಕಂ ॥ ವನಚರ ವನಮ್ಮಗ ವನಖಗ
ವನೇಭ ವನದಹನ ವನವಿಷಾಹಿಗಳಿನಸಾ ||
ಯನ ಬಹುಳಮಪ್ಪ ವನಮಂ
ತನೂಭವಂ ಪುಗುವೊಡೆಂತದಂ ಸೈರಿಸುವೆಂ || ೧೬೨ ||

ಅಗ್ರಸುತನಂ ಸಮಗ್ರ ಗು
ಣಾಗ್ರಣಿಯಂ ರಾಮನನ್ನನಂ ದಶರಥನಂ ||
ತುಗ್ರಾಟವಿನುಗಿಸಿದ ಮದ
ನ ಗ್ರಹ ಪೀಡಿತರನಾರುಮಂ ಕಂಡಳಿಯೆಂ || ೧೬೩||

ಪರಿಹರಿಸಿ ಪಾಲಿಯಂ ಪಾ
ಪಿ ರಾಮನಂ ಪುಗಿಸಿ ವಿಪಿನಮಂ ನಿಜ ಸುತನಂ ||