ಕರುನಾಡ೦ಬುಗಿಸಿದಪಳ್
ಕರುಣಂಗೆಟ್ಟಾಕೆ ಕೈಕೆ ಕಲ್ಲೆರ್ದೆಯಕ್ಕುಂ || ೧೬೪ ||
ಕಂ ||ಕೊಟ್ಟೂಡೆ ಜನಕಂ ಪಾಲಿಸಿಯ
ಬಟ್ಟೆ ಯನಸಕ೦ದು ಪಿರಿಯನಿರೆ ತಾನು ಮೊಡಂ ||
ಒಟ್ಟಂ ಗಡ ರಾಜ್ಯಕ್ಕೆನೆ
ಕೆಟ್ಟ ಪರ್ ಭರತನನ್ನರಾರ್ ಮನುಕುಲದೊಳ್ || ೧೬೫ ||
ಅಸದರ್ಥ ಸ್ವೀಕಾರಂ
ಪಸುಗೆಯೆ ನಿನಗೆಂದು ಬಿಡದೆ ಶತ್ರುಘ್ನಂ ಬಾ ||
ರಿಸದೆ ಭರತನೊಳೊಡಂಬ
ಟ್ಟು ಸೈರಿಸಿರ್ಪಿರವೆ ಪೇದೇ ಕೈತನನಂ ||೧೬೬ ||
ಮ || ಅನುಕೂಲಂ ಬಿದಿ ಕೈಕೆಗಕ್ರಮದಿನಿತ್ಯಂ ರಾಮಂ ರಾಮದೇ |
ವನದ೦ ಲಕ್ಷ್ಮಣದೇವ ವಿಾಜುವು ದುಮಣ್ಣಂಗಕ್ಕುಮುದ್ವೇಗವೆ೦ ||
ದೆನಸು ಮಾಡಿದೆ ಮಾಣ್ಣೆ ಮಾಣದೊಡೆ ವಿದ್ವಿಷ್ಟಾಂಗನಾ ಗರ್ಭ ಪಾ |
ತನಮೇನಾಗದೆ ನೀವಿ ಜೇವೊಡೆಯೆ ನೀನೀ ಸಾಗರಾವರ್ತಮಂ || ೧೬೭ ||
ಅರಸಂ ಪಾಲಿಗೆ ತಪ್ಪೆ ಪಾವಡರ್ದರಂತುನ್ಮಾದವಾದಂತೆ ಮೆಮ್ |
ಮರವಟ್ಟಂತೊಡಲಿಂದುಸಿರ್ ತೋಲಗಿದಂತಾ ಸನ್ನಿಪಾತ ಜ್ವರಂ ||
ದೊರೆಕೊಂಡಂತವಿವೇಕದಿಂದಭಿಜನಂ ವಿದ್ವಜ್ಜನಂ ಮಂಡಲೇ |
ಶ್ವರ ಸೇನಾಪತಿ ಮಂತ್ರಿ ಮಂಡಲಮದೇಂ ಮಾರ್ಕೊಳ್ಳದಂತಿರ್ಕುಮೇ ||೧೬೮||
ಕಂ || ಅದು ಚಿತ್ರದ ಸಭೆ ಮದ ಸ
ರ್ಪದ ಸಭೆ ತಿರ್ಯನುಷ್ಯ ಸಭೆ ಪೆಜತೇನ ||
ಇದೊಡೆ ಪೊವಡಿಸಿ ಕಳೆವುದೆ ಮದೀಯ ನಂದನನನಭಿಜನಾನಂದನನಂ||೧೬೯||
ಎಂದಳಿಲುಮೆರ್ದೆವಲುಮೊದನೆ ಮಗನ ಮೊಗಮಂ ನೋಡಿ-
ಮ || ಕ್ರಮಮಂ ನೋಡದೆ ನಂಟರಂ ತೊಅಳೆದು ನಾಡಂ ಬಿಟ್ಟು ಸಪ್ತಾಂಗ ರಾ |
ಜೃಮನೀಡಾಡಿ ಸಪತ್ನನಂ ನಿಲಿಸಿ ಸಿ೦ಹಾಸಂದಿಯೊಳ್ ತಾಯೆ ದುಃ ||
ಖಮನುತ್ಪಾದಿಸಿ ಪೋಪುದಾವುದುಚಿತಂ ಪಿಂತಿ ಪುದಿಲ್ಲಯ್ಯುದೆ |
ಮುಮನೆಂದ೦ಬಿಕೆ ಮೆಯ್ಯನೊಕ್ಕು ವಿಗಳದ್ಯಾಷ್ಟಾಂಬುವಿಂ ತೇಂಕಿದಳ್ ||
11