ಈ ಪುಟವನ್ನು ಪ್ರಕಟಿಸಲಾಗಿದೆ

ಸಪ್ತಮಾಶ್ವಾಸಂ

೧೭೧

ಕಂ|| ಪರಿತ್ತೆ ಸೈರಿಸುತ್ತು೦
ಗುರು ಜಘನ ಭರ೦ಗಳಿ೦ ತಡಮ್ಮೆಟ್ಟುತ್ತು೦ ||
ಚರಣ ಕಮಲಂಗಳಂ ಸಂ
ವರಿಸುತ್ತುಂ ಸೀತೆ ಸೆಡೆದು ಮೆಲ್ಲನೆ ನಡೆದಳ್|| ೨೭ ||

ಚ || ಒಗೆದ ಕುಚ೦ಗಳಿ೦ ತೊಲಗೆ ಮೇಲುದನೋರಡಿಗೊರ್ಮೆ ಸೀತೆ ಸಾ|
ನಗಿಸುವ ಕೆಯ್ತು ಮುಂ ವದನಚ೦ದ್ರ ಸುಧಾ ರಸ ಬಿಂದುವೆಂಬಿನಂ ||
ನೆಗೆದ ಪಥಶ್ರಮಾಂಬು ಕಣಮುಂ ನಸುಬಂಬಲ ಬಾಡಿದಂಗಮುಂ |
ತ್ರಿಗುಣಿಸೆ ರಾಗಮಂ ಮಗುಟ್ಟು ವೀಕ್ಷಿಸುತುಂ ನಡೆದಂ ರಘುದ್ವಹಂ ||

ಮ||ಸ್ತ||ಕ್ರಮದಿಂ ಪರಂತ ನಾನಾ ಜನಪದ ನಗರ ಗ್ರಾಮ ಪುಣ್ಯಾಶ್ರಮ ಪ್ರಾ೦ |
ತಮೆ ಬೀಡಪ್ಪಂತು ಸೌಮಿತ್ರಿಯ ಸಮುಚಿತ ಪಠ್ಯಷ್ಟಿ ಯಿಂ ಸಿಂಗ್ ಯಾತ್ರಾ ||
ಶ್ರಮವೇಗಂ ಪಾರಿಯಾತ್ರಾವನಿಯ ನಿಕಟಮಂ ರಾಘವಂ ಜಾನಕೀ ಸೈ |
ರ ಮುಖಾಬ್ದಾಲೋಕನಂ ಲೋಚನಸುಖ ಮುಖಪಾಥೇಯಮಾಗೆಯೇ
ವಂದಂ || ೨೯ ||

ಅಂತೆಯೇವರ್ಪುದುಂ-

ಮ||ಸ್ತ|| ಫಲಭಾರಾಕ್ರಾಂತ ಸಾರ್ವ ರ್ತುಕ ನಿಕಟವನಂ ಮೇಖಲಾ ಕೀರ್ಣ ವಲ್ಲೀ |
ನಿಲಯಂ ಗ೦ಧೇಭ ಗಂಧೋತ್ಕಟಮವಿರಳ ಸ್ವಾನು ಸ್ಥಳೀ ಪದ್ಮನೀ ||
ತೈಲ ಷಂಡಂ ಕೂಟಕೋಟ ಸ್ಪುರಿತ ಮಣಿ ಮಯೂಖಾವಲೀ ಚಿತ್ರಿತಾಶಾ |
ವಲಯಂ ಕಣ್ಣ೦ ಮನಕ್ಕಂ ಪಡೆದುದು ಪದೆಪಂ ಚಿತ್ರಕೂಟಾಚಲೇ೦ದ್ರ೦ ||೩೦||

ಫಣಿಲೋಕ೦ ಪಾದಪೀಠಂ ತನಗೆನೆ ರಸೆಯಂ ಮೆಟ್ಟಿ ಮತ್ತಿತ್ತ ತಾರಾ |
ಗಣಮಂ ತಳ್ಕೊಯ್ದು ಪೇರರ್ವಿಗಳಿನಸದಳಂ ಕಣೆ ಚೆಲ್ವಾಗಿ ನಾನಾ ||
ಮಣಿಕೂಟಂ ಚಿತ್ರಕೂಟಂ ಸೊಗಯಿಸೆ ಪದೆಸಿ ಸೀತೆಯುಂ ರಾಮನುಂ ಲ |
ಕ್ಷಣನುಂ ನೋಡುತ್ತು ಮುತ್ಕಂಟಕಿತ ತನುಗಳಾಶೈಲಮಂ ದಾಂಟಪೋದರ್ ||


ಅಂತವರ್ ಚಿತ್ರಕೂಟಾಚಲೇಂದ್ರಮಂ ಬಲದೊಳಿಕ್ಕೆ ಪೋಗಿ ತದನಂತರ
ಮವಂತೀ ವಿಷಯದೊಳಗನೆ ಬರುತ್ತು ಮದೊಂದು ವಟ ವಿಟಮಿಚ್ಛಾಯಾಚ್ಛಾದಿತ
ವಪ್ಪ ತಣ್ಣು ಅಲ ನುಣ್ಣಸಲೆಯೊಳ್ ವಿಶ್ರಮಿಸಿ ಪರಿಶ್ರಮವನಾಜೀಸುತ್ತು೦-

ಕಂ || ಫಲಭರಿತಂಗಳ ನೀಕೆ
ಝೂಲಂಗಳಂ ಕಾವರಿಲ್ಲ ನಿರ್ಜ೦ತುಕಮಿ ||
ನೆಲನನಿತುಂ ಬೇಡರ ಮೇಣ್
ಕೆಲದರಸರ ಬಾಧೆಯಿಂದ ಪಾಲಿಸಾಯ್ತ ಕುಂ|| ೩೨ ||