ಈ ಪುಟವನ್ನು ಪ್ರಕಟಿಸಲಾಗಿದೆ

೧೭೨

ರಾಮಚಂದ್ರಚರಿತಪುರಾಣಂ

ಎಂದು ನುಡಿಯುತ್ತು ಮಿರ್ಸಿನವೊರ್ವ೦ ಮಾರ್ಬಟ್ಟೆಯೊಳ್ ಬರುತ್ತು ಮನರ೦
ಕಟ್ಟಿದಿರೊಳೆ ಕಂಡೆಆಗಿ ಪೊಡೆವಟ್ಟು ಮರವಟ್ಟಿರ್ಪುದುಂ, ಲಕ್ಷ್ಮಣನನನನಂಜ
ದಿರೆಂದನುನಯಮಂ ನುಡಿದೀ ನಾಡೇಕೆ ಪಾರಾದುದೆನೆ ಮುಕುಳಿತಾಂಜಲಿ
ಪುಟನಿಂತೆಂದಂ-

ಕಂ || ಇದವಂತಿ ವಿಷಯ ವಿಷ
ಯದೊಳುಂಟುಜ್ಜಯಿನಿಯೆಂಬ ಪೋಲಿಲದನಾಳ್ವಂ ||
ಮದವದರಿ ಕರಟಿ ಮಸ್ತಕ
ವಿದಾರಿ ಸಿ೦ಹೋದರಂ ಪರಾಕ್ರಮಸಿಂಹಂ ||೩೩ ||

ಆತಂ ತನ್ನ ಸಾಮಂತನಪ್ಪ ವಜ್ರ ಕರ್ಣ೦ ತನಗೆ ಕೈತವದಿಂದೆಂಗುವುದಂ
ಕರ್ಣಪರಂಪರೆಯಿಂ ಕೇಳು ಕಡುಮುಳಿದು-

ಮ || ಸಕಲಜ್ಞಂ ಪೊಜಿಗಾಗೆ ಕೈ ಮುಗಿಯೆನೆಂಬೀ ಪೂಣೈಯಿಂ ರತ್ನಮು |
ದ್ರಿಕೆಯೊಳ್ ಕೀಲಿಸಿ ಜೈನಬಿಂಬಮನದೇನು, ನನ್ನ ಮ ||
ಸ್ತ ಕನಪ್ಪ ಗಡ ವಜ್ರ ಕರ್ಣನೆನಗಂ ಕೌಟಿಲ್ಯದಿಂದೆಂದು ನಾ |
ನ ಕಷಾಯಾಶಯನಾತನಿರ್ದ ಪುರವಂ ಸಿ೦ಹೋದರಂ ಮುತ್ತಿದಂ || ೩೪ ||


ಅದ ಅನಾತನೊಳಾದ ಭೀತಿಯಿನೀವಿಷಯಮಿನಿತುಂ ಪಾಟಿಲಾದುದಾ ದಶಪುರ
ಮುಮಿದೆ ದೆಸೆಯದಿಲ್ಲಿಗನತಿದೂರಮೆಂದು ಬಿನ್ನವಿಸಿ ಬೀಳ್ಕೊಂಡು ಪೋಪುದು೦ -

ಮ || ವ್ರತಮಂ ಪಾಲಿಸಿದಂ ಮಹಾಪುರುಷನೆಂಬೀ ಸಂತಸ೦ಗೆಟ್ಟು ದು |
ರತಿ ಸಿ೦ಹೋದರನಮತ್ತ ಚರಿತ೦ಗಾ ವಜ್ರ ಕರ್ಣಂಗೆ ದು ||
ಸ್ಥಿತಿಯಂ ಮಾಡುವೆನೆಂದು ಬಂದು ಪುರನಂ ಮುರ್ದದಂ ತನ್ಮದೋ |
ದ್ದ ತನಂ ಬಾರಿಸವೇಲ್ಪುದಲ್ಲದೊಡುಪೇಕ್ಷಾ ದೋಷಮೇನಾಗದೇ || ೩೫ ||

ಕದನೋದ್ಯೋಗದಿನಾಳ ನೆತ್ತಿಬರೆಯುಂ ಬೆಳ್ಳು ತ್ತು ಬೆನ್ನಿನಿ |
ಲ್ಲ ದೃಢಾಂದಳೆದಂ ಪಲರ್ ಪೊಗಟ್ಟಿನಂ ನಿಶ್ಯಂಕೆಯಿಂ ಪೂಣೇದ ||
ಪ್ಪಿದನಿಲೈಹಿಕ ಲಾಭಮಂ ಬಗೆದನಿಲ್ಲೇ ವೇಳೆ ಸದೃಷ್ಟಿಗ |
ಇದಸದೃಷ್ಟಿಗೆ ವಜ್ರ ಕರ್ಣನೆ ವಲಂ ಕೈಯಂ ನೊಸಲ್ಲು ಯ್ಯ ದಂ || ೩೬ ||
ಎನುತ್ತವರಲ್ಲಿ 'ತಳರ್ದು ದಶ ಪುರಮನೆಯೇ ವರ್ಪುದು೦ -


1. ತಳೆದು. ಚ.