ಈ ಪುಟವನ್ನು ಪ್ರಕಟಿಸಲಾಗಿದೆ

೧೭೯

ಸಪ್ತಮಾಶ್ವಾಸಂ


ಕ೦ || ಬಜುಗಡ್ಕೊಳೊಂದೆ ಮೆಯ್ಯೋಳ್
ಮಲವಕ್ಕಮನಿಕ್ಕಿ ಗೆಲ್ಲು ಸಿ೦ಹೋದರನಂ ||
ಸೆಲೆಗೊಂಡುಯ್ದಂ ಕೃಷ್ಣಂ
ಪೆಲಿಂಗೆ ಪೇರ್ ಬಾಹುವೀರ್ಯವಿನಿತಾದ ಪುದೇ|| ೬೯ ||

ಎಂದು ಮನದೊಳೆ ನಿಶ್ಮಿಸಿ ಪರಿವೃತ ಕತಿಪಯ ಪರಿಜನಂ ವಜ್ರಕರ್ಣ೦
ವಜ್ರಕುಂಡಲ ಮರೀಚಿ ಪಗಲ ಸಿರಿಗೆ ಕಣ್ಣೆ ಅವಿಮಾಡೆ ದೂರೋತ್ಸಾರಿತ ವಿಚಿತ್ರಾ
ತಪತ್ರ ವಿವಿಧ ವಾಹನ ಬಸದಿಯ ಬಲಗೊಂಡು ದರ್ಶನಸ್ತುತಿಗೆಯ ತಿಸಂಭ್ರ
ಮದಿಂ ಬಂದು ಮಣಿಮುಕುಟ ಮಯೂಖ ಲೇಖೆ ಪಸರಿಸೆ ದೀಪವರ್ತಿ ನಿಧಿಗೆಅಗು
ವಂತೆ ಆಗುವುದುಂ-

ಮ || ಬಲವರಿಗಳಲ್ಲಿ ಮುನ್ನೆ ಎಳೆದುಕೊಂಡಂತಿರ್ದುವಂ ರಾಮ ಕೋ |
ಮಲ ಪಾದ ದ್ವಿತಯಂ ನತಂಗೆ ಪಡೆದತ್ತತ್ಯುನ್ನತಾಂಗುಷ್ಠದಿ೦ ||
ಬೆಳಗುತ್ತಿರ್ಪ ನಖಂಗಳಿ೦ ತಳದ ಕೆಂಪಿ೦ ವಜಕರ್ಣಂಗೆ ನಿ |
ಶ್ಚಲಮಪ್ಪಂತಿರೆ ಬೇಗಮುನ್ನತಿಯನುಷ್ಯಜಮಂ ರಾಗಮಂ||೭೦ ||

ಕೊಟ್ಟುದು ರಾಗಮಂ ತಳಮುದಂಶುಗಳಿಂ ನಖಪಜಿ ಪಟ್ಟಮಂ |
ಕಟ್ಟಿದುದುನ್ನತಾಂಗುಲಿ ಸಮುನ್ನತಿಯಿಂ ಚರಣಾನತಂಗೆ ಮುಂ ||
ದಿಟ್ಟುದು ವಜ್ರ ಕರ್ಣ ವಸುಧಾ ರಮಣೀ ರಮಣಂಗೆ ತೊಟ್ಟೆನಲ್ |
ಪುಟ್ಟಿಸಿದತ್ತು ಮೆಯ್ಕ ವಿರ್ಗಳಂ ರಘುವೀರ ವಚಸ್ಸುಧಾರಸಂ || ೭೧ ||

ಅನಂತರ -

ಕಂ|| ಎಜಗದೊಡೆ ನೀಚ ವೃತ್ತಿಯ
ನೆಗಿದೊಡುನ್ನತಿಯನೀವ ವಿಪರೀತ ಗುಣ ||
ಕೈಜತೆವೆಟ್ಟೆನಿಸಿದುಪೇಂದ್ರಂ
ಗೆಣಗಿದನಾದರದೆ ವಜ್ರ ಕರ್ಣನರೇಂದ್ರಂ|| ೭೨ ||

ಅಂತು ವಿನತನಾಗಿ-

ಕಂ || ಮನಮಂ ಕಾರುಣ್ಯ ರಸಂ
ತನುವಂ ರಾಘವನ ದೇಹರುಚಿ ಪುದಿಯೆ ಸುಧಾ ||
ವನನಿಧಿಯೊಳ್ ಮುಳುಗಿದವೋ
ಲನುರಕ್ತಂ ಮುಂದೆ ಮುಗಿದ ಕೈ ವರಸಿರ್ದ೦|| ೭೩ ||

ಅಂತು ಸಮುಚಿತ ಪ್ರದೇಶದೊಳಿರ್ಪುದುಮಾ ಸಮಯದೊಳ್-