ಈ ಪುಟವನ್ನು ಪ್ರಕಟಿಸಲಾಗಿದೆ

೧೮೦

ರಾಮಚಂದ್ರಚರಿತಪುರಾಣಂ

ಕಂ|| ಭಂಗಿ ಮನಸಿಜನ ಗಾಡಿಗೆ
ಭಂಗಮನೊಡರಿಸಿ ಕಿರೀಟ ಕಿರಣಂ ನಭಮಂ ||
ರಂಗಿಸೆ ಕಿಅದಾನುಂ ಚತು
ರಂಗ ಬಲಂ ಬೆರಸು ವಿದ್ಯುದಂಗಂ ಬಂದಂ|| ೭೪ ||

ಅಂತು ಬಂದು-
ಕ೦ || ಶ್ರೀಮುಖ ದರ್ಶನಮೊಡರಿಸೆ
ರೋಮಾಂಚನೆ ಆಗಿ ವಿದ್ಯು ದಂಗಂ ಮುನ್ನ೦ ||
ಕಾಮಧ್ವಂಸಿಗೆ ಬಲಿಯಂ
ರಾಮುಂಗಂ ಲಕ್ಷಣಂಗಮಾನತನಾದಂ|| ೭೫ ||


ಅ೦ತಾನತನಾಗಿ ವಜಕರ್ಣನ ಕೆಲದೊಳ್ ಕುಳ್ಳಿ ರ್ಪುದುಂ ಲಕ್ಷಣಕುಮಾರ
ನೀತನಾರ್ಗೆನೆ ವಿದ್ಯುದಂಗನೆಂಬಂ ಕುಂಡಳಪುರದ ಪರದನುಜ್ಜಯಿನಿಗೆ ಪರದುವೋಗಿ
ಕಾಮಲತೆ ವೆಸರ ಪೆಂಡವಾಸದ ವಿಲಾಸಿನಿಗೆ ವಲ್ಲಭನಾಗಿರ್ದಾಕೆಯತ್ತಣಿಂ ಸಿ೦ಹೋ
ದರನೆನಗೆ ರತ್ನತ್ರಯಾರಾಧಕಂಗಲ್ಲದೆ ಪೆಱರ್ಗೆ ಅಗೆನೆಂದುದರ್ಕೆ ಕಡುಮುಳಿದು
ಕೊಲಲೆಂದು ಬಂದು ಬಲಿಯಟ್ಟ ದುದಂ ಕೇಳ ದುವೆ ಪೋಚ್ಚಾಗೆ ದಶಪುರಕ್ಕೆ
ಬರುತುಮಿದಿರೊಳೆನ್ನಂ ಕ೦ಡೆನಗೀವೃತಾಂತಮಂ ಪೇಟ್ಟು ಪೋಗಲೀಯದೆ ಮಗುವಿಗೆ
ಬಂದು ನಿನ್ನಾ ದುದನಪ್ಪೆನೆಂದು ಕದನ ಸಹಾಯನಾಗಿರ್ದನಕಾರಣ ಬಂಧುವೀತ
ನೆಂದು ಬಿನ್ನವಿಸೆ ತದನಂತರಂ ವಜ್ರ ಕರ್ಣನ ಮೊಗಮಂ ನೋಡಿ ರಾಮದೇವಂ
ನಿಜವ್ರತ ಪರಿಪಾಲನ ಪರಿಣಾಮಕ್ಕೆ ಮೆಚ್ಚಿ ದೆಂ, ಮೆಚ್ಚಿದುದು ಬೇಡಿಕೊಳ್ಳೆನೆ ಮಹಾ
ಪ್ರಸಾದವೆಂದಿಂತೆಂದಂ-

ಕಂ || ಪ್ರಾಣೋಪಕಾರಮಂ ಕ
ಲ್ಯಾಣಮನೆನಗಿತ್ತು ದೇಹ ತಣಿಯದ ನಿಮಿಾ ||
ತ್ರಾಣ ಪ್ರವೀಣ 'ಪರಮ
ಪ್ರಾಣಿ ಹಿತಾಚರಣವಿತರ ಸಾಧಾರಣವೇ|| ೭೬ ||

ಅಣುವಿಂ ಕಿಆತಿ ದಾದುದು ಧಾ
ರಿಣಿ ದೇವರ ಬಗೆಗೆ ದೇವ ನಿಜ ಸತ್ವಗುಣಂ ||
ಫಣಿಪತಿಗಮರಿದು ಮನುಜಂ
ಗಣನಾರ್ಹನೆ ಪೊಗಲೋ೦ದೆ ನಾಲಗೆಯ ಜಡಂ ||೭೭ ||


1.ಧಮ್ಮ. ಚ.