ಈ ಪುಟವನ್ನು ಪ್ರಕಟಿಸಲಾಗಿದೆ

೧೮೧

ಸಪ್ತಮಾಶ್ವಾಸಂ

ಕ೦ || ದೇವರ ಬರವೆನಗಾದುದು
ದೇವರ ಬರವೆನ್ನ ಸಯ್ತಿನಿಂ ದೇವ ಭವ ||
ತೇವೆ ದೊರೆಕೊಂಡುದೆನಗಿ
ನ್ಯಾವುದುಮರಿದುಂಟೆ ಬೇಡಿ ಪಡೆವನಿತುವರಂ | ೭೮ ||

ಅದಂ ದೇವ ಸಿಂಹೋದರಂಗೆ ಕಾರುಣ್ಯಂಗೆಯ್ಯುದೆಂದು ಬಿನ್ನವಿಸೆ ಲಕ್ಷ್ಮೀ
ಧರನದರ್ಕೆ ಮೆಚ್ಚಿ-

ಚ || ಕಡೆದೊಡೆ ಪಾಲ್ ಡಲ್ ವಿವಿಧವಸ್ತುವನೀಯದೆ ತೇಯೆ ಚಂದನಂ |
ಕುಡದೆ ಸುಗಂಧಮಂ ಪಿಲಿಯೆ ಕರ್ಬಿನಿದಾಗದೆ ಕಾಸೆ ಕಾಂಚನಂ ||
ಪಡೆಯದೆ ಕಾಂತಿಯಂ ನಿಜದಿನೊಳ್ಳಿ ದರಪ್ಪನರೆಂತು ಬಾಧೆವ
ಟ್ರೋಡಮುಪಕಾರಮಂ ಪೆರ್ಗೆ ಮಾಡದೆ ಬಾಧೆಯನೇಕೆ ಮಾಡುವರ್ ||೭೯||

ಕಂ || ಇಜಿಯ ಬಗೆದು ಸಿಂಹೋ
ದರನಿರೆಯುಂ ವಜ್ರ ಕರ್ಣನೊಳನೆ ಬಗೆದಂ ||
ಪರಪೀಡಾ ಕರಣದೋಳೇಂ
ಪರೋಪಕಾರ ಪ್ರಿಯಂಗೆ ಬಗೆ ಬಂದಪುದೇ|| ೮೦ ||

ಎಂದು ನುಡಿದನಂತರಂ ದಾಮೋದರಂ ಸಿಂಹೋದರಂಗಂ ವಜಕರ್ಣಂಗಂ
ಪರಸ್ಪರ ಕರಗ್ರಹಣದಿಂ ಮನದ ಕಲುಷಮಂ ಕಳೆದು, ನಾಡುಮಂ ಬೀಡುಮಂ
ಪಚ್ಚು ಕೊಟ್ಟು-

ಕಂ || ನುಡಿ ಕಿತ್ತಡವೆನಿಸದೆ ನೇ
ರ್ಪಡುಗಿಡದೆ ನರೇಂದ್ರನಾಚ್ಛೆಯಿಂದಿರ್ಪುದಿದಂ ||
ಕಡೆಗಣಿಸೆ ಬುಕ್ಕಣ್ಣನ
ತುಡುವ ಶಿಲೀಮುಖದೊಳುಂಟೆ ಮುಖದಾಕ್ಷಿಣ್ಯಂ || ೮೧ ||

ಎಂದು ನಿಯಮಿಸುವುದುಂ ವಜಕರ್ಣ೦ ಪರಿಪೂರ್ಣ ಮನೋರಥಂ ದಾಶ
ರಥಿಯಂ ದೇವರೆನ್ನ ಮನೆಗೆ ಬಿಜಯಂಗೆಯ್ಯುದೆಂದುಯ್ದ ಸಮಯದೊಳ್-

ಕಂ || ತುಲುಗಿದುವು ತೋರಣಂ ಕೈ
ನಿಜದುವು ಗುಡಿ ಕಿವುಡುವೀಳ್ವನಂ ದಿಕ್ಕರಿಗಲ್ಲ ||
ಪಜೀತಿ ಮೊಳಗಿದುವುನ್ನತಿ ಕ
ಣ್ಣೆ ಅಲೆದಂತೆವೋಲಾದುದುತ್ಸವಂ ದಶಪುರದೊಳ್||೮೨ ||


1. “ಅರಿಯಲೆ ಎಂದಿದ್ದಲ್ಲಿ ಪ್ರಾಸವಿರೋಧವಾಗುತ್ತಿರಲಿಲ್ಲ.