ಈ ಪುಟವನ್ನು ಪ್ರಕಟಿಸಲಾಗಿದೆ

೧೯೨

ರಾಮಚಂದ್ರಚರಿತಪುರಾಣಂ

ಉ || ಮಾಲ ಸವಾಳಿಯಿಂದಮುರಗಾಲಯಮಂ ಬಹುಶಾಖೆಯಿಂದಮಿ೦ |
ದ್ರಾಲಯಮಂ ಪಳಂಚಿ ತಮಮಂ ಸೆಜಿಗೆಯು ಹಿಮಕ್ಕೆ ಕೊಂಬುಗೊ ||
ಜ್ವಾಲಮನಗ್ರ ಪಲ್ಲವ ಕರಾಗ್ರ ನಿರುದ್ದ ಮರುತ್ತರಂಗಿಣೀ |
ಕೂಲಮನೆಯೀದರ್ ವಿಜಿತ ಚ೦ಡಮರೀಚಿ ಮರೀಚಿ ಜಾಲಮಂ ||೧೨೭ ||

ಅಂತೆಯೇ ವರ್ಪುದುಮಾ ನಟ ನಿವಾಸಿಯಪ್ಪಿ ಭಕರ್ಣದೇವನ ವರಪುಣ್ಯ ಪ್ರಭಾ
ವಕ್ಕೆ ಬೆರ್ಚಿ ಬೆಗಡುಗೊ೦ಡೋಡಿಪೋಗಿ ವಿಂಧ್ಯಾ ಟಿವಿಯೊಳಿರ್ಪ ಯಕ್ಷರಾಜಂ
ಕ್ರೀಡಾಪೂತನೆಂಬ೦ಗೆ ಚಂಡ ಕೋದಂಡ ಧರರಿರ್ವರೆನ್ನಾ ವಾಸಮಂ ಕೈಕೊಂಡೊ
ಡಾನವರ ದೇಹ ದೀಪ್ತಿಗಲ್ಲಿ ನಿಲಲಳ್ಳಿ ಬಳ್ಳುತ್ತು೦ ನಿಮಗ ಆಪಲ್ ಬಂದೆನೆಂಬುದು
ನವಧಿಯಿನವರೀಕಾಲದ ಬಲದೇವ ವಾಸುದೇವರೆಂಬುದುಮನವರ ಬ೦ದ ತೆನು
ಮನದವರ್ಗೆ ಸತ್ಯಾರಮನೊಡರ್ಚಲೆಂದು -

ಕಂ || ಕ್ರೀಡಾಪೂತಂ ಪುರಮಂ
ಮಾಡಿದನಳಕಾಪುರಕ್ಕಮಮರಾವತಿಗಂ ||
ನಾಡೆಯುಮಧಿಕಮನಲ್ ಮಣಿ
'ನಾಡ ಪ್ರಾಕಾರ ಗೋಪುರಾಬ್ಬಾಳಕಮಂ || ೧೨೮ ||

ಪುರದ ಬಹಿಃಪುರದಂತಃ
ಪುರದರಮನೆಯವನಿಪತಿಯ ಮಾಡದ ಹಯಮಂ ||
ದಿರದಾನೆ ಸಾಲೆಯಂದಂ
ಬರೆಯಲ್ ಕಂಡರಿಸಲರಿದು ಮಾಂಡವ್ಯಂಗಂ || ೧೨೯ ||

ಮತೆಗಾಲ೦ ಬರೆಯುಂ ಪೆ
ರ್ವುವಿನೊಳಂ ಯಕ್ಷ ವಿಕ್ರಿಯಾ ಜನಿ ತಮದೇ೦ ||
ಪೊಲೀಲಾದುದೊ ರಘುರಾಮನ
ಪಟುಗಲಿದ ಪೊಗವೆತ್ತ ಪುಣೋದಯದಿಂ || ೧೩೦ ||

ಅಂತಪೂರ್ವಮೆನೆ ಪುರಮಂ ವಿಗುರ್ವಿಸಿ -

ಮಂದಾಕ್ರಾಂತ|| ಕಿಂಕುರ್ವಾಣ ಪ್ರವಣರರೆಬರ್ ಬರ್ಪಿನಂ ಕಾದು ತನ್ನ೦ |
ಬಿಂಕಂ ಪೊಂಕಂ ಗಿಡಿಸಿ ನನೆವಿಲ್ಲಾ ತನಂ ತೊಟ್ಟ ದಿವ್ಯಾ ||
ಲ೦ಕಾರಂಗಳ್ ನಯನ ಸುಖಮಂ ನೀಡೆ ಬಂದ ರ್ಫ್ಯಮಂ ಯ |
ಕ್ಷ೦ ಕೊಟ್ಟಂ ರಾಘವನ ಚರಣಕ್ಕಿನ್ನರಾರ್ ಧನ್ಯ ಜನ್ಮರ್‌ ||೧೩೧||


1. ನೀಡ. ಚ.