ಈ ಪುಟವನ್ನು ಪ್ರಕಟಿಸಲಾಗಿದೆ
ಸಪ್ತಮಾಶ್ವಾಸಂ
೧೯೩

ಅಂತರ್ವ್ಯಪಾದ್ಯಮಂ ಕೊಟ್ಟು ಕೈಗಳಂ ಮುಗಿದು-

ಶಾ || ಆಸನ್ನಂ ಮಟತೆಗಾಲಮನ್ನ ಪುರದೊಳ್ ನೀಮನ್ನೆಗಂ ದಿಗ್ವಯ |
ವ್ಯಾಸಂಗಾರ್ಥಿಗಳಾಗದಿರ್ದು ಚರಿತಾರ್ಥ೦ಮಾದೆನ್ನಂ ಪರಾ ||
ರ್ಥಾಸೀನಂ ನಿಜವೃತ್ತ ಮೆಂದು ನುಡಿದೆಂತಾನುಂ ಪ್ರಿಯ ಪ್ರಾರ್ಥನಾ |
ವ್ಯಾಸಂಗಾರ್ಥಿ ನರೇಂದ್ರನಂ ನಿಲಿಸಿದಂ ಯಕ್ಷಂ ಪರಾರ್ಥಪ್ರಿಯಂ || ೧೩೨ ||

ಅಂತೆಂತಾನುಂ ನಿಲಿಸಿ ತನ್ನ ನಿಗುರ್ವಿಸಿದ ಪುರಕ್ಕುಯು-

ಕಂ || ಅರಮನೆಯೊಳ್ ಬಹುವಿಧ ಪರಿ
ಕರ ಪೂರ್ಣದೊಳಿರಿಸಿ ಮಾಡಿದಂ ಯಕ್ಷ ದಿ ||
ಕರಿ ಕರ್ಣ ಕುಹರವಂ ಪಟ
ಹರವಂ ತಳ್ತಯ್ಯ ರಘುಸುತ೦ಗಭಿಷವನಂ || ೧೩೩ ||

ಅ೦ತು ರಾಜ್ಯಾಭಿಷೇಕಂಗೆಯ್ದು -

ಕಂ ॥ ಬೇಡದೆ ಬೇಟ್ಟಿನಿತುಮನೆಡೆ
ಮಾಡದೆ ಸದನದು ತೀರ್ಚಿ ಪರ್ಯಷ್ಟಿಯಲಂ||
ಪೋಡದೆ ರಾಮಂಗೊಳ್ಳಂ
ಮಾಡಿದನುಚಿತೋಪಚಾರ ದಕ್ಷ ಯಕ್ಷಂ ||೧೩೪ ||

ಮತ್ತಿತ್ತಲಾ ಕಪಿಲನೆ೦ದಿನ೦ದದ.ವಿಪಿನದೊಳ್ ತೋಲುತ್ತು೦-

ಕ೦ | ಎನಗಾಡುಂಬೋಲನೀ ಕಾ
ನನವಿದರೊಳಗಿನ್ನೆವರೆಗಮಾಂ ಕಾಣೆಂ ಲೋ ||
ಚನ ಹೃದಯ ಹಾರಿ ಪುರವೆ೦
ದಸಿದಂ ಕ೦ಡೆ೦ ದಲೆಂದು ವಿಸ್ಮಿತನಾದಂ || ೧೩೫ ||

ಆ ಸಮಯದೊಳ್ ಸಮಯಾಭಿಧಾನ ಯಕ್ಷ ಪ್ರತ್ಯಕ್ಷನಾಗೆ ಪುರೋಭಾಗಕ್ಕೆ
ಬರೆ ಕಪಿಲಂ ಕ೦ಡಬ್ಬಾ | ಪೇಪುರಕ್ಕೆ ಹೆಸರಾವುದಿದರ್ಕಧಿಪತಿಯಾರೆಂಬುದು೦ -
ರಾಮಪುರ ಮೆಂಬುದಿದು ರಘು
ರಾಮಂ ಪುರದೊಡೆಯನಖಿಲ ವಸುಧೆಗೆ ಕಲ್ಲಾ ||
ರಾಮಮನೆ ಕೊಟ್ಟಪಂ ವಸು
ಧಾಮರ ನೀಂ ಪೋಗಿ ಬೇಡಿಕೊಳ್ ಕಸವರಮಂ ||೧೩೬ ||


1. ಸುಮನಸಾಭಿಧಾನ. ಚ.

13