ನಿಮಿರ್ದೆಸೆಯೆ ನೋಡಿದಳ್ ಸಂ
ಭ್ರಮದಿಂ ವನಮಾಲೆ ಬಾಲೆ ಪೀತಾಂಬರನಂ ||೧೩ ||
ಆ ಸಮಯದೊಳ್ ಲಕ್ಷಣಕುಮಾರನುಮಾಕೆಯಂ ನೋಡದಂತು ನೋಡೆ-
ಕಂ|| ಪಲ್ಲಟಿಸದೆ ಕಣ್ಣಳ್ ನಿಂ
ದಲ್ಲಿಯೆ ನಿಲೆ ತಮ್ಮೊಳೆಳಸಿ ನೋಡುವ ಪದದೊಳ್ ||
ಫುಲ್ಲಶರ೦ ಕೆಳವಾಡಿಯ
ಬಿಲ್ಲ೦ತಿರ್ದೆಸಗದರಲ ಸರಲಂ ಸುರಿದಂ || ೧೪ ||
ಚ || ನಡುವಿರುಳಾರುಮಿಲ್ಲದೆಡೆಯೊಳ್ ಕೊರಲೊಳ್ ವಧು ಕೊದು ಬಳ್ಳಿಯಂ |
ಮಡಿಯಲೊಡರ್ಚೆ ಲಕ್ಷ್ಮಣನಿಮಿತ್ತದಿ'ನಾತನೆ ದೈವದೊಂದೊಡಂ ||
ಬಡಿಕೆಯಿನಾಗಳಾ ಯಿರುಳೊಳಲಿಗೆ ತಾಂ ಪಟವಟ್ಟು ಬಂದು ಕ |
ಝಿಡಿದೊಡೆ ಸಾವು ನಾಣ್ಣುದೆನೆ ಸಾಯದರಂ ಕೊಲಲಾರುಮಾರ್ಪರೇ ||೧೫||
ಅನಂತರಮಾ ಕಾಂತೆವೆರಸು ಲಕ್ಷಣಂ ನಿಜಾಗ್ರಜನಿರ್ದ ಲತಾಗೃಹಕ್ಕೆ
ಪೋದನಿತ್ತ ಲಾ ವನಮಾಲೆಯ ಕೆಳದಿಯರುವಾಕೆಯಂ ಶಯಾತಲದೊಳ್ ಕಾಣದೆ
ಬೆಗಡುಗೊಂಡಾ ಬನದೊಳ್ ತೊಅಲ್ಬ ಅಸುತ್ತು ಬಂದಲ್ಲಿರ್ದಳಂ ಕಂಡಲ್ಲಿರ್ದ
ಮಹಾನುಭಾವರಂ ರಾಮಲಕ್ಷ್ಮಣರೆಂದಅದು ಮೈ ಗಾಸಿನವರ್ ಸರಿತಂದು ತನ
ಗಜ ಪುವುದುಂ ಪೃಥ್ವಿಧರ ಮಹಾರಾಜ೦ ಕೇಳು ಪುರದೊಳಷ್ಟ ಶೋಭೆಯಂ
ಮಾಡಿಸಿ ಚತುರಂಗಬಲಂಬೆರಸು ಬೇಗನಿದಿರ್ವೊಗಿ ರಾಜಭವನಕ್ಕುಯ್ದ ಭ್ಯಾಗತ
ಪ್ರತಿಪತ್ತಿಯಿಂ ಮನ್ನಿಸಿ ಶುಭದಿನ ಮುಹೂರ್ತದೊಳ್ -
ಕಂ|| ಉತ್ತಮ ಕನ್ಯಾರತ್ನಮ್
ನಿತ್ಯಂ ದೃಢೀಧರಂ ನರೇಂದ್ರೋತ್ತಮನ ||
ತ್ಯುತ್ತಮ ವರನೆನಿಸಿದ ಪುರು
ಷೋತ್ತಮ ದೇವಂಗೆ ಕೂಸುಗುಡಲಾರ್ಪಡೆವರ್ || ೧೬ ||
ಅಂತು ವನಮಾಲೆಗಂ ಚಕ್ರಪಾಣಿಗಂ ಪಾಣಿಗ್ರಹಣಮಪ್ಪುದುಮಾ ಸಮಯ
ದೊಳೊರ್ವ೦ ನಂದ್ಯಾವರ್ತ ಪುರನನಾಳ್ವತಿವೀರನ ದೂತಂ ಬಂದು ದೂರಾವನತ
ಮಸ್ತಕಂ ಸಮಸ್ತ ರಾಜಲೋಕಮನೇಕಾಕ್ಷೌಹಿಣೇಬಲಂ ಬೆರಸು ತನ್ನೊಳ್ ಕೂಡೆ
ಭರತನ ಮೇಲೆ ನಡೆಯಲೆಂದೆಮ್ಮರಸಂ ನಿಮಗೆ ಬಲಿಯಟ್ಟಿದ ರಾಜಾದೇಶವೆಂದು
ಪೃಥ್ವಿಧರಂಗೆ ಬಿನ್ನವಿಸೆ ಕೇಳು-
1. ನಾಕಯ, ಗ, ಚ.