ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೦ ರಾಮಚಂದ್ರಚರಿತ ಪುರಾಣಂ ಮ | ಪ್ರತಿಮಾ ಯೋಗ ನಿಯುಕ್ತರೆಂಟು ದಿವಸಂ ಕೈಯೆತ್ತೆವೆಂದಿರ್ದರ | ಪ್ರತಿಮ‌ ಚಾರಣರಾ ನಗೋಪರಿವದೊಳ್ ತತ್ಪಾರ್ಶ್ವದೊಳ್ ಮೂವರ || ಪ್ರತಿರೂಪಾನ್ವಿತೆಯರ್ ಸಿತಾ೦ಶುಕೆ ಯರಿರ್ದರ್ ಕನ್ನೆಯರ್ಕಳ್ ಮಧು || ವ್ರತ ಮಾಳಾಯತ ವೇಣಿಗಳ ಜಪಿಯಿಸುತ್ತುಂ ದಿವ್ಯ ಮಂತ್ರಂಗಳಂ 11 ೫೮ || ಆ ಸಮಯದೊಳ್ ಲಯ ಸಮಯದ ಕೇಸುರಿಯ ಮಸಕನನ ಪ್ಪು ಕೆಯ್ಯು ಕಂ|| ಚಾರಣ ಯುಗಳಮುಮಂ ಕ ನ್ಯಾರತ್ನ೦ಗಳುವನಳುರ್ದು ಸುಡಲೊಡರಿಪುದಂ || ದಾರುಣ ದಾವಾನಲನಂ ಮಾರುತಿ ಜಲವರ್ಷ ವಿದ್ಯೆಯಿಂ ನಲಸಿದಂ || ೫೯ || ಆ ಮಹೋಪಸರ್ಗಮಂ ಪಿಂಗಿಸಿ ಮಾಲಿನಿ || ಯತಿ ಪತಿಗಳ ಪಾದಾಂಭೋಜನಂ ಭಕ್ತಿಯಿಂದಂ | ಸತತಗತಿ ತನೂಜಂ ಪೂಜಿಸುತ್ತಿರ್ದನಾಗಳ್ || ಕೃತ ನಿಯಮ ನಿಯುಕ್ತಾಚಾರೆಯರ್ ದಿವ್ಯ ಯೋಗಿ | ದ್ವಿತಯ ಚರಣ ಪೂಜಾನಂತರಂ ಕನ್ನೆಯರ್ಕ* || ೬೦ || ಮಾರುತಿಯ ಮುಖಾರವಿಂದಮಂ ನೋಡಿ ಮಹಾಮಹಿಮ ನೀ೦ ಬಂದೆನುಗ ಖಾ ಮಹಾ ತಪೋಧನರ್ಗ೦ ಸಮನಿಸಿದುಪಸರ್ಗವಂ ತೊಲಗಿಸಿ ಮಹೋಪ ಕಾರಮಂ ಮಾಡಿದೆಯೆಂದು ಸಂಸ್ಕನನ ಪೂರ್ವಕಂ ಮುಕುಲಿತಾ೦ಜಲಿಗಳಾ ಗಿರ್ಪುದು ಕಂ | ಈ ರೌದ್ರಾಟವಿಯೊಳಿದೇ ಕಾರಣದಿಂದಿರ್ದಿರೆಂದು ವಿಸ್ಮಯ ಚಿತ್ರ೦ || ಮಾರುತಿ ಬೆಸಗೊಂಡ ಕ ನ್ಯಾ ರತ್ನಂಗಳನಸಾರ ಕಾರುಣ್ಯ ರಸಂ || ೬೧ !! ಅಂತು ಬೆಸಗೊಳ್ಳುದುಕಂ|| ಅನವದ್ಯ ಚರಿತನೆಂದು ದನಿಬರ ಕಡೆವುಟ್ಟಿದಾಕೆ ಹನುಮಂಗ !! ಜ್ಞನಕಂ ದಧಿಮುಖ ನಗರೀ ಜನಪತಿ ಗಂಧರ್ವನೆಂಬನಂಬರ ಗಮನಂ || ೬ ||