೩೩೪ ಕಾಮಚ೦ದ್ರಚರಿತ ಪುರಾಣಂ ಕಂ || ಏಗೊಂಡಾಕೆಯ ಹೇಳುದ | ನಾಗಡೆ ಕತಿಪಯ ವಿಯಚ್ಚರರ್ಬೆರಸು ಮಹಾ || ಭೋಗಂ ಪೊಕ್ಕಂ ಪುರಮನ ದೇ ಗಹನವೊ ಪವನಜಂಗೆ ದುರ್ಗಮವುಂಟೀ || ೭೬ 11 ಅಂತು ನಿಶ್ಯಂಕೆಯಿಂ ಲಂಕೆಯಂ ಪೊಕ್ಕು ವಿಭೀಷಣನಂ ಕಂಡು ಕ್ಷೇಮ ಕುಶಲ ವಾರ್ತಾನಂತರಮ | ಕುಲಮಂ ಸತ್ಯದ ಶೌಚದಗ್ಗಳಿಕೆಯಂ ಚಾರಿತ್ರಮಂ ಚಾಗಮುಂ | ಚಲಮಂ ದೊರ್ಬಲನುಂ ಕಲಾ ವಿಭವಮಂ ಕೊಂಡಾಡುವೀ ರಾವಣ೦ || ನೆಲನೆಲ್ಲಂ ಪವನ್ನ ಮನ್ಯ ವಧುವಂ ದುರ್ಸೊಹದಿ೦ ಬಾಪ್ತಿಗೆ | ಯ್ಯಲದಂ ಬಾರಿಸದೊಯ್ಯ ನಿರ್ಪುದುಮುಪೇಕ್ಷಾ ದೋಷಮೇನಾಗದೇ 1: ೭೭ || ಚ | ಎಣಿಸದೆ ತನ್ನ ಶೌಚಗುಣಮುಂ ವ್ರತರ ಕ್ಷಣಮಂ ಪರಾಂಗನಾ | ಪ್ರಣಯಮನನ್ನು ಕೆಯ್ಯ ಶರಣಾಗತ ರಕ್ಷಣ ದಕ್ಷನಸ್ಸ ದ || ಕ್ಷಿಣ ಭರತ ಖಂಡ ಧರಣೀಪತಿ ದಾನವ ಚಕ್ರವರ್ತಿ ರಾ || ವಣನಿದನಾಗದೆನ್ನದೊಡೆ ನಿನ್ನ ನೆಗ ಅತ್ತಿಗೆ ಬನ್ನವಾಗದೇ ಕಂ || ಇನ್ನಾದೊಡನೊಪ್ಪಿಸಿ ಸತಿ ಯನ್ನಿಮ್ಮ ಕುಲಾಸವಾದವುಂ ಕಳೆವುದು ನಿ || ಮ್ಮನ್ನರುಪೇಕ್ಷಿಸೆ ನೆಲನು ಇನ್ನೆವರಂ ದಶಮುಖಂಗೆ ದುರ್ಯಶನಕ್ಕುಂ || ೭೮ || 11 ೭೯ !! ಎನೆ ವಿಭೀಷಣನಿಂತೆಂದಂಮಸ್ತ ದನುಜೇ೦ದ್ರ೦ಗಾಗದೆಂದಾನಿದನ ಅಸದುದಾಸೀನದಿಂ ಮುನ್ನಮೇನಿ | ರ್ದೆನೆ ದೃಷ್ಟಾದೃಷ್ಟ ಬಾಧಾಕರವಿದುವೆ ಪರಪ್ರೇಯಸೀ ಪ್ರೇಮವೆ೦ದಿ೦ || ತೆನಿತಾನುಂ ಹೇತು ದೃಷ್ಟಾಂತಮನಡಿಗಡಿಗಾಂ ತೋಜನೆಯುಂ ಪೇಮ್ಪುದಂ ಕೇ ಆನೆ 'ರಾಗೋದ್ವೇಗ ವೇಗಂ ಸಮನಿಸೆ ಹಿತಮಂ ಸೂಕ್ತಮಂ ಕೇಳ್ವನಾವಂ 11 ೮೦ || ಕಂ || ಪನ್ನೊಂದು ದಿವಸಮಿ೦ದಿ೦ ಗನ್ನ ತ್ಯಾಗದೊಳೆ ದೇವಿ ಕುಲಮಂ ವ್ರತಮಂ ||
2 = - 1, ಚಾರವು. ಚ. 2. ರಾಗದ್ವೇಷ, ಗ.