ಆ ಹೊತ್ತಿಗೆ ರಾವಣನು ಅಲ್ಲಿಗೆ ಬಂದು ತನ್ನ ಸ್ತ್ರೀಯರನ್ನು ಕನ್ನೆಯಿಂದ ಹೋಗುವಂತೆ ಮಾಡಲು, ಜಾನಕಿಯು ಹೆದರಿದಳು. ರಾವಣನು ಆಕೆಯ ಎದುರಿಗೆ ಆತ್ಮ ಸ್ತುತಿಯನ್ನೂ ಪರನಿಂದೆಯನ್ನೂ ಮಾಡಿ ತನ್ನ ಕೋರಿಕೆಯನ್ನಿಡೇರಿಸೆಂದು ಕೇಳಿಕೊಂಡನು. ಆ ದುರಾತ್ಮನ ದುರುಕ್ತಿಗೆ ಸೀತೆ ಮನಸ್ಸಿನಲ್ಲಿ ಮುಳಿದು ಹೊರಕ್ಕೆ ತೋರಿಸದೆ ಅ೦ಥ ಪಾಪದ ಮಾತುಗಳನ್ನಾಡುವುದು ತಕ್ಕದಲ್ಲವೆಂದೂ ಪರಸ್ತ್ರೀಯನ್ನಪೇಕ್ಷಿಸುವುದರಿಂದ ಅಧೋಗತಿಯು ಬರುವುದೆಂದೂ ಹೇಳಿ ರಾಮಲಕ್ಷ್ಮಣರಿಲ್ಲದ ವೇಳೆ ತನ್ನನ್ನು ಕದ್ದು ತಂದುದಕ್ಕೆ ಅನಂತ ವೀರರಾದ ಅವರು ರಾವಣನನ್ನು ಕೊಲ್ಲದೆ ಬಿಡ ರೆಂದೂ ನುಡಿದಳು. ಆಗ ರಾವಣನು ಸೀತೆಯನ್ನು ಭಯಗೊಳಿಸಿ ಸ್ವಾಧೀನ ಮಾಡಿಕೊಳ್ಳಲು ಯತ್ನಿಸಿದನು. ಅದುವರೆಗೆ ಹೊತ್ತು ಮುಳುಗಿತು. ರಾವಣನನ್ನು ನೋಡುವುದಕ್ಕಾಗಿ ಅಲ್ಲಿಗೆ ಬಂದ ವಿಭೀಷಣನು, ಸೀತೆಯು ತನ್ನ ವಿಷಯವನ್ನು ಹೇಳಿಕೊಂಡು ಹಲುಬಿ ಅಳುತ್ತಿರುವುದನ್ನು ಕೇಳಿ ಭಯಪಟ್ಟು, ಪರಸ್ತ್ರೀಯನ್ನು ಈ ರೀತಿಯಾಗಿ ತೊಂದರೆಪಡಿಸುವುದು ಧರ್ಮವಲ್ಲವೆಂದೂ ಅದರಿಂದ ದುರ್ಗತಿ ಯೊದಗುವುದೆಂದೂ ತಾನೂ ಮಾರಿಚನೂ ರಾವಣನೊಡನೆ ಹೇಳಿದರು. ಅದಕ್ಕೆ ರಾವಣನು ಅವರನ್ನು ಹಿಯ್ಯಾಳಿಸಿ ಜಾನಕಿಯನ್ನು ಪುಷ್ಪಕ ವಿಮಾನವನ್ನೇರಿಸಿ ತಾನು ಪಟ್ಟದಾನೆಯನ್ನೇರಿ ಸಾಮ೦ತ ಸೇನೆಯೊಡನೆ ಪಟ್ಟಣದಲ್ಲಿ ಮೆರೆವಣಿಗೆ ಮಾಡಿಸಿದನು. ದುಃಖದಿಂದ ಬೇಯುತ್ತಿರುವ ಸೀತೆಯು ಇವು ಯಾವುವನ್ನೂ ನೋಡದಿರಲು ಆಕೆಯನ್ನು ರಾವಣನು ಪ್ರಮದವನದಲ್ಲಿ ಸೆರೆಯಿಟ್ಟನು.
ಸ೦ಭಿನ್ನನೆಂಬ ಮಂತ್ರಿಮುಖ್ಯನು ರಾವಣನಿಗೆ ಖರದೂಷಣರ ವಿಷಯವನ್ನೂ ರಾಮಲಕ್ಷ್ಮಣರು ವಿರಾಧಿತನನ್ನು ಪಾತಾಳಲ೦ಕೆಯಲ್ಲಿ ನಿಲ್ಲಿಸಿರುವುದನ್ನೂ ಅವರು ಸೀತೆಯನ್ನು ಹುಡುಕುತ್ತಿರುವುದನ್ನೂ ಅದುವರೆಗೂ ರಾವಣನಿಗೆ ಮಿತ್ರರಾಗಿದ್ದ ಸುಗ್ರೀವನೂ ಹನುಮನೂ ತಮ್ಮಿಂದ ಬೇರೆಯಾಗಿರುವುದನ್ನೂ ತಿಳಿಸಿದನು. ಅದಕ್ಕೆ ರಾವಣನು ಪರಿಹಾಸದ ನಗೆಯನ್ನು ನಕ್ಕು “ ಸಮುದ್ರದಲ್ಲಿ ಒಂದೆರಡು ಜಲಕಣಗಳು ನಷ್ಟವಾದರೇನು ? ” ಎಂದು ಹೇಳಲು ಸಹಸ್ರಮತಿಯೆಂಬ ಮಂತ್ರಿಯು ಹಾಗೆ ಅವರನ್ನು ಏಳಿಸುವುದು ಸರಿಯಲ್ಲವೆಂದೂ ಸುಗ್ರೀವಾದಿಗಳನ್ನು ದಾನ ಸನ್ಮಾನಗಳಿಂದ ತಮ್ಮ ಪಕ್ಷವನ್ನೇ ವಹಿಸುವಂತೆ ಮಾಡಬೇಕೆಂದೂ ಲ೦ಕೆಯು ಅಭೇದ್ಯವಾಗುವಂತೆ ವಿದ್ಯಾ ಪ್ರಾಕಾರವನ್ನು ಕಟ್ಟಬೇಕೆಂದೂ ಹಾಗೆ ಮಾಡಿದಲ್ಲಿ ರಾಮಲಕ್ಷ್ಮಣರು ಸೀತಾವಿರಹದಿಂದ ಪ್ರಾಣವನ್ನು ಕಳೆದುಕೊಳ್ಳುವರೆಂದೂ ತಿಳಿ ಸಿದನು. ವಿಭೀಷಣನು ಅದೇ ರೀತಿಯಾಗಿ ಮಾಡಲು ಪ್ರಯತ್ನ ಪರನಾದನು.
ಇತ್ತ, ಸುಗ್ರೀವನು ಸತಿ ವಿಯೋಗದಿಂದ ವ್ಯಥೆಪಡುತ್ತ ಖರದೂಷಣರ ಬಳಿಗೆ ಹೋಗಬೇಕೆಂದು ಬರುತ್ತಿರುವಲ್ಲಿ ಅಡವಿಯಲೊಂದು ಯುದ್ಧರಂಗವನ್ನು ಕಂಡು ಇದೇನೆಂದು ಕೇಳಲು ಅದನ್ನರಿತ ಒಬ್ಬನು ಖರದೂಷಣರು, ವಿರಾಧಿತ,
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೩
ಈ ಪುಟವನ್ನು ಪ್ರಕಟಿಸಲಾಗಿದೆ
ಪ೦ಪ ರಾಮಾಯಣದ ಕಥೆ
27