ಈ ಪುಟವನ್ನು ಪ್ರಕಟಿಸಲಾಗಿದೆ

28

ಪ೦ಪ ರಾಮಾಯಣದ ಕಥೆ

ರಾಮಲಕ್ಷ್ಮಣರು - ಇವರ ವಿಷಯಗಳನ್ನು ತಿಳಿಸಿ ಕಾರಣಪುರುಷರು ಪಾತಾಳ ಲಂಕೆಯಲ್ಲಿರುವರೆಂದು ಹೇಳಿದನು.


ಆಶ್ವಾಸ ೧೦- ದಶವದನ ವಂಶ ವರ್ಣನೆ

ಸುಗ್ರೀವನು ಮಹಾನುಭಾವರಾದ ರಾಮಲಕ್ಷ್ಮಣರಿಂದ ತನ್ನ ಹಗೆಯನ್ನೂ ಬಗೆಯನ್ನೂ ತೀರಿಸಿಕೊಳ್ಳಬೇಕೆಂದು ನಿಶ್ಚಯಿಸಿ ವಿರಾಧಿತನ ಬಳಿಗೆ ದೂತನನ್ನು ಕಳುಹಿಸಿ ತರುವಾಯ ತಾನೂ ಬರಲು ಆತನಾರೆಂದು ಲಕ್ಷಣನು ವಿರಾಧಿತನನ್ನು ಕೇಳಿದನು. ಆತನು ಕಿಷ್ಕಂಧನಗರಕ್ಕೊಡೆಯನೂ ಕಪಿಧ್ವಜ ಕುಲಧ್ವಜನೂ ಸೂರ೦ಜಯ ತನೂಜನೂ ವಾಲಿ ಭಟ್ಟಾರಕರ ತಮ್ಮನೂ ಅಂಗದನ ತಂದೆಯೂ ಆದ ಸುಗ್ರೀವನೆಂದೂ ಅವರನ್ನೊಲಗಿಸುವುದಕ್ಕೆ ಬಂದಿರುವನೆಂದೂ ತಿಳಿಸಿದನು. ಸುಗ್ರೀವನು ರಾಮಲಕ್ಷ್ಮಣರ ಪಾದಗಳಿಗೆರಗಿ ನಿಯಮಿತಾಸನದಲ್ಲಿ ಕುಳಿತುಕೊಂಡನು. ಕುಶಲ ಪ್ರಶ್ನೆಗಳಾದ ತರುವಾಯ ಲಕ್ಷ್ಮೀಧರನು ಇವರೇನು ನಿಮಿತ್ತವಾಗಿ ಬಂದಿರುವರೆಂದು ಕೇಳಲು ಜಾ೦ಬವನು ಕೈಮುಗಿದು ನಿಂತು, ಸುಗ್ರೀವನ ಹೆಂಡತಿಯಾದ ಸುತಾರೆಯ ಮೇಲಣ ಆಗ್ರಹದಿಂದ ಸುಗ್ರೀವನ ರೂಪನ್ನು ಧರಿಸಿ ಒಬ್ಬ ಖಳನು ಸುಗ್ರೀವನ ಅರಮನೆಯನ್ನು ಹೊಕ್ಕನೆಂದೂ, ಎಲ್ಲರೂ ಮೋಸಹೋದರೂ ಸುತಾರೆಯು ಕೆಲವು ಗುರುತುಗಳಿಂದ ತಾನು ಮೋಸಹೋಗದೆ - ಒಳಗೆ ಅಡಗಿಕೊಂಡಳೆಂದೂ, ಆಗ ನಿಜವಾದ ಸುಗ್ರೀವನು ಬರಲು ಇಬ್ಬರಿಗೂ ಯುದ್ಧವು ನಡೆಯಿತೆಂದೂ, ಅಂಗದ ಕುಮಾರನು ಮಾಯಾ ಸುಗ್ರೀವನನ್ನು ತಂದೆಯೆಂದು ಸ್ವೀಕರಿಸಿ ನಿಜವಾದ ಸುಗ್ರೀವನನ್ನು ಸೆರೆಯಲ್ಲಿಡು ವಂತೆ ಹೇಳಲು ಈತನು ಹನುಮನಲ್ಲಿಗೆ ಹೋಗಿ ತನ್ನ ವೃತ್ತಾಂತವನ್ನು ಹೇಳಿ ಕೊಂಡನೆಂದೂ, ಅವನು ಬಂದು ನಿಜವಾದ ಸುಗ್ರೀವನು ಯಾರೆಂದು ತಿಳಿಯದೆ ಕೋಪಗೊಂಡು ಹಿಂದಕ್ಕೆ ಹೋದನೆಂದೂ, ಆದುದರಿಂದ ತಮ್ಮಗಳ ಪರಾಕ್ರಮವನ್ನು ಕೇಳಿ ಸಹಾಯಕ್ಕಾಗಿ ತಮ್ಮಲ್ಲಿಗೆ ಬಂದಿರುವನೆಂದೂ ತಿಳಿಸಿದನು. ರಾಮನು ತಮ್ಮಂತೆಯೇ ವ್ಯಥೆಗೆ ಸಿಕ್ಕಿರುವ ಸುಗ್ರೀವನ ವ್ಯಸನವನ್ನು ಕಳೆಯುವಂತೆ ಲಕ್ಷ್ಮಣನೊಡನೆ ಹೇಳಲು, ಸುಗ್ರೀವನು ಸವಾಹಿತ ಚಿತ್ತನಾಗಿ ವಿರಾಧಿತನ ಮುಖವನ್ನು ನೋಡಿ ರಾಮಲಕ್ಷ್ಮಣರು ವ್ಯಾಕುಲಚಿತ್ತರಾಗಿರಲು ಕಾರಣವೇನೆಂದು ಕೇಳಿದನು. ಅದಕ್ಕೆ ವಿರಾಧಿತನು ವನದಲ್ಲಿ ಮೋಸದಿಂದ ಸೀತಾಹರಣವಾದ ವಿಷಯವನ್ನೂ ಯುದ್ದದಲ್ಲಿ ಖರದೂಷಣರು ಜನಾರ್ದನನ ಕೈಯಿಂದ ಸತ್ತ ವಿಷಯ ವನ್ನೂ ತಿಳಿಸಿದನು. ಇದನ್ನು ಕೇಳಿ ನಾನರಚಿಹ್ನನಾದ ಸುಗ್ರೀವನು ಏಳು ದಿವಸ ಗಳೊಳಗಾಗಿ ಸೀತಾದೇವಿಯ ಸುದ್ದಿಯನ್ನು ತರಿಸುವೆನೆಂದು ಪ್ರತಿಜ್ಞೆ ಮಾಡಿ ಬಿನ್ನವಿಸಲು, ಬಲಾಚ್ಯುತರೂ ವಿರಾಧಿತನೂ ಸುಗ್ರೀವನೊಡನೆ ಕಿಷ್ಕಂಧಪುರಕ್ಕೆ