ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೬ ರಾಮಚಂದ್ರ ಚರಿತಪುರಾಣಂ ಮತ್ತ ಮಿನಿಸಾನುಂ ಬೇಗದಿಂ-- ಚ | ಕದನ ಮದೋದ್ದತಂ ಮುಳಿದು ಲಕ್ಷಣನಾರ್ದಿಡೆ ವಾಯುವೇಗದಿಂ | ತ್ರಿದಶ ವಿರೋಧಿಯಪ್ಪ ದಶಕಂಠನ ವಕ್ಷಮನುರ್ಚಿ ಪೊಂಗಿ ಪೊ || ದ ರುಧಿರಾಂಬುವಿಂದರುಣವಾದ ಸುದರ್ಶನ ಚಕ್ರದಂತದೇ || ನುದಯಿಸಿದ ಸಾಂಧ್ರ ಸಮಯಾರುಣಿತಂ ದಿನನಾಥ ಮ೦ಡಲ೦ ೧೮೭ 11 ಅಂತು ನೇಸರ್ ಮೂಡುವುದುಮ | ಬಳಭದ್ರಂ ವ್ಯವಹಾರ ಮಂಗಲಮನಾಹ್ಯಾ ವೇಕ್ಷಣಾದ್ಯುತ್ಸವಂ | ಗಳನತ್ಯುತ್ಸವದಿಂದೊಡರ್ಚಿ ಜಿನಪೂಜೋತ್ಸಾಹಮಂ ಮುಖ್ಯ ಮಂ || ಗಳವುಂ ಮಾಟ್ರಿನುರಾಗಮುಂ ಬಗೆಗೆ ತ೦ದ೦ ಭಾರತೀ ಕರ್ಣ ಕುಂ! ಡಳನಪ್ರಾಕೃತನಪ್ರನತ್ತ ಚರಿತಂ ಸಾಹಿತ್ಯ ವಿದ್ಯಾಧರಂ !! ೧೮೮ || ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ ಭಾರತಿ ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ ಲಂಕಾದಹನ ವರ್ಣನಂ ಏಕಾದಶಾಶ್ವಾಸಂ