ದಾ ದಶಾಶ್ವಾಸಂ ಕಂ| ಶ್ರೀಗೆ ನೆಲೆಯೆನಿಪ ನಿಜ ಶ ಯಾಗೃಹದಿಂ ಸ್ನಪನ ರತ್ನಮಂಡಪ ವೇದೀ !! ಭಾಗಕ್ಕೆ ಪದತಳಂಗಳ ರಾಗಮನೊಲಗಿಸೆ ಬಂದನಭಿನವಪಂಪ || ೧ || ಅ೦ತು ಬಂದು ಕಂ || ಸ್ನಪನ ಪವಿತ್ರಂ ಶುಚಿವ | ಈ ಸೂತ ಗಾತ್ರಂ ಪ್ರಧಾನ ಮಂತ್ರ ವಿಧಾನಾ || ದ್ಯುಪಚರಿತಾಚಮನಂ ಸಂ ಚ ಪರಮ ಗುರುಗರ್ಥ್ಯ ಮೆತ್ತಿದಂ ರಘುರಾಮಂ || ೨ || ತದನಂತರಂ ಮಹಾಪ್ರವಾಹಿನೀ ಸಲಿಲ ಸಂಮಿಶ್ರ ಕರ್ಪೂರ ದಳ ಬಹುಳಕಾಂತಿ ದಂತುರಿತ ಚ೦ದ್ರಕಾಂತ ಕಲಶ೦ಗಳಿ೦ ಸುರಭಿ ಮಲಯರುಹ ಪಂಕ ಪಿಂಜರಿತ ರಜತ ಶುಕ್ಕಿಕೆಗಳಿ೦ ಸಜಲ ಧವಳ ಕಲಮಾಕ್ಷತ ಕ್ಷೀರ ಗೌರ ಪಾಂಡುರಿತ ಕರ್ಕೆತನ ಕರಂಡಕ೦ಗಳಿ೦ ನವೀನ ಪ್ರಸೂನ ಮಧು ವಿಲೀನ ಮಧುಕರ ಪಟಲ ಕರ್ಬುರಿತ ರತ್ನಪಟಲಿಕೆಗಳಿಂ ಸುಸತ್ವ ಭಕೋಪದಂಶ ಪ್ರಚುರ ಚರು ವಿಚಿತ್ರವರ್ಣ ಶಬಲಿತ ಸುವರ್ಣ ಪರ್ಯಣಂಗಳಿ೦ದುನ್ನುಖ ಮಯೂಖ ಮಾಣಿಕ್ಯದೀಪ ಕಿರಣಾರುಣಿತ ಮರಕತಮಣಿ ಪುತ್ರಿಕೆಗಳಿ೦ ಬಹುಳ ಕಾಲಾಗರುಧನು ಶ್ಯಾಮಲಿತ ಕಲದೌತ ಧೂಪ ಘಟಂಗಳಿ೦ ಕ್ಷೀರಾದಿಸವನ ಪಾವನ ರಸ ವಿಚಿತ್ರಾನೇಕ ಶಾತಕುಂಭ ಕುಂಭಂ ಗಳಿ೦ ಗಂಧಸಲಿಲ ಸಂಭ್ರತ ವಿಶಾಲ ಹರಿನೀಲ ಶೃಂಗಾರಂಗಳಿಂ ನಿಜ ಪ್ರಭಾ ಪಟಲ ಪಲ್ಲವಿತ ಶೋಣ ಮಣಿಕಲಶ೦ಗಳಿ೦ ಸ್ಪಟಿಕಮಣಿ ಕಿರಣಜಾಲ ಜಟಲಿತ ಮಧ್ಯ ರಂಗದಿಂ ಸಂಗೀತಕ ರಸ ತರಂಗಿತ ಬಾಹ್ಯ ರ೦ಗದಿ೦ ಸ್ಕೂಲ ಮುಕ್ತಾಫಲ ಮುಕುಲಿತ ವಿವಿಧ ರಂಗವಲ್ಲಿಯಿಂ ಮನಂಗೊಳಿಸ ದೇವಪೂಜಾಗೃಹಮಂ ಪೊಕ್ಕು ದರ್ಶನ ಸ್ವವನ ಮುಖರ ಮುಖಂ ಯಥಾವಿಧಿಯಿನಭಿಷವಮಂ ತೀರ್ಚೆ ಕಂ || ಸಿರಿಕಂಡದ ಕೋಟಿಕ್ಕಿಸಿ ಬೆರಸಿದ ಕತ್ತುರಿಯ ಸಾರವಣೆ ಬೆಳಗಿದ ಕ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.