ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪ ರಾಮಾಯಣದ ಕಥೆ

29

ಹೊರಟರು. ಅಲ್ಲಿಗೆ ಬಂದ ಮೇಲೆ ಸುಗ್ರೀವನಿಗೂ ಮಾಯಾ ಸುಗ್ರೀವನಿಗೂ ಯುದ್ದವಾಗಿ ಸುಗ್ರೀವನು ಮೂರ್ಛೆ ಹೋದನು. ಅವನು ಮೂರ್ಛ ತಿಳಿದ ಬಳಿಕ, ರಾಮನು ಸುಗ್ರೀವನ ಹಗೆಯನ್ನು ತಾನು ಮರುದಿನ ತೀರಿಸಿಕೊಳ್ಳುವೆನೆಂದು ಸುಗ್ರೀವನೊಡನೆ ಹೇಳಿ ಸಾಹಸಗತಿಯೆಂಬ ಮಾಯಾಸುಗ್ರೀವನನ್ನು ಕೊಂದನು. ಕಪಿಧ್ವಜನಾದ ಸುಗ್ರೀವನು ರಾಮಲಕ್ಷರನ್ನು ಮರ್ಯಾದೆ ಯೊಡನೆ ಕಿಷ್ಕಂಧ ಪುರಕ್ಕೆ ಕರೆದುಕೊಂಡು ಹೋಗಿ ಸತ್ಕರಿಸಿ ತನ್ನ ಹೆಣ್ಣು ಮಕ್ಕಳು ರಾಮನನ್ನಲ್ಲದೆ ಮತ್ತಾರನ್ನೂ ಮದುವೆಯಾಗೆವೆಂದಿರುವುದರಿಂದ ಅವರನ್ನು ಪರಿಗ್ರಹಿಸಬೇಕೆಂದು ಬೇಡಿಕೊಂಡು ಶುಭಮುಹೂರ್ತದಲ್ಲಿ ತನ್ನ ಹನ್ನೆರಡು ಮಂದಿ ಕನ್ನೆಯರನ್ನು ರಾಮನಿಗೆ ಮದುವೆಮಾಡಿಕೊಟ್ಟನು. ಆದರೆ ರಾಮನಿಗೆ ಸೀತೆಯ ನೆನೆಪಿನಿಂದ ಅವರಲ್ಲಿ ಅನುರಾಗ ಹುಟ್ಟಲಿಲ್ಲ.
ಸುಗ್ರೀವನು ಸೀತೆಯನ್ನು ಕಂಡುಹಿಡಿಯುವ ಪ್ರಯತ್ನವನ್ನು ಕೈಕೊಂಡು, ಮೊದಲು ಪ್ರಭಾಮಂಡಲನಲ್ಲಿಗೆ ದೂತರನ್ನಟ್ಟಿ, ತಾನು ಕೆಲವರು ಅನುಚರರೊಡನೆ ಪೂರ್ವದಿಕ್ಕಿಗೆ ಹೊರಟು ವಾಯುವೇಗದಿಂದ ಹೋಗುತ್ತ ಒಂದು ಬೆಟ್ಟದ ಶಿಖರದ ಮೇಲೆ ಒಂದು ಧ್ವಜವನ್ನು ಕಂಡು ಯಾರಿರುವರೋ ನೋಡೋಣವೆಂದು ಅಲ್ಲಿಗೆ ಹೋಗಲು ಅಲ್ಲಿದ್ದ ರತ್ನ ಜಟಿಯು ಇವನು ರಾವಣನ ದೂತನಿರಬಹುದೆಂದು ಹೆದರಿದನು. ಸುಗ್ರೀವನು ಅವನ ಭಯವನ್ನು ಹೋಗಲಾಡಿಸಿ ಅವನ ವೃತ್ತಾಂತ ನನ್ನೆಲ್ಲ ತಿಳಿದು ಸೀತೆಯನ್ನು ರಾವಣನು ಲಂಕೆಗೆ ಹೊತ್ತು ಕೊಂಡು ಹೋದ ಸಂಗತಿ ಯನ್ನರಿತವನಾಗಿ ಸಂತೋಷಪಟ್ಟು ರತ್ನ ಜಟಿಯನ್ನು ರಾಮಲಕ್ಷ್ಮಣರ ಬಳಿಗೆ ಕರೆ ತರಲು ಸೀತೆಯನ್ನು ರಾವಣನೆತ್ತಿಕೊಂಡು ಹೋದ ವಿಷಯವನ್ನು ಜನಾರ್ದನನು ರತ್ನ ಜಟಿಯಿಂದ ವಿಶದವಾಗಿ ತಿಳಿದನು. ಸೀತೆಯ ಸುದ್ದಿಯನ್ನು ತಿಳಿಸಿ ದುದಕ್ಕಾಗಿ ರಾಮಲಕ್ಷ್ಮಣರು ರತ್ನ ಜಟಿಯ ಶತ್ರುಗಳನ್ನೊಡಿಸಿ ಅವನನ್ನು ಮರಳಿ ಅವನ ರಾಜ್ಯ ಕರಸುಮಾಡಿ ಕಿಷ್ಠಿ೦ಧಪುರಕ್ಕೆ ಬಂದರು. ಒಂದು ದಿನ ಸುಗ್ರೀವನು ನಳ ನೀಲ ಅಂಗದ ಜಾಂಬವ ಮುಂತಾದ ಸೇನಾನಾಯಕರೊಡನೆಯೂ ಮಂತ್ರಿ ಮಂಡಲ ಬಂಧುಜನಗಳೊಡನೆಯೂ ತನ್ನ ಆಸ್ಥಾನದಲ್ಲಿ ರಾಮಲಕ್ಷ್ಮಣರನ್ನು ಸೇವಿಸುತ್ತಿರುವಲ್ಲಿ ಲಕ್ಷ್ಮಣನು ಸುಗ್ರೀವನನ್ನು ನೋಡಿ, ಲಂಕೆಗೆ ಹೋಗಿ ರಾವಣ ನನ್ನು ಜಯಿಸುವ ಪ್ರಯತ್ನವನ್ನು ಮಾಡಬೇಕೆಂದು ಹೇಳಿದನು. ರಾಮನು ಜೈನಾಗಮ ಕೋವಿದನಾದ ಜಾಂಬೂನದನನ್ನು ನೋಡಿ ರಾವಣನ ವಂಶವನ್ನೂ ಲಂಕಾನಗರದ ತೆರನನ್ನೂ ತಿಳಿಸುವಂತೆ ಕೇಳಲು ಅವನು ಕೈ ಮುಗಿದುಕೊಂಡು ಆ ವಿಷಯವನ್ನು ವಿಶದವಾಗಿ ಹೇಳುವುದಕ್ಕೆ ಪ್ರಾರಂಭಿಸಿದನು :-
ತ್ರಿಲೋಕಾಧಿಪತಿಯಾದ ಪುರುಪರಮೇಶ್ವರನ ಅನಂತರದಲ್ಲಿ ಕೆಲವು ಕಾಲದ ಮೇಲೆ ಅದೇ ಕುಲದ ತ್ರಿದಶಂಜಯನು ಭೂಮಂಡಲಕ್ಕಧಿಪತಿಯಾದನು. ಅವ