18 ರಾಮಚಂದ್ರಚರಿತಪುರಾಣಂ ನೂಪುಕ್ಕುಂ ಕಾಲಾಳುಮೊಂದು ಲಕ್ಕಮುಮೊಂಭತ್ತು ಸಾಸಿರದ ಮನೂಅಯ್ಯ ಇಕ್ಕುಂ ಕಂ || ಒಂದಕ್ಕಹಿಣಿಗಿನಿತ ಕುಂ ದ೮ ಚತುರಂಗ ಸಂಖ್ಯೆ ಯೆನೆ ಪಡೆಯೆರಡು೦ || ನಿಂದಿವೊಡೆ ನೆಲನೆಡೆಗಿಲ್ ದೆ೦ದದಾ ಪಡೆಯ ಸವಣನಆವವನಾವಂ || ೯ || ಗಣಿದಿಗನಿನಿತನಿತ ಹಿಣಿಯೆಂದೆಣಿಸಲ್ಸಮರ್ಥನಕ್ಕೆಮ ರಥ ವಾ 18 ರಣ ವಾಹ ಪದಾತಿಗಳ ಗಣಿಯಿಸಲಾರ್ತಪನೆ ರಾಮ ರಾವಣ ಬಲಮಂ || ೧೦ || ಚ | ಭಗಣದ ಲೆಕ್ಕಮಂ ಮಳೆಯ ನೀರ್ವನಿಯಂ ಪರಮಾಣು ಸಂಖ್ಯೆಯಂ | ಗಗನದ ಸೀಮೆಯಂ ಜಳಧಿ ವೀಚಿಗಳಂ ದೆಸೆಯಂತಮಂ ಪವ || ಇಗಿಸಲೆರಟ್ಟಿಲಂಗಳ ಮದದ್ವಿಪ ವಾಹ ವರೂಥ ಕಿಂಕರಾ | ದಿಗಳ ಪವಣ್ಳಂ ಪವಣಿಸಲ್ ಬಗೆದರ್ಷನೆ ಗಾಂಸನಾಗನೇ || ೧೧ || ಇಂತತಿ ಪ್ರಬಲಮಪ್ರುಭಯ ಬಲಮುಮಾಯುಧಂಗಳನರ್ಚಿಸುವ ವಿಜಯ ವಾರಣ ವಾಜಿಗಳಂ ಪೂಜಿಸುವ ವೀರ ಸಂನ್ಯಸನಮಿರ್ಪ ಸುಭಟಾಲಾಪಮನಾಲಿ ಸುವ ರವಳಿ ಘೋಷಿಸುವ ದಂದುಗದಿನಂದಿನಿರುಳಂ ಕಳೆಯೆ ನೇಸರ್ ಮೂಡುವುದು ಮಿಂದಗಿ ಬೆಸಸಿದ೦ದದೊಳ್ ಕಂ || ಆರೆನಗಿದಿರ್ಚುವರ್ ಸಮ ರಾರಂಭಕ್ಕಾ ನ ಮುಖ್ಯ ನಾಯಕರೆವೆನು | ತಾರಿ೦ ಮುನ್ನ ಸೆರಗು ಪಾರದ ಹಸ್ತಪ್ರಹಸ್ತರು.ದೊಡ್ಡಿರ್ದರ್ || ೧೨ | ಮಾರೀಚಂ ಮೊದಲಾಗೆ ಮ ಹಾರಥರೊಡನೇಜಿ ಸಿ೦ಹರಥಮಂ ರಥಿಗಳ್ || ನೀರದ ಗರ್ಜನಮಂ ರಣ ಭೇರೀರವಮಿಆಪ ಲಂಕೆಯಂ ಪೋಣಮಟ್ಟರ್ | ೧೩ | ಪುಲಿಯ ರಥದೊಳ್ ಪಲರ್ ಮೆ| ಮೃಲಿಗಳ ವಕ್ರೋದರಾದಿ ವೀರ ಪ್ರಮುಖರ್ |
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.