ಪ೦ಚದಶಾಶ್ವಾಸಂ ೪೫೬ ಕಂ | ಅನತಿಶಯ ರೂಪ ವಿದ್ಯಾ ವಿನಯ ಸಮನ್ನಿತೆಯರಂ ಮಹೋತ್ಸವ ಪಟಹ | ಧ್ವನಿ ಪೊಣ್ ಚಂದ್ರವರ್ಧನ ತನುಜೆಯರಂ ಪದೆದು ಮದುವೆ ನಿಂದನು ಪೇಂದ್ರಂ || ೧೨ || ಅ೦ತು ರಾಮಲಕ್ಷ್ಮಣರ್ ಸುಖದಿನಲ್ಲಿ ಕೆಲವು ಕಾಲಮಿರ್ದ೦ತ್ತಲಿಂದ್ರ ಜಿತು ಮೇಘವಾಹನರ್ ಕೇವಲಜ್ಞಾನಮಂ ಪಡೆದು ನಮ್ಮದೆಯ ತಡಿಯೊಳ್ ಮುಕ್ತಿ ಪ್ರಾಪ್ತರಾದರದe೦ 1(ದಾತೊರೆ ಮೇಘರವೆಯೆಂಬ ಹೆಸರ ತೀರ್ಥಮಾದು ದು ತೂರ್ಣಮತಿಯೆಂಬ ನಗ ನಿತಂಬದೊಳ್ ಜಂಬುವಾಲಿ ತಪಂಗೆಯ್ದ ಹಮಿಂದ್ರ ಸ್ಥಾನದೊಳ್ ಪುಟ್ಟದಂ ಕುಂಭಕರ್ಣ೦ ನರ್ಮದೆಯ ತಡಿಯೊಳ್ ಕೇವಲಜ್ಞಾನ ಪ್ರಾಪ್ತನಾಗಿ ಮೋಕ್ಷಕ್ಕೆ ಸಂದುದರಿ೦) ದಾ ಪೋಟತೆಗೆ ಪೀತರವೆಯೆಂಬ ಪೆಸ ರಾಯ್ತು ಮಾರೀಚನುಂ ಕಲ್ಪ ಗತನಾದಂ ಮಯನುಮಂಬರ ಚಾರಣತ್ವಮುಮಂ ಸರ್ವೌಷಧರ್ಧಿತ್ವಮುಮನವಧಿಜ್ಞಾನಮುಮಂ ಪೆತ್ತು ಮಲರಹಿತನಾಗಿ ನೆಗಟ್ಟು ಜೀವಿತಾವಧಿಯೊಳೀಶಾನಕಲ್ಪಕ್ಕೆ ಪೋದಂತಿ (ಮಂಡೋದರೀಗಣಿನಿಯರುಮನೇಕ ಕಾಲಂ ದುರ್ಧರ ಕಾಯಕ್ಷೇಶ ತಪದಿಂ ನೋ೦ಪಿಗಳಂ ಚರಿಯಿಸಿ ವಿಹಾರಿಸುತ್ತ೦ ವೈತರಣೀ ನಗ ನಿತ೦ಬದ ಶಾರ್ದೂಲಗುಹೆಯೊಳಿರ್ದು ಧರಧ್ಯಾನದಿಂ ಮುಡಿಸಿ ಬಲಿಯಮಿಾಶಾನಕಲ್ಪಗತೆಯಾದಳು ಆದರಸಿಯರುಗೋಗ್ರ ತಪಂಗೆಯ್ದು ಶುಭ ಧ್ಯಾನದಿಂ ಮುಡಿಪಿ ತಂತಮ್ಮ ಸ್ಥಾನದೊಳ್ ಪುಟ್ಟಿ ದರ್) ಮತ್ತಿತ್ತ ಲಂಕೆಯೊಳಗೆ ರಾಮಲಕ್ಷ್ಮಣರ್ ಚಕ್ರವರ್ತಿಗಳಾಗಿ ಸುಖದಿನಿರ್ಪುದುಮಿತ್ತಲ್*- ಕಂ | ನೆನೆದಪರಾಜಿತೆ ರಘುರಾ ಮನನತಿಶೋಕ ಪ್ರಬಂಧದಿಂದಿರ್ಪುದುಮಾ !! ವನಿತೆಯರ ಮನೆಗೆ ಬ೦ದ೦ ಘನಪಥದಿಂ ಭೋಂಕನಿಂದು ನಾರದ ಮುನಿಪಂ || ೧೩ || ಅಂತು ಬರ್ಪುದನಪರಾಜಿತಾಮಹಾದೇವಿ ಕಂಡಿದಿರಲಿಕ್ಕಿ ಬ೦ಯ ಮಿಚ್ಚಾಕಾರಂ ಗೆಯ್ಯುದುಂ ಕಂ || ನಿಮಗಿನಿತು ಶೋಕವೇಕಾ ಹೈ ಮಗನಿತುಮನಯೆ ಪೇಮೆನೆ ನಾರದ ದಿ | ವ್ಯಮುನೀಶ್ವರನನಿತುಮನಾ ಕಮಲಾನನೆ ನೆಜತೆಯೇ ತೆಜತೆಯೆ ಬಿನ್ನವಿಸುವುದುಂ 1, 2.' ಈ ಭಾಗಗಳು, ಕ, ಖ, ಚ, ಪ್ರತಿಗಳಲ್ಲಿಲ್ಲ. _R ೪
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.