ܦܬܤ ರಾಮಚಂದ್ರ ಚರಿತಪುರಾಣಂ ಮಂ ಪೋಜಮಟ್ಟು ಪೋಗೆ ಸಂಭ್ರಮದಿಂ ಲಕ್ಷ್ಮೀಧರನುಂ ಕೈಕಾಮಹಾದೇವಿಯು೦ ವೈದೇಹಿಯುಂ ವಿಶಲ್ಯಾಸುಂದರಿಯುಂ ಪಲರುಮಂತಃಪುರ ಪುರಂದ್ರಿಯರುಂ ಬಲ ಯನೆ ಪೋಗಿ ತಪೋವಿಘ್ನ ಹೇತುಗಳಪ್ಪ ಮಾತುಗಳಂ ನುಡಿಯುತ್ತಿ ರ್ಪಿನ ಮತ್ತಲಲ್ಲೂ ನೆಯ ಕ್ರೋಧಿನಿಯೆಂಬ ಮದದೊಳವರ್ತಿಯಾಗಿ ಮ | ತ್ರಿಜಗದ್ರೂಷಣ ವಾರಣಂ ಮುಜ್ಯೆ ಮಾಯಾಲಾನಮಂ ತೊಗ್ಗ ಲೋ | ಹಜ ಬಂಧಂಗಳನೆಲ್ಲಮಂ ಪಜೀವಿನಂ ಪೊಯೆತ್ತಿ ಮೊತ್ತಕ್ಕೆ ಕಾ || ಯು ಜವಂ ಕೊಲ್ವವೊಲೆಯ್ದೆ ಬಂದು ಜನದಿಂ ಗಂಧಾಂಧನಾ ಭೀಮ ಸಾ| ಮಜಮುಂ ವಿಸ್ಮಯಮಪ್ಪಿನಂ ಭರತನಂ ಕಂಡಾಯ್ತು ಜಾತಿ ಸ್ಮರಂ || ೩೧ || ಅ೦ತು ಜಾತಿಸ್ಮರನಾಗಿ ಮದೋದ್ರೇಕಮಂ ಬಿಟ್ಟು ಕೈಯನೆಲೆವಿಟ್ಟು ಪೊಡೆವಟ್ಟಿರ್ಪುದುಂ ಭರತನಾ ಗಜಮಂ ವೈದೇಹಿಯುಂ ವಿಶಲ್ಯಾ ಸೌಂದರಿಯುಂ ಬೆರಸೇಆ ಮಹಾವಿಭವದಿಂ ರಾಜಭವನಮಂ ಪೊಕ್ಕು ಆನೆಯಿಂದಿಂದೆಲ್ಲರು ಮೊಡನಾರೋಗಿಸಿ ಸುಖದಿನೊಡೋಲಗಂಗೊಟ್ಟರೆ ಕಂ|| ನಿರುಜಂ ತ್ರಿಜಗದ್ದೂಷಣ ಕರಿ ಕವಳಂಗೊಳ್ಳದೆಂದು ಸಾಹಣದ ಮಹ | ತರರಆಸೆ ರಾಮಲಕ್ಷ್ಮೀ ಧರ ರ್ಕಳಾ ನುಡಿಗೆ ನಾಡೆ 'ವಿಸ್ಮಿತರಾದರ್ ಆ ಸಮಯದೊಳ್ ಖುಷಿ ನಿವೇದಕನತಿತ್ವರಿತ ಗತಿಯಿಂ ಬಂದು ಸರ್ವಾ೦ಗ ಪ್ರಣತನಾಗಿ ದೇವ ಮಹೇಂದ್ರೋದ್ಯಾನ ವನಕ್ಕೆ ದೇಶಭೂಷಣ ಭಟ್ಟಾರಕರ್ ಬಿಜ ಯಂಗೆಯ್ದರೆಂದು ಬಿನ್ನವಿಸೆ ಸಿಂಹಾಸನದಿನೆಮಾ ದೆಸೆಗೆ ಕೈಗಳಂ ಮುಗಿದು ಕಂ || ಅವನೀವಲ್ಲಭರಾರ್ ಧ ರ್ಮ ವತ್ಸಲರ್ ತನ್ನ ತೆದಿನೆಂಬನ್ನಂ ರಾ || ಘವ ದೇವನಳ್ಳಿ ಜಂ ಋಷಿ ನಿವೇದಕ೦ಗಮರ ಧೇನುವೀವಂತಿತ್ತ೦ || ೩೩ || || ೩೨ || ಅಂತು ಮೆಚ್ಚಿತ್ತು ರಾಮಲಕ್ಷ್ಮಣರುಂ ಭರತ ಶತ್ರುಘ್ನರುಂ ತ್ರಿಜಗದ್ದೂಷಣ ಗಜಾರೂಢರಾಗಿ ಅಪರಾಜಿತಾಮಹಾದೇವಿ ಮೊದಲಾಗೆ ನಾಲ್ವರ್ ಜನನಿಯರುಂ ಜಾನಕಿ ಮೊದಲಾಗೆ ಸಮಸ್ತಾಂತಃಪುರಮುಂ ಸುಗ್ರೀವಂ ಮೊದಲಾಗೆ ಸಕಲ ವಿದ್ಯಾ ಧರ ವಲ್ಲಭರುಂ ವಂದನಾಭಕ್ತಿಯಿಂದೊಡನೆ ಬರೆ ಬಂದು ವಾಹನದಿಂದಿಳಿದು 1ವಿಸ್ಮಯಮುತ್ತೂರ್, ಗ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.