ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರಥಮಾಶ್ವಾಸಂ
೫

         ಕಂ|| ಶ್ರುತಕೀರ್ತಿ ತೈವಿದ್ಯ
         ವ್ರತಿ ರಾಘವಪಾಂಡವೀಯಮಂ ವಿಬುಧ ಚಮ ||
         ತೃತಿಯೆನಿಸಿ ಗತಪ್ರತ್ಯಾ
         ಗತದಿಂ ಪೇಳಿ ಮಲಕೀರ್ತಿಯಂ ಪ್ರಕಟಿಸಿದಂ || ೨೫ ||
 
         ಗಣಧರರಂ ಶ್ರುತದೊಳ್ ಚಾ
         ರಣ ಋಷಿಯರನಮಲ ಚರಿತದೊಳ್ ಯೋಗಿಜನಾ ||
         ಗ್ರಣಿಗೆಣೆಯೆನ್ನದೆ ಮಿಕ್ಕರ
         ನೆಣೆಯೆಂಬುದೆ ವೀರಣಂದಿ ಸೈದ್ಧಾಂತಿಕರೊಳ್ ||೨೬||

        ಹರಿ ಹರ ಹಿರಣ್ಯಗರ್ಭರ
        ನುರವಣೆಯಿಂ ಗೆಲ್ಲ ಕಾಮನಂ ದೀಘ್ರ ತಪೋ ||
        ಭರದಿಂದುರಿಸಿದರೆನ ಬಿ
        ತರಿಸದರಾರ್‌ ವೀರಣಂದಿ ಸೈದ್ಧಾಂತಿಕರಂ || ೨೭||

ಮ||ಸ್ರ||ಉಪದೇಶಂಗೆಯ್ದು ಕಾವ್ಯಚ್ಛಲದಿನಖಿಲ ಧರಂಗಳಂ ಲೋಕಮಂ ಧ |
        ರ್ಮಪಥ ಪ್ರಸ್ಥಾನದೊಳ್ ಯೋಜಿಸಿ ಪರಮ ಪುರಾಣಂಗಳಂ ಪೇಟ್ಟು ಕಲ್ಪಾ೦||
        ತ ಪರೀತ ಖ್ಯಾತಿಯ ತಾಳಿದ ಪರಮ ಕವಿಜೇಷ್ಠರಾದರ್ ತದೀಯಾಂ|
        ಘ್ರಿಪಯೋಜಂಗಲ್ ಮದೀಯಾಶಯ ಮಣಿಭವನಕ್ಕಕ್ಕೆ ಪುಷ್ಟೋಪಹಾರಂ
                                                       ||೨೮||
ಚ || ಮೃದುಪದ ತಿಬಂಧಮಂ ಬಗೆಯ ಭಾವದ ಮೆರಿಯಂ ರಸಪ್ರವಾ |
      ಹದ ನೆಲೆವೆರ್ಚಸ್ಥಿಳಏಜದು ಭಾವಿಸಿ ಭಾವಿಸಿ, ಮೆಚ್ಚಿ ಮೆಚ್ಚಿ, ಪೊ ||
      ಣ್ಮಿದ ಪುಲಕಂಗಳಿಂ, ನಯನದೊಳ್ ಕರೆಗಣ್ಮದ ಹರ್ಷಬಾಷ್ಪವ |
      ರ್ಷದಿನನುರಾಗಮಂ ಪಡೆವ ಸಜ್ಜನ ಸಂಸ್ಥವಮೊಂದೆ ಸಾಲದೇ ||೨೯ ||

      ಕಂ|| ವಾರಾಶಿಯ ಮಣಿಗಣಮಂ
            ಕ್ರೂರ ಕುಟೀರಕ್ಕೆ ಸುಗಿದು ಸಾಂಯಾತ್ರಿಕನೇ೦ ||
            ತಾರನೆ ಕೃತಿವೇಲ್ ಬಗೆ
            ದಾರನೆ ಸತ್ಕವಿ ನಿಸರ್ಗ ದುರ್ಜನ ಭಯದಿಂ ||೩೦||


1. ಮರಕೀರ್ತಿ. ಚ,.೨೫ ನೆಯ ಪದ್ಯವು ಶ್ರ ||ಬೆ|| ಶಾ|| ೧೪ ನೆಯ ಪುಟದಲ್ಲಿದೆ.
2. ಪವಿತ್ರ. ಕ. ಖ. ಗ. ಫ. ೨೬, ೨೭ ನೆಯ ಪದ್ಯಗಳು ಶ್ರ|| ಬೆ|| ಶಾ॥ ೧೪ ನೆಯ ಪುಟದಲ್ಲಿವೆ
3. ಪಾಕನಕ. ಕ. ಖ.ಚ.