ಈ ಪುಟವನ್ನು ಪ್ರಕಟಿಸಲಾಗಿದೆ
ರಾಮಚಂದ್ರ ಚರಿತ ಪುರಾಣ೦

ಚ|| ವಿಕಸಿತಚಂಪಕಕ್ಕೆಅಗಿ ಬಂಡುಣಲೊಲ್ಲದ ಚಂಭರೀಕ ನಾ
     ಸಿಕಮನ ಶೇಷಮಂ ಬೆಳಗೆ ತಿಕ್ಕಿಕ ದೆಸೆಗಾಣದಿರ್ಪ ಕೌ ||
     ಶಿಕನಯನಂಗಳಂ ಸುಕವಿ ಕಾವ್ಯಮನಾಲಿಸಿ ಕಾಯ್ದೆ ದುರ್ಜನ
     ಪ್ರಕರದ ಕರ್ಣ ಕೋಟರಮಕೇಕೆ ಯೊ ಮಾಡಿದನಬ್ಜವಿಷ್ಟರಂ

       ಪಡೆದಂ ರಜೋಧಿಕಂ
       ಪಡೆವಣಿಯಂ ಫಣಿಯಮೃತ ರಸಮಂ ವಿಷಮಂ ||
       ಕಡಲ೦ ಸುಲಿಯಂಮಯಂ
       ಸಿಡಿಲಂ ಪಡೆದಂತೆ ಸುಜನರಂ ದುರ್ಜನರಂ

ಮ|| ರಸಮಂ ಭಾವಮನರ್ಥಮಂ ರಚನೆಯಂ ಕಾವ್ಯಜ್ಞರಾರು ಭಾ |
     ಸಿ ನಾಂದೀಪದ ನಾಯಕಾಭ್ಯುದಯ ಪರಂತಂಬರಂ ಕೂಡೆ ಶೋ ||
     ಸಿ ನೋ ರಘುವಂಶರಾಮ ಕೃತಿಯೊಳ್ ಪತ್ತೆಂಟು ಪದ್ಯಂಗಳಂ |
     ಪೊಸೆವೆಂ ಯತ್ನದಿನಾದ್ಯರತನಕಾರಾದೊಡಂ ಪೇಳಿರೇ || ೩೩ ||

ಶಾ|| ರಾಗ ದ್ವೇಷ ನಿಬಂಧನಪ್ಪ ಕೃತಿಯಂ ನಿರ್ಬಂಧದಿಂ ಬಂಧಮಿಂ |
     ಬಾಗರ್ಥ೦ ಪೊಸತಾಗೆ ಪೇಟ್ಟಿಖಿಲಮಂ ಲಾಗಾವಿಲಂಮಾ ವಿ ||
     ದ್ಯಾಗರ್ವಗ್ರಹ ಪೀಡಿತರ್ ಸ್ವಪರಬಾಧಾಹೇತುವಂ ದುಸ್ತರೋ |
     ದ್ಯೋಗ ಕೇಶಿತರಾಗಿ ಬಿತ್ತಿ ಬೆಳೆವಂತಕ್ಕುಂ ವಿಷೋದ್ಯಾನಮಂ || ೩೪ ||

ಚ || ಪೊಗಟ್ಟು ಮಹಾತ್ಮರುಜ್ಜಲಮೆನಿಪ್ಪ ಗುಣಂಗಳನುಜ್ಜಲ ಪ್ರಸಿ |
      ದ್ಡಿಗೆ ಪೊಲನಾಗದುಜ್ಲಿಸಿದ ಪ್ರತಿಮ ಪ್ರತಿಭಾ ಪ್ರಭಾವದಿಂ ||
      ಪೊಗಟ್ಟು ದುರಾತ್ಮರಂ ಮೊಗದೊಳಿರ್ದುಗುಳಂ ಪೊಅಗಿ ಕಲಾದ ನಾ |
      ಲಗೆಯವನಿತ್ತು ನಾಲಗೆಯೊಳೋದಿದವಂ ಕೃತಿಯೇ ಕೃತಾರ್ಥನೇ || ೩೫ ||

      ಭೇದಿಸ ಭಾನು ಭಾನು ತಮಮಂ ತಸಂದು ಪದಾರ್ಥಮಂ ಪಂ |
      ಚ್ಛೇದಿಸಿ ಕಾಣ್ಬವೋಲ್ ಜನವಿಲೋಚನಮಪ್ರತಿಮ ಪ್ರಭಾವರ ||
      ಪ್ರಾದಿ ಕವೀಶ್ವರರ್ ನಡೆದ ಪದ್ದತಿಯಿಂ ತನಗರ್ಥಶುದ್ದಿವೆ |
      ತ್ತಾ ದೊರೆಯಂಗಮೇಂ ನಡೆವುದಚ್ಚರಿಯ ಕವಿರಾಜ ವೀಥಿಯೊಳ್ || ೩೬||


1. ಕ್ಕೆಳಸಿಬ೦ದುಣ. ಕ. ಘ. ಗ. ಫ.
2. ಪೊಸವಂ. ಚ.
3. ರಾರೇನೆಂದೊಡ೦. ಗ ಘ ; ರಾರೇಕಾದೊಡ೦. ಚ. ೩೩ ನೆಯ ಪದ್ಯವು .ಕ. ಖ. [ಗಳಲ್ಲಿಲ್ಲ.