ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ರಾಯರುವಿಜಯ wwwmyvy+++ ಕೃ, ದೇ-ಅನಂಗಸೇನೆಯಲ್ಲಿ.” ಈ ಮಾತನ್ನು ಕೇಳಿದ ಕೂಡಲೆ ಅಪಣಿಗೆ ದಿಗ್ದಮೆಹಿಡಿದಂತಾ ಯಿತು, ವಿಜಯಸಿಂಹನು ಅಂತಹ ದುರ್ಮಾರ್ಗಿಯಾಗಿರಲಾರನೆಂದು ಕೂಡಲೆ ತೋರಿತು. ಧೈಲ್ಯನನ್ನು ತಂದುಕೊಂಡು, “ಮಹಾಸ್ವಾಮಿಯವರ ನಂಬಿಕೆಗೆ ಸರಿಯಾದ ಕಾರಣಗಳಿರುವುದೇ ? ಕೆಲವುವೇಳೆ ಭಾಂತಿಯಿಂದ ಅಂತಹ ನಂಬಿಕೆ ಹುಟ್ಟುವುದೂ ಉಂಟು ಎಂದನು. ಕೃ, ದೇ-“ ಬರೆವಣಿಗೆಯ ಸಾಕ್ಷಿಯು ಸಿಕ್ಕಿರುವಾಗ ಇಂತಿಗೆ ಅವಕಾಶವೆಲ್ಲಿಯದು ? ಮಂತ್ರಿ) -೯೯೧ರವಣಿಗೆಯು ನಿದರ್ಶನವೇ ? ಅದು ಯಾರ ಬರೆದ ನಗೆ ? ? ಕೃ, ದೇ -ಬೇರೆಯವರ ಬರವಣಿಗೆಯಿಂದ ವಿಜಯಸಿಂಹನ ಮೇಲೆ ದೋಷಾರೋಪಣೆ ಮಾಡಲಾಗುವುದೇ ? ನೀವೇ ನೋಡಿರಿ ” ಎಂದು ಹೇಳಿ ಒಂದು ಕಾಗದವನ್ನು ತೆಗೆದು ಮಂತ್ರಿಗೆ ಕೊಟ್ಟರು, ಆತನು ದೀಪದ ಬೆಳಕಿನಲ್ಲಿ ಆ ಕಾಗದದ ಬರವಣಿಗೆಯನ್ನು ಚೆನ್ನಾಗಿ ಪರೀಕ್ಷಿಸಿ, ಅನಂತರ ಅದನ್ನು ಓದಿಕೊಂಡನು, ಅದರಲ್ಲಿ ಈ ಮೇರೆಗೆ ಬರೆದಿದ್ದಿತು:- " ಸುಗುಣನಿಧಿಯಾದ ಅನಂಗಸೇನೆಗೆ ನಮ್ಮ ಅನುರಾಗಬೀಜವು ಚಿಕ್ಕಂದಿನಲ್ಲೇ ಮೊಳೆತು, ಚಿಗುರಿ ಹೂವಾಗಿದ್ದರೂ, ಫಲಬಿಡುವಹೊತ್ತಿಗೆ ಒಬ್ಬರಿಂದೊಬ್ಬರನ್ನು ಭಗವಂತನು ಅಗಲಿಸಿಬಿಟ್ಟನು. ಆ ದಿನ ಕೊಂಡಪಲ್ಲಿ ಯದುರ್ಗದ ಉಪವನದಲ್ಲಿ ನಮ್ಮಿ ಬ್ಬರಿಗೂ ನಡೆದ ಸಂಭಾಷಣೆಯನ್ನು ಜ್ಞಾಪಿಸಿಕೊಂಡು, ಒಂದುಬಾರಿ ನನಗೆ ನಿನ್ನ ಸಂದರ್ಶನವನ್ನು ಕೊಡು. ನನ್ನ ಗುರುತು ತಿಳಿಯದಿರಲೆಂದು ಈ ಮೇರೆಗೆ ನನ್ನ ಬರವಣಿಗೆಯನ್ನು ಬದಲಾಯಿಸಿರುವೆನು, ನನ್ನ ಗುರುತಿ ಗಾಗಿ ಇದರಲ್ಲಿ ಟ್ಟರುವ ಉಂಗುರವನ್ನು ಕಳುಹಿಸಿರುವನು ನಿನ್ನ ಉಂಗುರ ವನ್ನು ಕಳುಹಿಸಿಕೊಟ್ಟರೆ, ಅದನ್ನು ನೀನು ಬರುವವರೆಗೂ ನೋಡಿ ಕಳು ಇಲಾದರೂ ಮನಸ್ಸಿಗೆ ಸಮಾಧಾನವನ್ನು ಉಂಟುಮಾಡಿಕೊಳ್ಳುತ್ತಲಿರು ವೆನು, ಕೂಡಲೆ ಇದಕ್ಕೆ ಪ್ರತ್ಯುತ್ತರವನ್ನು ಕಳುಹಿಸು. ಈ ಕಾಗದವನ್ನು ಪೂರಿಯಾಗಿ ಓದಿಕೊಂಡ ಕೂಡಲೆ ಮಂತ್ರಿ ವಿಸ್ಮಯವೂ ವ್ಯಸನವೂ ಉಂಟಾದುವು, ಅದರ ಬರವಣಿಗೆಯು ವಿಜಯ