منخسعضشعة ಹನ್ನೆರಡನೆಯ ಪ್ರಕರಣ 664 ಸಿಂಹನ ಬರೆವಣಿಗೆಯನ್ನು ಸ್ವಲ್ಪಮಟ್ಟಿಗೆ ಹೋಲುತ್ತಿದ್ದರೂ, ಅದು, ವಿಜಯಸಿಂಹನ ಹಸ್ತಾಕ್ಷರವೆಂದೇ ಸಾಧಿಸಲು ಆಗುವಂತಿರಲಿಲ್ಲ. ಆದುದ ರಿಂದ ಮಂತ್ರಿಯು ಚಕ್ರವರ್ತಿಯವರನ್ನು ಕುರಿತು “ಮಹಾಸ್ವಾಮಿಯವರಿಗೆ ಈ ಬರವಣಿಗೆಯು ವಿಜಯಸಿಂಹನದೇ ಎಂದು ಹೇಗೆ ನಿರ್ಧರವಾಯಿತೋ ತಿಳಿಯಲಿಲ್ಲ ; ಆದರೂ ಇದನ್ನು ನಂಬಿಬಿಟ್ಟು ಅನಂಗಸೇನೆಯನ್ನೂ ವಿಜಯಸಿಂಹನನ್ನೂ ದೋಪಿಗಳಾಗಿ ಎಣಿಸುವುದು ಅಷ್ಟು ಉಚಿತವಾಗಿ ತೋರುವುದಿಲ್ಲ ಎಂದು ಧೈರವಾಗಿ ಹೇಳಿದನು. ಕೃ, ದೇ-“ ನೀವು ಈ ಕಾಗದವನ್ನೇಕ ನಂಬುವುದಿಲ್ಲ ? ಅವನು ಬರೆವಣಿಗೆಯನ್ನು ಬೇಕಂತಲೇ ಬದಲಾಯಿಸಿರುವನೆಂದು ಕಾಗದದದಿಂದಲೇ ವ್ಯಕ್ತವಾಗುವುದಲ್ಲಾ ! ಇದು ವಿಜಯಸಿಂಹ, ಅನಂಗಸೇನೆ-ಇವರಿಗೆ ನಡೆದ ಪತ್ರವ್ಯವಹಾರವೇ ಆಗಿರಬೇಕೆಂದು ಸ್ಪಷ್ಟವಾಗಿಯೇ ಇರುವುದಷ್ಟೆ ?”
- ಅವರಿಬ್ಬರಿಗೂ ಕೊಂಡಪಲ್ಲಿಯೇನೋ ಜನ್ಮ ಭವಿ: ಹೌದು. ಆದರೆ ಅಷ್ಟು ಮಾತ್ರದಿಂದಲೇ ಈ ಕಾಗದದಲ್ಲಿ ಹೇಳಿರುವವರು ವಿಜಯ ಸಿಂಹನೂ ಅನಂಗಸೇನೆಯ ಹೌದೆಂದು ನಂಬಬಹುದೇ ? ಚೆನ್ನಾಗಿ ಯೋಚಿಸಿ ನೋಡೋಣವಾಗಲಿ.??
- ಅಬ್ರಜಿ! ಇದೇನು ಹೀಗೆ ಹೇಳುತ್ತಿರುವಿರಿ ? ಅಂಗುಳೀಯಕ ವನ್ನು ವಿನಿಮಯಮಾಡಿಕೊಂಡಿರುವರೆಂದು ಹೇಳಿದೆಯಷ್ಟೆ ? ಇದು ನಿಜವಾ ಗಿದ್ದರ ನಂಬದೆ ಇರಲು ಹೇಗಾಗುವುದು ?
“ಮಹಾಸ್ವಾಮಿಯವರು ಸಾವಧಾನದಿಂದ ಕೇಳ ಬೇಕು : ವಿಜಯ ಸಿಂಹನಿಗೆ ಪ್ರಬಲಶತ್ರುಗಳಿರುವರೆಂದು ತಮಗೆ ತಿಳಿದೇ ಇರುವುದು. ಅವರು ಕುತಂತ್ರಗಳನ್ನು ಮಾಡಿ ಒಂದು ಉಂಗುರದಂತಿರುವ ಮತ್ತೊಂ. ದನ್ನು ರಚಿಸಿರಬಾರದೇ ? ಒಂದು ವೇಳೆ ಅವರು ಹೀಗೆ ಮಾಡಿದ್ದಲ್ಲಿ, ನಿರ ಪರಾಧಿಗಳಾದವರಮೇಲೆ ದೋಷಾರೋಪಣೆ ಮಾಡಿದಂತಾಗುವುದಿಲ್ಲವೇ ? ) 'ನಿಮ್ಮ ಈ ಪೂರ್ವ ಪಕ್ಷವು -ಸ, ಸಮಂಜಸವೆಂದು ತೋರುವು ದಿಲ್ಲ. ಏ ತೆ: ದರೆ ಆ ಉಂಗುರಗಳು ಸುಲಭವಾಗಿ ಎಲ್ಲರ ಕೈಗೂ ಸಿಕ್ಕು ದಂತಹುವ, ಸರದೇಶದ ವರ್ಚಕನೊಬ್ಬನಿಂದ ಬಂದೇವುಟದ ಎರಡು ಉಂಗುರಿಗಳನ್ನು ಕೊಂಡುಕೊಂಡು ರಹಸ್ಯವಾಗಿ ಒಂದರಮೇಲೆ ಶ್ರೀರಂಗ