ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ರಾಯರು ವಿಜಯ ತಿಳಿಯದೆಯ ಮಾಡಿರಬಹುದಾದ ಸಕಲ ವಿಧವಾದ ಮತಕಗಳನ್ನೂ ಕ್ಷಮಿಸಿ ತನಗೆ ಪದ್ಧತಿಯನ್ನುಂಟುಮಾಡಬೇಕೆಂದು ಅನನ್ಯಮನಸ್ಕನಾಗಿ ಭಗವಂತನನ್ನು ಧ್ಯಾನಿಸಿದನು. ಅಷ್ಟರಲ್ಲೇ ಕೂರಕರಿಗಳಾದ ಆ ಗಂಡಾ ಅರು “ ನಿನ್ನ ಧ್ಯಾನವು ಮುಗಿಯಿತ ? ಮುಂದಿನ ಕೆಲಸವನ್ನು ನಡೆಯಿಸ ಬಹುದೇ ??” ಎಂದು ಕೇಳಲು, ವಿಜಯಸಿಂಹನು ನಡೆಯಿಸಬಹುದೆಂದು ಕೈಯಿಂದಲೇ ಸಂಜ್ಞೆಮಾಡಿ ತೋರಿಸಿದನು. ಕಟುಕರು ಅವನನ್ನು ಆ ಚಪ್ಪಡಿಯು ಮೇಲಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿ, ಒಬ್ಬನು ಅವನನ್ನು ಬಲವಾಗಿ ಹಿಡಿದು ನಿಲ್ಲಿಸಿದನು, ಮತ್ತೊಬ್ಬನು ತನ್ನ ಕತ್ತಿಯನ್ನು ಗುರಿ ಹಿಡಿದು ನೋಡುತ್ತಿದ್ದನು ಪ್ರೇಕ್ಷಕರಲ್ಲೊಬ್ಬನು “ ತಡಮಾಡಬೇಡ, ತಡಮಾಡಬೇಡ, ಕತ್ತರಿಸಿ ಹಾಕು" ಎಂದು ಕೂಗಿಕೊಳ್ಳುತ್ತಿದ್ದನು. “ ಇವನು ನಮಗೆ ಹಿಂದೆ ಪರಿಚಿತನಾದ ಹುಚ್ಚನೇ, ಹಿಂದೆ ನಿನಗೆ ಜೀವವನ್ನು ೪ಸಿದವನ ಪ್ರಾಣವನ್ನು ತೆಗೆಯಬೇಕೆಂದು ಹೀಗೇಕ ತ್ವರೆಪಡಿಸುವೆ ? " ಎಂದು ಪ್ರೇಕ್ಷಕರಲ್ಲಿ ಕೆಲವರು ಹುಚ್ಚನನ್ನು ಕೇಳಲು, ಅವರಿಗೆ ಉತ್ತರ ಕೊಡದೆ ಪಕಪಕನೆ ನಕ್ಕುಬಿಟ್ಟನು. ಈ ಸಮಯದಲ್ಲಿ “ ನಿಲ್ಲು ! ಕೊಲ್ಲಬೇಡ ! ನಿಲ್ಲು ನಿಲ್ಲು ! " ಎಂಬ ಮಾತುಗಳು ಕೇಳಿಬಂದುವು, ಚಂಡಾಲನು ಎತ್ತಿದ್ದ ಕೈಯನ್ನು ಇಳಿಸಿದನು. ಜನರೆಲ್ಲರೂ ಈ ಧ್ವನಿ ಕೇಳಿಬಂದ ದಿಕ್ಕನ್ನು ನೋಡುತ್ತಿ ದ್ದರು. ಹೀಗೆ ಕೂಗುತ್ತ ಬಂದವನ ಆಕಾರವನ್ನು ನೋಡಿದರೆ ದೊಡ್ಡ ಅಧಿಕಾರಿಯಾಗಿದ್ದಂತೆ ಕಂಡುಬಂತು. ದಾರಿಯಲ್ಲಿದ್ದವರೆಲ್ಲರೂ ಆತನಿಗೆ ಸ್ಥಳಬಿಟ್ಟು ಕೊಟ್ಟರು. ಈ ಪುರುಷನು ಮಹಾಪ್ರಧಾನನಾದ ತಿಮ್ಮರಸನ ಮಂತ್ರಿಯೇ ಆಗಿದ್ದುದನ್ನು ಕಂಡು ಪ್ರೇಕ್ಷಕರಲ್ಲಿ ಬಗೆಬಗೆಯ ಭಾವಗ ಳುಂಟಾದುವು. ವಿಜಯಸಿಂಹನಿಗೆ ಅಹಿತರಾಗಿದ್ದ ರುದ್ರದೇವ ಮೊದಲಾದ ಪರಿಗೆ ಹೊಗೆಯಾಡುತ್ತಿದ್ದ ಹೊಟ್ಟೆ ಕಿಚ್ಚು ಭಗ್ಗನೆ ಹೊತ್ತಿಕೊಂಡಂತ