೨೩ ಎ ಕರ್ಣಾಟಕ ಗ್ರಂಥಮಾಲೆ ಕೂಡುವಂತೆ ಪ್ರಾರ್ಥಿಸಿಕೊಂಡನು, ಅಪ್ಪಾಜೆಯವರಿಗೂ ಚಕ್ರವರ್ತಿಯ ವರಿಗೂ ಇದ್ದ ಋಣಾನುಬಂಧವೇ ಅಂತಹ ವಿಷಮಸಂಕಟದಲ್ಲಿಯ ಮಂತ್ರಿಯ ಪ್ರಾರ್ಥನೆಯನ್ನು ನಡೆಯಿಸಿಕೊಟ್ಟಿತು. ಆದರೂ ತಮಗೆ ದೆಹವನ್ನು ಬಗೆದಿದ್ದ ವಿಜಯಸಿಂಹನಿಗೆ ಮತ್ತೆ ಅಂತಹ ಗಡುವುದೊರೆ ಯಕೂಡದೆಂದೂ, ಐದನೆಯದಿನ ಪ್ರಾತಃಕಾಲವೇ ವಿಜಯನಿಂಹನನ್ನು ಕೊಂದು ಬಿಡಬೇಕೆಂದೂ, ಈ ನಾಲ್ಕು ದಿನಗಳಲ್ಲಿ ಮಂತ್ರಿಯವರು ವಿಜಯ ನಿಂಹನನ್ನು ನೋಡಕೂಡದೆಂತಲೂ ವಿಧಿಸಿದ್ದರು. ಅಷ್ಟಾದರೂ ವಿರಾಮಸಿಕ್ಕಿತಲ್ಲಾ ಎಂದು ಸಂತೋಷಿಸಿ ಮಂತ್ರಿಯು ಮನೆಗೆಬಂದು “ ವಿಜಯಸಿಂಹನು ನಿಜವಾಗಿಯೂ ಅಪರಾಧಿಯೇ ? ಇಲ್ಲವೇ ಶತ್ರುಗಳ ಕುತಂತ್ರಕ್ಕೆ ಬಲಿಯಾಗುವಂತೆ ಆಗಿದೆಯೇ ? " ಎಂದು ಹಲವು ವಿಧಗಳಲ್ಲಿ ಯೋಚಿಸಿದನು. ಎಷ್ಟು ಯೋಚಿಸಿದರೂ ಬಗೆಹರಿಯಲಿಲ್ಲ. ಕಡೆಗೆ, ಹಿಂದೆ ವಿಜಯಸಿಂಹನಿಗೆ ಶತ್ರುಗಳು ತಂದಿದ್ದ ಗಂಡಾಂತರದಲ್ಲಿ ಮು ಕ್ಲಾಂಬೆಯು ಸಹಾಯಮಾಡಿದ್ದು, ರಾಮರಾಜನು ಆ ಸಮಯದಲ್ಲಿ ಅಲ್ಲಿ ನಡೆದ ಸಮಾಚಾರಗಳನ್ನೆಲ್ಲಾ ತಿಳಿದುಬಂದು ಹೇಳಿದ್ದುದೂ ನೆನಪಿಗೆ ಬಂತು. ಆದುದರಿಂದ ಈಗಲೂ ರಾಮರಾಜನ ಮೂಲಕ ಸ್ಪಲ್ಪಮಟ್ಟಿಗಾದರೂ ತಥ್ಯಾ೦ಶವು ತಿಳಿಯಬಹುದೆಂದು ಅವನನ್ನು ಕರೆಯಿಸಿ ಆನೆಗೊಂದಿಗೆ ಕಳು ಹಿಸಿದನು. ಅವನು ಬಂದು ಮುಕ್ಕಾಂಬೆಯನ್ನು ಕಂಡನು. ಇಷ್ಟರಲ್ಲೇ ಮು ಕ್ಯಾಂಬೆಯು ವಿಜಯಸಿಂಹನ ವೃತ್ತಾಂತವೆಲ್ಲವನ್ನೂ ರುದ್ರದೇವನಿಂದ ಹೀರಿ ತಿಳಿದುಕೊಂಡುಬಿಟ್ಟಿದ್ದಳು. ರಹಸ್ಯವನ್ನು ಮಂತ್ರಿಗಾಗಲಿ, ಚಕ ವರ್ತಿಯವರಿಗಾಗಲಿ ವಾಸ್ತವವಾಗಿ ತಲುಪಿಸುವ ಭಟನ ಕೈಯಲ್ಲಿ ಪತ್ರವನ್ನು ಕೊಟ್ಟು ಕಳುಹಿಸಬೇಕೆಂದು ಆತುರಪಡುತ್ತಿದ್ದಳು. ಆದುದರಿಂದ ರಾಮರಾಜನು ತನ್ನನ್ನು ನೋಡಲು ಬಂದಾಗ ನಿಧಿಯುಸಿಕ್ಕಿದ ನಿರ್ಧನನಂತೆ
ಪುಟ:ರಾಯಚೂರು ವಿಜಯ ಭಾಗ ೧ .djvu/೧೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.