ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೨೭ ಅಪರಿಮಿತಾನಂದಭರಿತಳಾಗಿ " ಅಣ್ಣಾ ರಾಮರಾಜ! ಹಿಂದೆಯ ಭಾಗ್ಯದೇವ ತೆಯಂತ ಅನಿರೀಕ್ಷಿತವಾಗಿ ಬಂದು ವಿಜಯಸಿಂಹನನ್ನು ಉಳಿಸಿದೆ ; ಈಗಲೂ ಅವನ ಪ್ರಾಣವನ್ನು ರಕ್ಷಣೆಮಾಡಲು ದೇವರೇ ನಿನ್ನನ್ನು ಇಲ್ಲಿಗೆ ಕಳುಹಿಸಿ ರಬೇಕು, ಕ್ಷಣಮಾತ್ರವೂ ತಡಮಾಡದೆ ಈ ಕಾಗದವನ್ನು ಮಂತ್ರಿ ಯವರ ಕೈಗೇ, ನೀನೇ ಕೊಡು. ಇದು ಶತ್ರುಗಳ ಕೈಗೆ ಸಿಕ್ಕಿದರೆ ನಿರಪರಾ ಧಿಯು ಹತನಾಗುವನು. ವಿಜಯಸಿಂಹನ ಪ್ರಾಣವು ನಿನ್ನ ಕೈಯಲ್ಲಿ ಇದು ವದು, ಜೋಕೆ ! ತಡಮಾಡಬೇಡಣ್ಣಾ !” ಎಂದು ವಿನ..ದಿಂದ ಪ್ರಾರ್ಥಿಸಿ ಒಂದು ಕಾಗದವನ್ನು ಅವನಿಗೆ ಕೊಟ್ಟಳು. ರಾಮರಾಜನು ಆ ಫೆರಾಂಧಕಾರದಲ್ಲಿಯೇ ಹೊರಟು ಏಜಯ ನಗರವನ್ನು ಸೇರಿ, ಆ ಕಾಗದವನ್ನು ಮಂತ್ರಿಗೆ ತಲುಪಿಸಿದನು. ಆತನು ಆ ವೇಳೆಯಲ್ಲಿ ರಾಜಸಂದರ್ಶನವನ್ನು ಕೋರುವುದು ಅನುಕ್ಷವೆಂದು ಬೆಳಕುಹರಿಯುವವರೆಗೂ ಕಾದಿದ್ದನು ರಾಜಸಂದರ್ಶನವನ್ನು ಮಾಡಿ ಹುಚ್ಚನೂ ರುದ್ರದೇವನೂ ನಡೆಯಿಸಿದ್ದ ಪೈಶಾಚಿಕತಂತ್ರವನ್ನೆಲ್ಲಾ ವಿವ ರಿಸಿದನು. ವಿಜಯಸಿಂಹನು ಆನೆಗೊಂದಿಗೆ ಹೋಗಿದ್ದಾಗ ಅವನನ್ನು ಶೈವ ಮಠಕ್ಕೆ ಹೊತ್ತುಕೊಂಡುಹೋಗಿ ಅವನನ್ನು ಕೊಲ್ಲಲಾಗದೆ ಅವನು ಧರಿ ಸಿದ್ಧ ಆಭರಣಗಳನ್ನು ಅಪಹರಿಸಿದುದೂ, ಹುಚ್ಚನು ಕೋತಿಯನ್ನು ಕುಣಿ ಸುವವನ ಸೋಗನ್ನು ಹಾಕಿಕೊಂಡು ಅನಂಗಸೇನೆಯ ಉಂಗುರವನ್ನು ಅಪಹರಿಸಿ ಅದಕ್ಕೆ ಪ್ರತಿಯಾಗಿ ಚಕ್ರವರ್ತಿಯವರು ವಿಜಯಸಿಂಹ ನಿಗೆ ಕೊಟ್ಟಿದ್ದ ಉಂಗುರವನ್ನು ವಿನಿಮಯ ಮಾಡಿದುದೂ, ತನ್ನ ಪ್ರಾಣ ರಕ್ಷಣೆಯನ್ನು ಮಾಡಿದುದಕ್ಕಾಗಿ ಪಾರಿತೋಷಕ ಕೊಡುವ ವ್ಯಾಜದಿಂದ ವಿಜಯಸಿಂಹನಿಗೆ ಅನಂಗಸೇನೆಯ ಉಂಗುರವನ್ನು ತಲುಪಿಸಿದುದೂ, ಬಳಿಕ, ಪುಷ್ಪಮಾಲಿಕೆಯಲ್ಲಿ ಕೃತ್ರಿಮಲೇಖನವನ್ನು ಹುದುಗಿಸಿದುದೂ-ಇವೇ ಮುಂತಾದ ಒಳಸಂಚುಗಳನ್ನೆಲ್ಲಾ ಕುರಿತು ತನಗೆಬಂದಿದ್ದ ಲೇಖನವನ್ನು ಒ S ದಿ