ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧ ಕಾಯುರುವಿಜಯ ಹೋದರೆ ಒಳ್ಳೆಯದೆಂದು ಭಾವಿಸಿಕೊಂಡಿದ್ದ ಅನಂಗಸೇನೆಯು ಆ ಪ್ರಶ್ನೆಗೆ ಅಷ್ಟು ಗಮನ ಕೊಡಲಿಲ್ಲ. ಇಂಗಿತಜ್ಞಳಾದ ಮಾಲತಿಯು ಇನ್ನು ಉಪೇಕ್ಷಿಸಬಾರದೆಂದು ಭಾವಿಸಿ, “ ಅಮ್ಮಾ ! ಅಸಹಾಯರಾದ ನಮಗೆ ಅನಾಥರಕ್ಷಕನಾದ ದೇವರು ಒಳ್ಳೆಯದು ಮಾಡುವನೆಂದು ನಾನೂ ಹೇಳಿ ದೈನಲ್ಲವೆ ? ನನ್ನ ಮಾತು ಈಗಲೇ ನಿದರ್ಶನಕ್ಕೆ ಬಂದಿದೆ” ಎಂದಳು. ಈ ಮಾತನ್ನು ಕೇಳಿ ಅನಂಗಸೇನೆಗೆ ಸ್ವಲ್ಪ ಆಸೆಯು ಅಂಕುರಿ ಸಿತು, ಇದನ್ನು ಕಂಡು ಮಾಲತಿಯು “ ಆ ವೈದ್ಯನು, ತನ್ನ ಔಷಧ ವೊಂದರಿಂದ ಮಾತ್ರವೇ ಅಲ್ಲದೆ, ಈ ಪತ್ರದ ಮೂಲಕವೂ ನಿನ್ನ ರೋ ಗವನ್ನು ಗುಣಪಡಿಸಿರುವನು. ಇದನ್ನು ಓದುತ್ತೇನೆ. ಶಾಂತಳಾಗಿ ಕೇಳು ಎಂದು ಈ ಮೇರೆಗೆ ಓದಲಾರಂಭಿಸಿದಳು :- “ ಮಾತೃ ಸಮಾನರಾದ ಅನಂಗಸೇನೆಯವರಿಗೆ ನಿಷ್ಕಾರಣವಾಗಿ ತಮ್ಮ ಮೇಲೆ ನಿಂದೆಯನ್ನು ಹೊರಿಸಿದುದಕ್ಕಾಗಿ ಚಕ್ರವರ್ತಿಯವರು ವ್ಯಥೆಪಡುತ್ತಿರುವರು. ಅವರ ಆಜ್ಞೆಯನ್ನು ಶಿರಸಾ ವಹಿಸಿ ತಮ್ಮನ್ನು ಹುಡುಕುತ್ತಲಿದ್ದೆನು. ಇಷ್ಟರಲ್ಲೇ ಅವರು ತಮ್ಮ ಬಳಿಗೆ ಕರೆಯಿಸಿಕೊಳ್ಳುವರು. ಚಿಂತಿಸ ಕೆಲಸವಿಲ್ಲ, ಬುದ್ಧಿವಂತಳಾದ ಮಾಲತಿಯು ಸವಿಾಪದಲ್ಲಿರುವುದರಿಂದ ಧೈಯ್ಯದಿಂದಿರಬಹುದು, ರಾಮರಾಜ.೨೨ ಆ ಕಾಗದವನ್ನು ಓದಿ ಮುಗಿದಕೂಡಲೆ ಅದನ್ನು ತೆಗೆದುಕೊಂಡು ತಾನೇ ಓದಿಕೊಂಡಳು. ಆ ಬಳಿಕ ಆಕೆಯ ಚಿಂತೆಯು ಕಡಿಮೆಯಾಯಿತು. ಮಾಲತಿಯು ಹೇಳಿದ್ದಂತೆ ಔಷಧದ ಜೊತೆಗೆ ಆ ಪತ್ರವೂ ಗುಣಕಾರಿ ಶಿ ಯಾಯಿತು.