ಕರ್ಣಾಟಕ ಗ್ರಂಥಮಾಲೆ ಇಪ್ಪತ್ತುನಾಲ್ಕನೆಯ ಪ್ರಕರಣ, ರಾಯಭಾರಿ, ರಾಯಚೂರು ದುರ್ಗದಲ್ಲಿ ಅರಮನೆಗೆ ಸೇರಿದಂತೆಯೇ ದೊಡ್ಡದಾದ ಬಂದು ಸಭಾಮಂದಿರವು ಇತ್ತು. ಅದರಲ್ಲಿ ಎರಡುಸಾವಿರ ಜನರು ಸಭೆ ಸೇರಬಹುದಾಗಿತ್ತು. ನುಣ್ಣಗಿದ್ದ ಕರಿಯಕಲ್ಲಿನ ಚಪ್ಪಡಿಗಳನ್ನು ನೆಲಕ್ಕೆ ಹಾಸಿದ್ದರು. ಆ ಮಂದಿರದಲ್ಲಿ ಬಹಳ ರಮಣೀಯವಾದ ಪೀಠಗಳು ಇದ್ದುವು, ತೋಫಖಾನನು ಈ ಮಂದಿರದಲ್ಲೇ ತನ್ನ ಸಭೆಗಳನ್ನು ನಡೆ ಯಿಸುತ್ತಿದ್ದನು. ಈಗ ತನ್ನ ದಣಿಯು ಅಲ್ಲಿಗೆ ಬರುವನೆಂದು ವರ್ತಮಾನ ಬಂದಿದ್ದುದರಿಂದ, ಆ ಸುಂದರವಾದ ಸಭಾಮಂದಿರವನ್ನು ಮತ್ತಷ್ಟು ಚೆನ್ನಾಗಿ ಅಲಂಕರಿಸಿದ್ದನು, ರಾತ್ರಿ ಎಂಟು ಗಂಟೆಗೆ ದರ್ಬಾರು ನಡೆಯುವಂತೆ ಗೊತ್ತಾ ಗಿತ್ತು. ಕರೆದಿದ್ದ ವರುಮಾತ್ರ ಆ ಸಭೆಗೆ ಹೋಗಬಹುದಾಗಿತ್ತು. - ಗೊತ್ತಾಗಿದ್ದ ಕಾಲದಲ್ಲಿ ಸಭೆಯು ಪ್ರಾರಂಭವಾಯಿತು. ಸಭಾಸದ ರೆಲ್ಲರೂ ಅನರ್ಥ್ಯವನ್ನಾಭರಣಗಳನ್ನು ಧರಿಸಿಕೊಂಡು ತಮ್ಮ ತಮ್ಮ ಸ್ಥಾನ ಗಳಲ್ಲಿ ಕುಳಿತುಕೊಂಡಿದ್ದರು. ಆ ಸಮಯದಲ್ಲಿ ಮಂಗಳವಾದ್ಯ ಘೋ ಪವು ಭೋರ್ಗರೆಯಿತು. ಹೊಗಳುಭಟರು ಬಿರುದಾವಳಿಗಳನ್ನು ಉಗ್ಗಡಿ ಸುತ್ತಾ, ಸಭಾ ಮಂದಿರವನ್ನು ಪ್ರವೇಶಿಸಿದರು, ಅವರ ಹಿಂದೆ ಸ್ವಲ್ಪ ದೂರ ದಲ್ಲಿ ಬಾದಷಹ ಅದಿಲ್‌ಪಹನೂ, ಆತನಸಂಗಡ ತೋಫಖಾನನೂ, ಇವ ರುಗಳ ಹಿಂದೆ ಅಂಗರಕ್ಷಕರೂ ಪ್ರವೇಶಿಸಿದರು. ಹೊಗಳುಭಟರ ಧ್ವನಿ ಯನ್ನು ಕೇಳಿದಕೂಡಲೇ ಸಭಾಸದರೆಲ್ಲರೂ ಜಗ್ಗನೆ ನಿಂತುಕೊಂಡು, ಭಯಭಕ್ತಿಗಳಿಂದ ಸಲಾಮು ಮಾಡಿದರು, ಅದಿಲ್‌ಪಹನಿಗೆ ವಯಸ್ಸು ಇಪ್ಪ
ಪುಟ:ರಾಯಚೂರು ವಿಜಯ ಭಾಗ ೧ .djvu/೨೦೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.