ರಾಯರು ವಿಜಯ ೮೬ - ಇ ತೋರಿಸಿ, ಕಡೆಗೆ, ಕರಿಯ ಕಲ್ಲುಗಳಿಂದ ಕಟ್ಟಿದ ಗಟ್ಟಿ ಯಾದ ಒಂದು ಕಟ್ಟಡದ ಬಳಿಗೆ ಕರೆತಂದನು. ಅದು ನೋಡುವುದಕ್ಕೆ ಅಸಹ್ಯಕರವಾಗಿತ್ತು ಒಳಗೆ, ಹಗಲಿನಲ್ಲೇ ಕಣ್ಣು ಕಾಣಿಸದಷ್ಟು ಕತ್ತಲೆಯಾಗಿತ್ತು. ಖಾನನ ವಿಜಯ ಸಿಂಹನೂ ಆ ಕಟ್ಟಡದ ಬಳಿಗೆ ಬಂದಾಗ, ಹತ್ತು ಮಂದಿ ಸೇವಕರು ಬಂಧನಸಾಧನಗಳನ್ನು ತಂದು ತೋಫಲ್ ಖಾನನ ಇದಿರಿಗೆ ನಿಂತುಕೊ೦ ಡರು. ಸ್ವಲ್ಪ ಹೊತ್ತಿನಲ್ಲೇ ಅವರು ತೋಫಲ್ ಖಾನನ ಕಣ್ಣ ಸನ್ನೆಯ ಮೇರೆಗೆ ವಿಜಯಸಿಂಹನನ್ನು ಆವರಿಸಿಕೊಂಡರು. ಆಗ ಆತನು, “ ದುರ್ಗಾ ಧಿಪರೇ ! ಇದೆಲ್ಲಿಯ ನ್ಯಾಯ ? ಇವರೇಕೆ ನನ್ನ ಸುತ್ತಲೂ ಸುತ್ತಿಕೊಂಡಿ ರುವರು. ಇವರು ನನ್ನನ್ನು ಅವಮಾನಪಡಿಸಬೇಕೆಂದು ಹೀಗೆ ಮಾಡುತ್ತಿ ರುವಂತೆ ತೋರುವುದು. ಇದು ನಿಜವಾಗಿದ್ದರೆ ನನ್ನ ಈ ಕತ್ತಿಯು ಇವ ರಿಗೆ ಬುದ್ಧಿ ಕಲಿಸುವುದು.” ಎಂದು ಧೈಯ್ಯವಾಗಿ ಹೇಳಿದನು ಆಗ ದುರ್ಗಾಧಿ ಕಾರಿಯು ಆತನನ್ನು ನೋಡುತ್ತಾ, “ ವಿಜಯಸಿಂಹರೇ ! ತಾವು ತಂದ ಸಂದೇಶವನ್ನು ಕೇಳಿ ಬಹಳ ಸಂತೋಷಪಟ್ಟು ನಮ್ಮ ಬಾಪಹರು ತಮಗೆ ಬಹುಮಾನ ಮಾಡಿದರು. ಈಗ ನಾನು ತಮಗೆ ಬಹುಮಾನವನ್ನು ಸಮರ್ಪಿಸ ಬೇಕಾಗಿರುವುದು, ಹೀಗೆ ಮಾಡುವವರೆಗೂ ಈ ಮಂದಿರ ದಲ್ಲಿ ವಿಶ್ರಮಿಸಿಕೊಳ್ಳುತ್ತಾ, ಅತ್ತಿತ್ತ ಹಾರಾಡುವ ಕಪಟದ ಹಕ್ಕಿಗಳೊಡನೆ ಸ್ನೇಹಮಾಡಿಕೊಳ್ಳುತ್ತಾ, ಅವುಗಳ ಗೌರವವನ್ನು ಸಂಪಾದಿಸಿಕೊಳ್ಳು ತಿರಿ ೨೨ ಎಂದು ಮರ್ಮೋದ್ಘಾಟಕವಾಗಿ ಮಾತನಾಡಿದನು. ಇವನು ಮಾತ ನಾಡುವುದನ್ನು ನಿಲ್ಲಿಸಿದ ಕೂಡಲೆ ಸೇವಕರು ವಿಜಯಸಿಂಹನನ್ನು ಬಲಾ ತ್ಕಾರದಿಂದ ಬಂಧಿಸಿ ಕಾರಾಗೃಹಾಧಿಕಾರಿಗೆ ಒಪ್ಪಿಸಿದರು. ತೋಫಲ್ ಖಾನನು, “ ನಾನಾಗಲಿ ಅಥವಾ ನಾನು ಕಳುಹಿಸುವ ಮುದ್ರೆಯಾಗಲಿ ಇಲ್ಲದೆ ಖೈದಿಯನ್ನು ಬಿಡಕೂಡದು, ” ಎಂದು ಅಪ್ಪಣೆಕೊಟ್ಟು ಹೊರ ಟುಹೋದನು
ಪುಟ:ರಾಯಚೂರು ವಿಜಯ ಭಾಗ ೧ .djvu/೨೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.