ඒඒ ಕರ್ಣಾಟಕ ಗ್ರಂಥಮಾಲೆ ಇಪ್ಪತ್ತೈದನೆಯ ಪ್ರಕರಣ - ಕ ೦ಬ o• ಸೆನ' , ಏಕಂ ನಿಹನಾತ್ ಸಂದೇಹಃ ಕಾಂಡೋಮ ಕೋ ಧನುಷ್ಮತಾ | ಬುದ್ಧಿ ರ್ಬುದ್ಧಿಮತಾಂ ದೃಏಾಹನ್ಯಾತ್ ರಾಷ್ಟ್ರ ಸರಾಜಕಂ || ರಾತ್ರಿಯಾಯಿತು. ಕಾರಾರ್ಥವಾಗಿ ಸ್ಥಲಾಂತರಗಳಿಗೆ ಹೋಗಿದ್ದ ಜನರು ತಮ್ಮ ತಮ್ಮ ಕಾಠ್ಯಗಳನ್ನು ಮುಗಿಸಿಕೊಂಡು ತಮ್ಮ ಮನೆಗೆ ಳನ್ನು ಸೇರಿದರು. ದಿವಾಸಂಚರಿಸ್ಟುಗಳಾದ ವಿಹಂಗಮಾದಿಗಳು ತಮ್ಮ ತಮ್ಮ ನಿವಾಸಸ್ಥಾನವನ್ನು ಸೇರಿದುವು. ನೀಲಾಕಾಶದಲ್ಲಿ ನಕ್ಷತ್ರಗಳು ವಜ್ರದಂತೆ ಪ್ರಕಾಶಿಸುತ್ತಿದ್ದುವು, ಕತ್ತಲೆಯು ದಟ್ಟವಾಗಿ ವ್ಯಾಪಿಸುತ್ತಿತ್ತು. ಆಗ ರಾಯೂರುದುರ್ಗದಲ್ಲಿ ಬಂದು ಮೂಲೆಯಲ್ಲಿದ್ದ ಒಂದು ಹಾಳುದೇ ವಸ್ಥಾನದ ಬಳಿಗೆ ಒಬ್ಬ ಮನುಷ್ಯನು ಹೋಗುತ್ತಿದ್ದನು. ರಾಯರು ದುರ್ಗವು ಹಿಂದೂ ರಾಜರ ಆಳಿಕೆಗೊಳಪಟ್ಟಿದ್ದಾಗ ಆ ದೇವಸ್ಥಾನವು ನಿರ್ಮಿತವಾಗಿತ್ತು. ರಾಯ ರು ವುಹಮ್ಮದೀಯರ ಕೈಗೆ ಸಿಕ್ಕಿದಮೇಲೆ ಆ ದೇವಸ್ಥಾನವು ಹಾಳುಬಿದ್ದು ಜನಸಂಚಾರವೂ ಸಹ ಇಲ್ಲದಿತ್ತು. ಏನಾದರೂ ಕೆಲಸವಿದ್ದ ಹೊರತು ಪೌರರಲ್ಲಿ ಯಾರೂ ಅಲ್ಲಿಗೆ ಹೋಗುತ್ತಿ ರಲಿಲ್ಲ. ಮೇಲೆ ಹೇಳಿದ ಮನುಷ್ಯನು ದೇವಸ್ಥಾನದ ಬಳಿಗೆ ಹೋದಾಗ, ಅಲ್ಲಿ ಇಬ್ಬರು ಕುಳಿತುಕೊಂಡು ಮಾತನಾಡಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬನು ಹೊಸದಾಗಿ ಬಂದಾತನನ್ನು ನೋಡಿ, “ ಶಂಕರರೆಡ್ಡಿ ! ನಿನ್ನ ಕೆಲ ಸವು ಕೈಗೂಡಿತೆ ? ಅನಂಗಸೇನೆಗೆ ರೋಗವು ಈಗ ಹೇಗಿದೆ ? ಈಗ ಚೆನ್ನಾಗಿ ವಾಸಿಯಾಗಿದೆಯೆ ? ಎಂದು ಕೇಳಿದನು. ಇ. ಥ
ಪುಟ:ರಾಯಚೂರು ವಿಜಯ ಭಾಗ ೧ .djvu/೨೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.