ರಾಯರುವಿಜಯ ೧೦೧ ಲ 0 9 ಸರಿ, ಹಿಂದೂರಾಜ್ಯಕ್ಕೆ ವಿರೋಧಿಗಳಾಗಿರುವ ಈ ನೀಚರನ್ನು ಜಯಿಸಿದ ಹೊರತು ಹಿಂದುಗಳಿಗೆ ಮನಸ್ಸು ತೃಪ್ತಿಯಾಗದು. ಸರ್ವಪ್ರಯತ್ನವನ್ನೂ ಮಾಡಿ ರಹಸ್ಯವನ್ನು ಕಾಪಾಡಿಕೊಳ್ಳುತ್ತಿರಬೇಕೆಂದು ಪ್ರಜ್ಞರಿಗೆ ಸೂಚಿ ಸುವ ಆವಶ್ಯಕವೇನಿದೆ ? ಇಂತೀ ವಿಜ್ಞಾಪನೆಗಳು.” ಈ ಕಾಗದವನ್ನು ಓದಿಕೊಂಡು ಆ ಆಗಂತುಕನನ್ನು ನೋಡಿ “ ನಾನು ಇದಕ್ಕೆ ಪ್ರತ್ಯುತ್ತರವನ್ನು ಬರೆದು ಒಬ್ಬ ಸೇವಕನೊಡನೆ ಕಳುಹಿ ಸುವೆನು, ನೀನು ಈಗಹೋಗು ” ಎಂದು ಹೇಳಿ ಅವನನ್ನು ಕಳುಹಿಸಿ ಬಿಟ್ಟು ತನ್ನಲ್ಲಿ ತಾನೇ 6 ಆಹಾ ! ನೆನ್ನೆ ಆ ಉದ್ಯೋಗಿಯು ಹೇಳಿದ ಮಾತು ನಿಜವೆಂದು ತೋರುವುದು ರಾಮಯಮಂತ್ರಿಯು ಮಹಾವಿಾಯಾವಿ ಎಂದು ಸ್ಥಾಪಿಸುವುದಕ್ಕೆ ಸ್ತ್ರೀಗೆ ಪುರುಷನೇಪವನ್ನು ಹಾಕಿ ನಮ್ಮೆಲ್ಲರನ್ನೂ ಮರು ಳುಗೊಳಿಸುವುದೇ ಸಾಕು. ಈ ಕಾಗದದಲ್ಲಿ ಯ ಸೋಮೇಶ್ವರಪುತ್ರನ ಸುದ್ದಿಯೇ ಇಲ್ಲ. ಒಂದುವೇಳೆ ನಾವು ಸೈನ್ಯವನ್ನು ತೆಗೆದುಕೊಂಡು ಹೊರಟರೆ, ನಮ್ಮ ರಾಜ್ಯವು ಶತ್ರುಗಳಿಗೆ ವಶವಾಗುವುದು, ಅತೀ ಆಸೆ ಪಟ್ಟರೆ ಈಗ ಯಿರುವುದೂ ಹೋಗುವುದು ನಿಜ' ಎಂದು ಯೋಚಿಸುತ್ತಾ ಬರೆವಣಿಗೆಯು ತಿಮ್ಮರಸನದೇ ಹೌದೋ ಅಲ್ಲವೋ ಎಂಬುದನ್ನು ಪರೀಕ್ಷಿ ಸುವುದಕ್ಕಾಗಿ ತನ್ನ ಪೆಟ್ಟಿಗೆಯಲ್ಲಿದ್ದ ತಿಮ್ಮರಸನ ಮತ್ತೊಂದು ಕಾಗದ ವನ್ನು ತೆಗೆದು ಅವೆರಡು ಬರವಣಿಗೆಗಳನ ಹೋಲಿಸಿನೋಡಿದನು, ಅವು ಗಳಿಗೆ ಎಳ್ಳಷ್ಟಾದರೂ ಭೇದವಿರಲಿಲ್ಲವಾದುದರಿಂದ ಕಂಬರಸೇನನು ಹಿಂದಿನ ವೃತ್ತಾಂತವನ್ನು ದೃಢವಾಗಿ ನಂಬಿದನು.
ಪುಟ:ರಾಯಚೂರು ವಿಜಯ ಭಾಗ ೧ .djvu/೨೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.