೧೦೨ ಕರ್ಣಾಟಕ ಗ್ರಂಥಮಾಲೆ ಇಪ್ಪತ್ತಾರನೆಯ ಪ್ರಕರಣ. • - -+++4 .. .. ಮಲಮಲರ್ಖಾ. ಬನಕ್ಕಿಸಮ್ಯಕ್ ಪ್ರಹಿತೋ ಛೇದೋಪಾಯ ಸ್ಥಿರಾಂಮತಿಂ | ಚಾಧರ್ರಾ ಕರ್ಕಶ ಶಿರ್ಲಾ ಮಹಾಶವಿರಿವೋದಕಂ || ಮಲಮಲಖಾನನು ಗೋಲ್‌ಕೊಂಡರಾಜ್ಯದ ಸೈನ್ಯಾಧಿಪತಿ, ಈತ ನಿಗೆ ಹಿಂದೆ ಸದರುರ್ದ್ದೀ ಎಂಬ ಸೈನ್ಯಾಧಿಪತಿಯು ಗೋಲ್ಕೊಂಡದ ರಾಜ್ಯವನ್ನು ತನ್ನ ಪ್ರಾಣಿಗಳಂತೆ ಕಾಪಾಡುತ್ತಿದ್ದನು. ಕ್ರಿ. ಶ. ೧೫೧೫ನೆಯ ವರ್ಷದಲ್ಲಿ ತಿಮ್ಮರಸನು ಮಹಾಸೈನ್ಯಸಮೇತನಾಗಿ ಪಾನಗಲ್ಲು ಎಂಬ ಸ್ಥಳದ ಮೂಲಕ ಕೊಂಡವೀಡಿಗೆ ಹಾದುಹೋಗುತ್ತಿರುವಾಗ ಸದರುದ್ದಿ ನನು ಆತನನ್ನು ಇದಿರಿಸಿದನು. ಆಗ ತಿಮ್ಮರಸನು ನಿರುಪಮಾನ ಪೌರುಷ ವನ್ನು ತೋರಿಸಿ ಅವನನ್ನು ಸೋಲಿಸಿ ಸದರುದ್ದೀನನನ್ನೂ ಅವನ ಹೆಂಡತಿ ಮಕ್ಕಳನ್ನೂ ಸೆರೆಹಿಡಿದು ವಿಜಯನಗರಕ್ಕೆ ಕರೆದುಕೊಂಡು ಹೋದನು. ಆಗ ಕುತುಬ್‌ಷಾಹಿ ದೊರೆಯು ತನ್ನ ಬಲಭುಜದಂತಹ ಸೇನಾಪತಿಯು ಶತ್ರು ಹಸ್ತಗತನಾದುದರಿಂದ ಬಹಳವಾಗಿ ವ್ಯಸನಪಟ್ಟು ಮಲಮಲಖಾನನಿಗೆ ಆ ಅಧಿಕಾರವನ್ನು ಕೊಟ್ಟು ವಿಜಯನಗರದಮೇಲೆ ಮುಯ್ಯ ತೀರಿಸಿಕೊ ಳ್ಳಬೇಕೆಂದು ಸಮಯನೋಡುತ್ತಿದ್ದನು ರಾಮಯನು ಈ ಸಂಧಿಯನ್ನು ತಿಳಿದು ಗೋಲಕೊಂಡಕ್ಕೆ ಹೋಗಿ ಮಹಮ್ಮದೀಯ ರಾಜ್ಯಗಳು ಏಕೀಭ ವಿಸಿ ವಿಜಯನಗರವನ್ನು ನಾಶಪಡಿಸುವುದು ಬಹಳ ಒಳ್ಳೆಯದೆಂದು ಅನೇಕ ವಿಧವಾಗಿ ಬೋಧಿಸಿದನು, ಕುತುಬ್‌ಪಾಹಿಯು ಈ ಬೋಧನೆಗೆ ಒಳಗಾಗಿ ಶಾಯೂರುದುರ್ಗದಲ್ಲಿ ನಡೆಯುತ್ತಿದ್ದ ಸಭೆಗೆ ಮಲಮಲಖಾನನನ್ನು ಕಳುಹಿಸಿದ್ದನು. ಈತನು ತಿಮ್ಮರಸನ ವಿಷಯವಾಗಿಯ ಕೃಷ್ಣ ದೇವ
ಪುಟ:ರಾಯಚೂರು ವಿಜಯ ಭಾಗ ೧ .djvu/೨೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.