೧೧೨ ಕರ್ಣಾಟಕಗ್ರಂಥಮಾಲೆ @ m ರಾಮಯಮಂತ್ರಿಯು ಮೊದಲು ಬಹಳ ಸಂದೇಹಪಟ್ಟನು. ಆದರೆ ಮುಕ್ತಾಂಬೆಯು ಬಹಳ ಪ್ರಜ್ಞಾವಂತಳಾಗಿದ್ದುದರಿಂದ ಧೈಯ್ಯ ತಂದು ಕೊಂಡು ಆಕೆಯು ತಿಳಿಸಿದ್ದಂತೆ ಐನನಿಗೆ, “ ಖಾನ್ ಸಾಹೇಬರೇ ! ತಾವು ಹೇಳಿದಮಾತಿಗೆ ಮುಕ್ಕಾಂಬೆಯು ಒಪ್ಪಿರುವಳು. ತನ್ನ ಸದ್ಗುಣಗಣ ಗಳನ್ನೂ ಅತಿಶಯ ಸೌಂದಠ್ಯವನ್ನೂ ನಾನು ವರ್ಣಿಸಿದಾಗಿನಿಂದಲೂ ತನ್ನಲ್ಲಿ ಆಕೆಗೆ ಅನುರಾಗವು ಬಲವಾಗಿ ಬೇರೂರಿರುವ್ರದು' ಎಂದು ಹೇಳಿದನು. - ಈ ಮಾತುಗಳನ್ನು ಖಾನನ ಕೇಳಿ ಅತ್ಯಂತಆನಂದವನ್ನು ಹೊಂದಿ, “ ಮಂತ್ರಿಪರೇ ! ತಮ್ಮ ದಯೆ ಎಂದಿದ್ದರೆ ನಮ್ಮಂತಹವರ ಕಾರ್ಯವು ಕೈಗೂಡದಿರುವುದೇ ? ತಮಗೆ ಯುದ್ಧದಲ್ಲಿ ತಪ್ಪದೆ ಸಹಾಯಮಾಡುವೆನು. ಈ ಕಾಠ್ಯವನ್ನು ತಾವು ಮಾಡಿಕೊಟ್ಟು ದರಿಂದ ತನಗೆ ಈಗ ಕೊಡುವ ಬಹುಮಾನವನ್ನು ಸ್ವೀಕರಿಸಬೇಕು” ಎಂದುಹೇಳಿ ಅದನ್ನು ಕೊಟ್ಟು ರಾಮಯನನ್ನು ಕಳುಹಿಸಿದನು. ಬಳಿಕ ತನಗೆ ಮುಕ್ಕಾಂಬೆಯ ಸಮಾಚಾರ ವನ್ನು ತಿಳಿಸಿದ ಫಕೀರನಿಗೆ ಆ ಶುಭಸಮಾಚಾರವನ್ನು ತಿಳಿಸದೆ :3*ುವುದು ಯುಕ್ತವಲ್ಲ ಎಂದು ಭಾವಿಸಿ ಆತನನ್ನು ಒಬ್ಬ ಸೇವಕನಮಲಕ fರೆಯಿಸಿ ಕೊಂಡನು ಆತನುಬಂದು ಉಚಿತಾಸನದಲ್ಲಿ ಕುಳಿತುಕೊಂಡವೆ. ೯೯ ಓ ಮಹಮ್ಮದೀಯ ಕುಲವಿವರೇ : ತಮ್ಮ ಕೋರಿಕೆಯು ಸಫಲವಾದುದರಿಂದ ಈಗ ನನಗೆ ಬಹಳ ಸಂತೋಷವಾಯಿತು. ನಾನು ಹಿಂದೆಯೇ ಹೇಳಿದಂತೆ ತಾವುರಾಜ್ಯ ಧಿಪತಿಗಳಾಗುವಿರಿ, ಆದರೆ ನಮಗೆ ಒಂದು ಮಾತು ಹೇಳಬೇಕಾ ಗಿದೆ. ಸದ್ಯದಲ್ಲಿ ತಾವು ಪ್ರಯಾಣವನ್ನು ನಿಲ್ಲಿಸಿ, ಆ ಯುವತಿಯನ್ನು ಸಂದರ್ಶಿಸಿ ಆಕೆಯೊಡನೆ, ಮಾತನಾಡಿ ಏನಾದಬಹುಮಾನಗಳನ್ನು ಮಾಡಿ ಆಕೆಗೆ ಸಂತೋಷವನ್ನುಂಟುಮಾಡಿರಿ ಹಾಗಿಲ್ಲದಿದ್ದರೆ ಮಕ್ಕಾಂ ಬೆಯು ತಮ್ಮನ್ನು ಬಂಟರೆಂದು ಭಾವಿಸಬಹುದು' ಎಂದು ಫಕೀರನು ಹೇಳಿದನು.
ಪುಟ:ರಾಯಚೂರು ವಿಜಯ ಭಾಗ ೧ .djvu/೨೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.