ರಾಯರು ವಿಜಯ ೧೧4 MMmmmmmmmmmmm ಈ ಮಾತುಗಳನ್ನು ಕೇಳಿ ಖಾನನಿಗೆ ಬಹಳ ಸಂತೋಷವಾಯಿತು. ಫಕೀರನು ಹೇಳಿದಂತೆ ಮಾಡುವುದು ಆವಶ್ಯಕವೆಂದು ಭಾವಿಸಿ ಆತನನ್ನು ಮರಾದೆಯಿಂದ ಕಳುಹಿಸಿಕೊಟ್ಟು ಮುಕ್ತಾಂಬೆಯೊಡನೆ ಹೇಗೆ ಮಾತನಾಡ ಬೇಕೆಂಬುದನ್ನು ತನ್ನ ಮನಸ್ಸಿನಲ್ಲಿಯೇ ಗುಣಿಸಿಕೊಳ್ಳುತ್ತಿದ್ದನು. ಈಸಿ ಇಪ್ಪತ್ತೇಳನೆಯ ಪ್ರಕರಣ. ಕುತೋರ್ಥಂ ಹೃದಯಂಕರ್ಣಃ | ಕಾನೂಂಧಸ್ಯ ಮೃಗಾಧಿವಾ || ಶದರ ಪರಿನಷ್ಟೊಪಿ ಯೋಯಂ • ಮೌಖಾದಿಹಗ: 8 || ರಾಜಕೀಯ ವ್ಯವಹಾರವು ಒಹಳವಾಗಿದ್ದುದರಿಂದಲೂ ಅನಂಗನೇ ನೆಗೆ ಅಸ್ವಸ್ಥತೆಯಾಗಿ ಇದ್ದುದರಿಂದ ತೋಫಖಾನನು ಆಕೆಯ ಮನೆಗೆ ಕೆಲವುದಿನಗಳ ವರೆಗೆ ಹೋಗಲಿಲ್ಲ. ಒಂದು ದಿನ ಆಕೆಯ ನೆನಪು ಉಂ ಟಾಗಿ ಆಕೆಯನ್ನು ನೋಡಬೇಕೆಂದು ತಾನೊಬ್ಬನೇ ಹೊರಟನು. ಅನಂಗ ಸೇನೆಯು ಇದ್ದ ಕೊಟಡಿಯ ಬಳಿಗೆ ಬಂದು ಅಲ್ಲಿದ್ದ ದ್ವಾರಪಾಲಕರನ್ನು ಕುರಿತು, “ ನೀವು ಜಾಗರೂಕರಾಗಿ ನೋಡಿಕೊಳ್ಳುತ್ತಿರುವಿರಷ್ಟೆ ?” ಎಂದು ಎಚ್ಚರಿಸಿ ಕೊಟಡಿಯೊಳಕ್ಕೆ ಪ್ರವೇಶಿಸಿದನು. ಆಗ ಅನಂಗಸೇನೆಯು ನಿದ್ದೆ ಹೋಗುತ್ತಿದ್ದಳು. ಮಾಲತಿಯು ಸಮೀಪದಲ್ಲಿ ಕಾದುಕೊಂಡು ಕುಳಿತಿ ದ್ದಳು, ಆ ಖಾನನನ್ನು ನೋಡಿದಕೂಡಲೆ ಮೂಲತಿಯು ಮೇಲುಮುಸುಕ ನ್ನು ಹಾಕಿಕೊಂಡು ನಿಂತಳು. ಖಾನನು ದ್ವಾರಬಂಧದ ಎರಡು ಪಕ್ಕಗ ಳಲ್ಲೂ ಎರಡು ಕೈಗಳನ್ನು ಇಟ್ಟು ಕೊಂಡು ಹೊರಗೆ ನಿಂತು ನೋಡುತ್ತಿ 0 ದಿ m
ಪುಟ:ರಾಯಚೂರು ವಿಜಯ ಭಾಗ ೧ .djvu/೨೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.