೧೧೫ vvyyyyyyyyyyy wwwwwx రియల్టీ రవజ ಬಾನನಿಗೆ ಮಾಲತಿಯ ಗೋಳಾಟವನ್ನು ಕೇಳಿ ಮನಸ್ಸು ಕರಗಿದಂತಾಯಿತು. ಆಗ ಖಾನನು, “ ನಾನು ನಿಮ್ಮ ಯೋಗಕ್ಷೇಮವನ್ನು ಇದುವರೆಗೂ ವಿಚಾ ರಿಸಿಕೊಳ್ಳದೆ ಇದ್ದುದರಿಂದ ಕ್ಷಮಿಸಬೇಕು. ಕಾರಭಾರವು ಬಹಳ ವಾಗಿ ದ್ದುದರಿಂದ ಇತ್ತ ಕಡೆಬರಲು ಬಿಡುವೇಸಿಕ್ಕಲಿಲ್ಲ, ಇದಕ್ಕಾಗಿ ಬಹಳ ವ್ಯಸನ ಪಡುತ್ತಿದೇನೆ. ಕಳೆದುಹೋದಮಾತಿಗಾಗಿ ವ್ಯಸನಪಟ್ಟು ಏನು ? ಈಗ ನಿನ್ನ ಸ್ನೇಹಿತರಿಗೆ ಹೇಗಿದೆ ? ತಿಳಿಸು, ಆಕೆಗೆ ಔಷಧವನ್ನು ಕೊಡುವುದಕ್ಕೆ ವೈದ್ಯ ಶ್ರೇಷ್ಟನನ್ನು ಕರೆಯಿಸುವನು. ವ್ಯಸನಪಡಬೇಡ. ” ಎಂದು ಸವಾ ಧಾನ ಪಡಿಸಿದನು. “ ಖಾನ್ ಸಾಹೇಬರೇ ! ವೈದ್ಯರು ಇಲ್ಲಿಗೆ ಬರಬೇಕಾದುದಿಲ್ಲ. ನಮ್ಮ ಮಿತ್ರಳ ದಿವ್ಯ ಶರೀರವನ್ನು ನೋಡುವುದಕ್ಕೆ ಪ್ರತಿಯೊಬ್ಬನೂ ಅರ್ಹ ನಲ್ಲ. ತಾವ್ರ ಅಪ್ಪಣೆಕೊಡುವುದಾದರೆ ನಾನೇ ವೈದ್ಯನಒಳಗೆ ಹೋಗಿ ಔಷಧವನ್ನು ತಂದುಕೊಡುವೆನು. ” ಎಂದು ಬಹಳ ವಿನಯದಿಂದ ಮಾಲ ತಿಯು ಕೇಳಿಕೊಂಡಳು. ಖಾನನಿಗೆ ಮನಸ್ಸು ಕರಗಿ ಹೋಗಿದ್ದುದರಿಂದ ಅವನು “ ಹಾಗಾದರೆ ನಾನು ಒಂದು ಕಾಗದವನ್ನು ಬರೆದುಕೊಡುವೆನು, ಆದನ್ನು ನನ್ನ ವೈದ್ಯನಿಗೆ ಕೊಡು. ನಿನ್ನನ್ನು ದ್ವಾರಪಾಲಕೆರೆ ತಡೆಯದಂತೆ ಏರ್ಪಾಡುಮಾಡುವೆನು.” ಎಂದುಹೇಳಿದನು. ಆತನು ಹೀಗೆ ಮಾತನಾಡುತ್ತಿದ್ದಾಗಲೇ ದ:ಖಿ ಕುತ್ತು ಮೂಲತಿಯು ಅನಂಗಸೇನೆಯ ಬಳಿಗೆ ಹೋಗಿ ಆಕೆಯ ಕೈನಾಡಿ ಯನ್ನು ಪರಿಶೀಲಿಸಿ ಮತ್ಯ ಗೋಳಾಡುತ್ತಾ ತಾನನನ್ನು ನೋಡಿ, “ ಖಾನ್ ಶ್ರೀ ಪರೇ ! ರೋಗವು ಬಲಿಯುತ್ತಿದೆ. ನಮ್ಮ ಸ್ನೇಹಿತಳು ಆರಿಹೋಗುತ್ತಿರುವ ದೀಪದಂತಿರುವಳು. ಇನ್ನು ಒಂದೆರಡು ದಿನಗಳಿಗಿಂತ ಹೆಚ್ಚಾಗಿ ಬದುಕಲಾಬಳು. ತಾವು ಹೇಳಿದ ವೈದ್ಯರು ಅನುಭವಕಾರಿಗಳ ಪೈ ? ಆದರೂ ತನ್ನ ದ್ವಾರಪಾಲಕರ ಕಾಟವು
ಪುಟ:ರಾಯಚೂರು ವಿಜಯ ಭಾಗ ೧ .djvu/೨೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.