ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಕರ್ಣಾಟಕ ಗ್ರಂಥಮಾಲೆ MAmonwwwn ದನು. ಇದನ್ನು ನೋಡಿ ಮಾಲತಿಯು “ ದಯಮಾಡಿಸಿ, ಈಪೀಠವನ್ನು ಅಲಂಕರಿಸಿ ” ಎಂದು ಅತ್ಯಾದರದಿಂದ ಹೇಳಿದಳು. ಈ ಹಿಂದಿನಂತೆ ವಿರಸವಾಗಿ ಮಾತನಾಡದೆ ಹೀಗೆ ಆದರದಿಂದ ತನ್ನನ್ನು ಬರಮಾಡಿಕೊಂಡಕಾರಣ ತನ್ನ ಕಾಲ್ಯವು ಕೈಗೂಡಿತೆಂದು ಭಾವಿಸಿ “ ಓ ಯುವತಿದ್ದಳೇ ! ನೀನೂ ಕುಳಿತುಕೊ ; ನಿಂತಿದ್ದರೆ ಕೋಮುಲೆಯಾದ ನಿನಗೆ ಆಯಾಸವಾಗು ವುದು. ನೀವು ಕ್ಷೇಮವಾಗಿರುವಿರಾ? ನಮ್ಮ ದಾನಿಗಳು ಆಹಾರವನ್ನು ಹೊತ್ತು ಹೊತ್ತಿಗೆ ತಂದುಕೊಡುತ್ತಿರುವರಲ್ಲವೆ ? ಇಲ್ಲದಿದ್ದರೆ ನನಗೆ ತಿಳಿಸು ಅವರನ್ನು ಈಗಲೇ ಶಿಕ್ಷಿಸುವೆನು, ನಿನ್ನ ಸ್ನೇಹಿತರು ನಿದಿ ಸುತ್ತಿರುವರೋ ? ' ಎಂದು ಸರಸವಾಗಿ ಸಂಭಾಸಿಸತೊಳಗಿದನು. “ ಖಾನವರರೇ ! ಆಹಾರವಿಷಯದಲ್ಲಿ ನಮಗೆ ಸ್ವಲ್ಪವೂ ಲೋಪ ವಿಲ್ಲ, ತಮ್ಮ ಪರಿಪೂರ್ಣದಯವು ನನ್ನ ಮೇಲಿರುವಾಗ ನಮಗೆ ಯಾವುದ ಕೇನುಕಡಿಮೆ? ಆದರೆ ಈಕೆಗೆ ಬಹಳ ದಿವಸಗಳಿಂದ ರೋಗವು ಬಾಧಿಸುತ್ತಿರು ವುದು, ಅದು ಚೆನ್ನಾಗಿ ವಾಸಿಯಾಗುವಂತೆಯೂ, ಮರುಕಳಿಸದಂತೆಯ ಈಕೆಗೆ ಔಷಧವನ್ನು ತರಬೇಕೆಂದು ಪ್ರಯತ್ನಿಸಿದರೆ ತಮ್ಮ ಭಟರು ನನ್ನನ್ನು ಹೊರಕ್ಕೇಬಿಡುವುದಿಲ್ಲ. ಈಗಲಾದರೂ ಸರಿಯಾದ ಔಷಧವನ್ನು ಕೊಡಿಸ ದಿದ್ದರೆ ಈಕೆಯು ಉಳಿದುಕೊಳ್ಳುವುದು ಕಷ್ಟ, ನಮ್ಮ ಈ ದುರವಸ್ಥೆಯನ್ನು ತಮಗೆ ತಿಳಿಸಬೇಕೆಂದು ಎಷ್ಟೆಷ್ಟು ಕೇಳಿಕೊಂಡರೂ ಅವರು ನಮ್ಮ ಪ್ರಾರ್ಥ' ನೆಯನ್ನು ನಿರಾಕರಿಸಿದರು ಚಕ್ರವರ್ತಿಗೆ ಪ್ರಿಯಳಾಗಿದ್ದ ಈಕೆಯು ಔಷಧ ವಿಲ್ಲದೆ ಸಾಯಬೇಕಾಗಿ ಬಂದಿರುವುದಲ್ಲಾ ! ಎಂದು ವ್ಯಸನಪಡುತ್ತಿರುವೆನು. ಈಗ ತಾವೇಬಂದುದರಿಂದ ಈ ಔಷಧವನ್ನು ತರುವುದಕ್ಕೆ ಹೊರಕ್ಕೆ ಹೋಗಿ ಬರಲು ನನಗೆ ಅಪ್ಪಣೆಯಾಗಬೇಕು ” ಎಂದು ಮಾಲತಿಯು ಕಣ್ಣೀರು ಸುರಿಸಿದಳು. ಏಯಬಾಂಧವರು ಸತ್ತರೂ ಶೋಕಿಸದ, ಯುದ್ಧರಂಗದಲ್ಲಿ ವೈರಿವೀರರಿಗೆ ಸಿಕ್ಕಿ ಪುಣಬಿಡುವುದಕ್ಕೆ ಸಿದ್ದವಾಗಿ ಇದ್ದ ಕಠಿನಹೃದಯನಾದ