ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hY) ಕರ್ಣಾಟಕ ಗ್ರಂಥಮಾಲೆ wwwnanww/ ಖಾನ-CC ಲಲನಾಮಣಿ! ಎಂತಹ ಮಾತನಾಡಿದೆ! ಈ ನಿನ್ನ ಸೇವಕನ ಇದಿರಿಗೆ ಹೀಗೆ ಮಾತನಾಡಬಾರದು, ರಾಮುಯಮಂತ್ರಿಯು ಮೊದಲೇ ನಿನ್ನನ್ನು ಸೋಮೇಶ್ವರಪುತ್ರನನ್ನಾಗಿ ಮಾಡದೆ ಮುಕ್ತಾಂಬೆಯೆಂದು ತಿಳಿಸಿದ್ದರೆ ಇಷ್ಟು ಹೊತ್ತಿಗೆ ನಿನ್ನ ಕಾಠ್ಯವನ್ನು ಮಾಡಿಕೊಡುತ್ತಿದ್ದನು. ಈಗಲೂ ಕಾಠ್ಯವು ಕೆಟ್ಟು ಹೋಗಿಲ್ಲ, ನಾನು ನಮ್ಮ ರಾಜರವರನ್ನು ಪ್ರೋತ್ಸಾಹಿಸಿ ನಿನ್ನ ಶತ್ರುವನ್ನು ಜಯಿಸಿ ನಿನ್ನ ಮನೋರಥವನ್ನು ಈಡೇ ರಿಸುವನು. ಆಗ ನೀನು ಈತನಿಗೆ ಏನು ಬಹುಮಾನವಾಡುವೆಯೋ ? ೨೨ ಯುವತಿ-“ ಯವನಶ್ರೇಷ್ಠರೇ ! ನೀವು ಸತ್ಯಸಂಧರಾಗಿ ಈ ಪ್ರತಿ ಜ್ಞೆಯನ್ನು ನೆರವೇರಿಸಿದರೆ ನೀವು ಕೋರಿದ ಬಹುಮಾನವನ್ನು ಕೂಡು ವೆನು. ಅಥವಾ.ಮುಚ್ಚು ಮರೆಯೇಕೆ ? ತಪ್ಪದೇ ನಿನ್ನನ್ನು ವರಿಸುವೆನು, ೦೨ - ಖಾನ- ಮುಕ್ತಾಂಬೆ ! ನನಗೆ ಬಹಳ ಸಂತೋಷವಾಯಿತು. ನಿನ್ನ ಮೃದುಮಧುರವಚನಾಮೃತವನ್ನು ಪಾನಮಾಡಿ ನನ್ನ ಶ್ರವಣೇಂದ್ರಿಯವು ಧನ್ಯವಾಯಿತು. ಇನ್ನು ನಿನ್ನ ದಿವ್ಯಸುಂದರವದನಾರವಿಂದವನ್ನು ಒಂದು ಸರಿ ತೋರಿಸಿ ನನ್ನ ನೇಂದ್ರಿಯಕ್ಕೆ ಆನಂದವನ್ನುಂಟುಮಾಡು, ೨ ಯುವತಿ-“ ನಮ್ಮವರಲ್ಲಿ ವಿವಾಹಕ್ಕೆ ಮುಂಚೆ ವರನನ್ನು ಪ್ರತ್ಯ ಕ್ಷವಾಗಿ ನೋಡುವುದು ನಿಷಿದ್ಧವಲ್ಲಾ ! ನನ್ನ ಕುಲಾಚಾರವನ್ನು ಮೀರು ವುದಕ್ಕೆ ನನ್ನ ಮನಸ್ಸು ಒಡಂಬಡದಿರುವುದು, ? ಖಾನ-“ ಮಹಮ್ಮದೀಯನನ್ನು ಮದುವೆಯಾಗಬೇಕಂದಿರುವ ನಿನಗೆ ನಿನ್ನ ಕುಲಾಚಾರದ ಗೋಜೇಕ ? ಆದರೂ ಈ ವಿಷಯದಲ್ಲಿ ಬಲಾತ್ಕಾರ ಮಾಡಲಾರೆನು, ನಿನ್ನ ಹಸ್ತಕಮಲವನ್ನಾದರೂ ಒಂದುಸಲ ಮುತ್ತಿಟ್ಟು ಕೊಳ್ಳಲು ಅವಕಾಶಕೊಡು. ಇದು ನಿನ್ನ ಕುಲಾಚಾರಕ್ಕೆ ವಿರುದ್ಧವಲ್ಲ ವಷ್ಟೆ ?99