ರಾಯರು ವಿಜಯ ೧೪೩ wmmmmma ಯುವತಿ-“ ಅಲ್ಲದೆ ಮತ್ತೇನು ? ವಿವಾಹಕ್ಕೆ ಪೂರದಲ್ಲಿ ವಧುವಿನ ಹಸ್ತವನ್ನು ವರನು ಗ್ರಹಿಸಬಾರದು. ಹಾಗೆ ವಧೂವರರು ಒಬ್ಬರೊಬ್ಬರ ಕೈಯನ್ನು ಹಿಡಿದುಕೊಳ್ಳುವುದರಿಂದಲೇ ನಮ್ಮವರಲ್ಲಿ ಮದುವೆಗೆ ಪಾಣಿಗ್ರ ಹಣವೆಂಬ ಹೆಸರುಬಂದಿದೆ. ಆದರೂ ಬಾರಿಬಾರಿಗೂ ನಿಷೇಧಿಸುತ್ತಿದ್ದರೆ ನಿಮ್ಮ ಮನಸ್ಸು ಚಿಕ್ಕವಾಗುವುದಲ್ಲಾ ಎಂದು ವ್ಯಸನಪಟ್ಟು ಒಪ್ಪಿಕೊಳ್ಳು ವನು, ನಿನ್ನ ಅಭಿಲಾಷೆಯನ್ನು ತೀರಿಸಿಕೊಳ್ಳಬಹುದು ಎಂದು ತನ್ನ ಅವಕುಂಠನವನ್ನು ಹಾಕಿಕೊಂಡೇ ಕೈಯನ್ನು ಮುಂದಕ್ಕೆ ನೀಡಿದಳು. ಆಗ ಖಾನನು ಪರಮಾನಂದಭರಿತನಾಗಿ ವಿನಯದಿಂದ ಮುಂದಕ್ಕೆ ಬಂದು ತನ್ನ ಹಸ್ತದಿಂದ ಆಕೆಯ ಹಸ್ತವನ್ನು ಹಿಡಿದುಕೊಂಡನು. ಆದರೆ ಆ ಕೈಯು ಮೃದುವಾಗಿರದೆ' ಅತಿ ಕಠಿನವಾಗಿತ್ತು, ಆಯುಧವಿದ್ಯಾ ಪರಿಶ್ರಮದಿಂದ ಆ ಕಠಿನತೆಯುಂಟಾಗಿತ್ತೆಂದು ಭಾವಿಸಿಕೊಂಡನು. ಅವನು ಆ ಕೈಯನ್ನು ಮುತ್ತಿಡಲು ಬಗ್ಗಿ ದಾಗ ಬಹಳ ಉದ್ದವಾಗಿ ಬೆಳೆದಿದ್ದ ಖಾನನ ಗಡ್ಡವು ಆ ವ್ಯಕ್ತಿಯ ಕಾಲಿನಬಳಿಗೆ ಬಂತು, ಆಗ ಖಾನನು .ಅನುರಾಗಪೂರಿತವಾದ ಏನೋ ಮಾತನ್ನು ಆಡುತ್ತಿದ್ದನು. ಆ ಗಡ್ಡವನ್ನು ಆವ್ಯಕ್ತಿಯು ಎಡಗಾಲಿಂದ ಮೆಟ್ಟ ಕೊಂಡಳು. ಅಷ್ಟರಲ್ಲಿ ಒಳಗಿನಿಂದ ವಿಜಯಸಿಂಹನು ಬಂದು ತನ್ನ ಕೈಯಲ್ಲಿದ್ದ ಕತ್ತಿಯಿಂದ ಖಾನನ ಗಡ್ಡವನ್ನು ಕತ್ತರಿಸಿಬಿಟ್ಟು ಖಾನನಿಗೆ ತನ್ನ ಎಡಗಾಲಿನ ಸ್ಪರ್ಶಸುಖವನ್ನೂ ನಾಲ್ಕಿ ದು ಸರಿ ಉಂಟುಮಾಡಿಕೊಟ್ಟನು. ಆ ಖಾನನಿಗೆ ಬಹಳ ಅವಮಾನವಾ ದರೂ, ತನ್ನ ಪ್ರಾಣವಾದರೂ ಉಳಿದಿತಲ್ಲಾ ಎಂದು ಬಹಳವಾಗಿ ಆನಂದಿ ಸುತ್ತಾ, ಬಂದ ದಾರಿಯನ್ನು ಹಿಡಿದು ಬೇಗನೆ ಹೊರಕ್ಕೆ ಹೊರಟನು. ಆಗ ಅಲ್ಲಿ ಕಾದಿದ್ದ ಫಕೀರನು ಆನಂದದಿಂದ ಖಾನನನ್ನು ಸವಿಾಪಿಸಿ, “ ತಮ್ಮ ಅಭಿಲಾಷೆಯು ನೆರವೇರಿತೆ ? ?” ಎಂದು ಕೇಳಿದನು. ಖಾನನ ಕಥೆಯನ್ನು ಈ೪ ಫಕೀರನು, “ ಆಹಾ ! ಎಂತಹ ಪ್ರಮಾದವಾಯಿತು. ಮುಕ್ಕಾಂಬ
ಪುಟ:ರಾಯಚೂರು ವಿಜಯ ಭಾಗ ೧ .djvu/೨೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.