CWy ಬ ಕರ್ಣಾಟಕ ಗ್ರಂಥಮಾಲೆ ಯು ಹೇಳಿದ ಮಾತುಗಳನ್ನು ನಿಜವೆಂದು ನಂಬಿದ್ದೆನಲ್ಲಾ ! ಹೀಗೆ ಎಲ್ಲಾ ದರೂ ಉಂಟೆ ! ಸದ್ಯಕ್ಕೆ ಅಲ್ಲಾ ದಯೆಯಿಂದ ತನ್ನ ಪ್ರ-ಗಳು ಉಳಿದು ಕೊಂಡುವಲ್ಲಾ ಅದಕ್ಕಾಗಿ ಸಂತೋಷಪಡಬೇಕಾಗಿದೆ. ” ಎಂದನು. ಖಾನ-" ಮಹಾತ್ಮರೇ ! ನಿಮ್ಮಲ್ಲಿ ಸ್ವಲ್ಪವಾದರೂ ಲೋಪವಿಲ್ಲ, ಮುಕ್ಕಾಂಬೆಯು ಒಬ್ಬ ಪುರುಷನಿಗೆ ತನ್ನ ವೇಷವನ್ನು ಹಾಕಿ ಹೀಗೆ ಮೋ ಸಮಾಡಿದಳು. ಅಯ್ಯೋ ! ಈ ಅವಮಾನವನ್ನು ಸಹಿಸುವುದು ಹೇಗೆ ?! ಫಕೀರ- ಮುಕ್ತಾಂಬೆಯನ್ನು ರುದ್ರದೇವನು ಪ್ರೀತಿಸುತ್ತಿದ್ದ ನೆಂದು ಕೇಳಿದ್ದೆ. ಆ ದುರಾತ್ಮನೇ ವೇಷವನ್ನು ಹಾಕಿಕೊಂಡು ನಿಮಗೆ ಈ ಅವಮಾನವನ್ನು ಉಂಟುಮಾಡಿರಬೇಕು. ನಿಮ್ಮ ಸಹಾಯವನ್ನೆ ಬೇಡುತ್ತಾ ನಿಮಗೇ ಹೀಗೆ ಅವಮಾನವನ್ನುಂಟುಮಾಡಿದುದು ಆಶ್ಚಯ್ಯ. ಅಂತಹವರಿಗೆ ತಾವು ಹೇಗೆ ಸಕಾ ಖುಮಾಡಲು ಒಪ್ಪುವಿರೋ ? ನನಗೆ ಬೇರೆ ತಿಳಿಯದು, ಖಾನ- ನಾನು ಅಂತಹ ಹುಚ ನ ವಾದರೂ ಉಸಿರಿರುವವರೆಗೂ ಈ ನೀತುಗೆ ಸಹಾ ಯವನ್ನು ಮಾಡುವು ದಿಲ್ಲ. ಸಹಾಯವನ್ನು ಮಾಡಗೊಡಿಸುವ್ರದೂ ಇಲ್ಲ. ಈ ಹೊತ್ತಿನ ಸಂಗತಿಯನ್ನು ಯಾರೊಡನೆಯ ಹೇಳ ತಿಕ್ಕ ಆವಶ್ಯಕವಿಲ್ಲ. ತಾವು ನನ್ನ ವಿಷಯದಲ್ಲಿ ಪಟ್ಟ ಶ್ರಮಕ್ಕಾಗಿ ತಮಗೆ ಬಹಳ ಕೃತಜ್ಞನಾಗಿರುವೆನು. ನನಗೆ ಅಪ್ಪಣೆಯನ್ನು ಕೊಡಿ, ನಾನು ಗೋಲ್ಕೊಂಡಕ್ಕೆ ಹೋಗು ವೆನು,” ಎಂದುಹೇಳ ಖಾನನು ಹೊರಟುಹೋದನು. ಆಗ ಮುಕ್ಕಾಂಬೆಯು ಒಳಗಿನಿಂದ ಬಂದು ನಾಚಿಕೆಯಿಂದ ತನ್ನವೇ ಪವನ್ನು ತೆಗೆದು ಹಾಕುತ್ತಿದ್ದ ಶಂಕರರೆಡ್ಡಿಯನ್ನು ನೋಡಿ (“ಅಯ್ಯಾ ನೀನು ಖಾನನೊಡನೆ ನಡೆಯಿಸಿದ ಸಂಭಾಷಣೆಯು ಅತಿ ವಿಚಿತ್ರವಾಗಿತ್ತು, ನನ ಗಾಗಿ ನಿಮ್ಮಿಬ್ಬರಿಗೂ ಬಹಳ ಶ್ರಮವಾಯಿತು,” ಎಂದು ಶಂಕರರೆಡ್ಡಿಯನ್ನೂ
ಪುಟ:ರಾಯಚೂರು ವಿಜಯ ಭಾಗ ೧ .djvu/೨೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.