ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ರಾಯರು ವಿಜಯ ೧೪೯ ಸೇನೆಯನ್ನು ಬಹು ಪ್ರಯಾಸದಿಂದ ಇಲ್ಲಿಗೆ ಕರತಂದುದು ಏಕೆ? ಈ ಪತ್ರವು ಕೃತಕವಾಗಿದ್ದರೂ ಇರಬಹುದು ” ಎಂದು ಖಾನನು ಹೇಳಿದನು.
- ದುರ್ಗಾಧಿಪತೀ ! ತಾವು ನಂಬಿ, ನಂಬದಿರಿ. ಈ ಸಂದರ್ಭದಲ್ಲಿ ನಾನು ಕೆಲವು ಮಾತುಗಳನ್ನು ಆಡಬೇಕಾಗಿದೆ. ಗಮನವಿಟ್ಟು ಕೇಳಿರಿ. ನೀತಿವಿಶಾರದನೂ ಬುದ್ಧಿವಂತನೂ ಆದ ರಾಮಯಮಂತ್ರಿಯು ಸ್ವಜಾತಿ ಯವರಲ್ಲಿ ವಿರೋಧವನ್ನುಂಟುಮಾಡಿಕೊಂಡು ಹಿಂದುಗಳ ಕುಲಕ್ಕೆ ಶತ್ರು ಗಳಾಗಿರುವ ನನ್ನ ಮರೆಯನ್ನು ಹೋಗುತ್ತಿದ್ದಾನೆಯೇ ? " ಎಂದು ಫಕೀ ರನು ಕೇಳಿದನು.
ಹೀಗೆ ಇವರಿಗೆ ಸಂಭಾಷಣೆ ನಡೆಯುತ್ತಿದ್ದಾಗ ಒಬ್ಬ ದ್ವಾರಪಾಲ ಕನು ತರೆಯಿಂದ ಬಂದು “ ಮಹಾಪ್ರಭುಗಳೇ ! ಗೋಲ್ಕೊಂಡದ ಸೇನಾ ಪತಿಯಕಡೆಯಿಂದ ಒಬ್ಬ ಚಾರನು ಬಂದಿರುವನು. ಅಪ್ಪಣೆಯಾದರೆ ಒಳಕ್ಕೆ ಬಿಡುವೆನು ಎಂದು ಹೇಳಿ ಆತನ ಅನುಜ್ಞೆಯನ್ನು ಪಡೆದು ಆ ಚಾರ ನನ್ನು ಒಳಕ್ಕೆ ಬಿಟ್ಟನು. ಅವನು ತಾನು ತಂದಿದ್ದ ಒಂದು ಕಾಗದವನ್ನು ಖಾನನಿಗೆ ಸಮರ್ಪಿಸಿದನು. ಅದರಲ್ಲಿ ಹೀಗೆ ಬರೆದಿತ್ತು :-
- ರಾಯೂರುದುರ್ಗ ಧೀಕ್ಷರರಾದ ತೋಫಖಾನರ ಸನ್ನಿಧಾ ನಕ್ಕೆ, ವಿಜ್ಞಾಪನೆಗಳು.
ಗೋಮುಖವ್ಯಾಘ್ರದಂತಿರುವ ಆ ಬ್ರಾಹ್ಮಣನು ಹೇಗೆ ತಮಗೆ ವಿಶ್ವಾಸಪಾತ್ರನಾದನೋ ನನಗೆ ತಿಳಿಯದು, ಆ ದುರಾತ್ಮನು ನನಗೆ ಒಬ್ಬಾಕೆಯನ್ನು ಮದುವೆಮಾಡಿಕೊಡುವೆನೆಂದು ಒಪ್ಪಿಸಿ, ನನಗೆ ಸಹಿಸಲು ರದಷ್ಟು ಅವಮಾನವನ್ನುಂಟುಮಾಡಿ ಕಳುಹಿಸಿದನು. ಹಾಗೆ ಪರಾಭೂತ ನಾದ ನಾನು ತಮ್ಮನ್ನು ನೋಡುವುದಕ್ಕೆ ಮುಖವಿಲ್ಲದೆ, ಹಾಗೆಯೇ ಹೊರಟುಬಂದೆನು. ತಮಗೂ ಇಂತಹ ಅಪಾಯವು ಬಾರದಿರಲಿ ಎಂದು ಇ ಟ